Advertisement

ಹಾಲು ಕ್ಯಾನುಗಳೊಂದಿಗೆ ಹೈನುಗಾರರ ಪ್ರತಿಭಟನೆ

04:26 PM Dec 09, 2019 | Team Udayavani |

ಮುಳಬಾಗಿಲು: ಹಾಲಿನ ಉಷ್ಣಾಂಶ 28 ಡಿಗ್ರಿ ಬರಲಿಲ್ಲವೆಂದು ಚಿಕ್ಕಗೊಲ್ಲಹಳ್ಳಿ ಗ್ರಾಮದಲ್ಲಿ ಉತ್ಪಾದನೆಯಾಗುವ 6 ಕ್ಯಾನ್‌ ಹಾಲನ್ನೇ ತೆಗೆದುಕೊಳ್ಳದ ಸಂಘದ ಕಾರ್ಯವೈಖರಿ ಖಂಡಿಸಿ ಹಾಲು ಉತ್ಪಾದಕರು ಭಾನುವಾರ ಮುಂಜಾನೆ ಡೇರಿಗೆ ಬೀಗ ಜಡಿದು ಹಾಲಿನ ಕ್ಯಾನುಗಳೊಂದಿಗೆ ಪ್ರತಿಭಟನೆ ನಡೆಸಿದರು.

Advertisement

ಆರೋಪವಿದು: ಈ ಸಂದರ್ಭದಲ್ಲಿ ಮಾತನಾಡಿದ ಹಾಲು ಉತ್ಪಾದಕರು, ತಾಲೂಕಿನ ಬೈರಕೂರು ಹೋಬಳಿ, ಮುದಿಗೆರೆ ಮ.ಗಡ್ಡೂರು ಗ್ರಾಪಂ ವ್ಯಾಪ್ತಿಯ ಚಿಕ್ಕಗೊಲ್ಲಹಳ್ಳಿ ಗ್ರಾಮದಲ್ಲಿ ಹಲವಾರು ರೈತರು ಹಸು ಸಾಕುತ್ತಿದ್ದಾರೆ.

ಅಂತೆಯೇ ಹಲವು ವರ್ಷಗಳ ಹಿಂದೆ ಕೋಲಾರಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಿಸಲಾಗಿದೆ. ಪ್ರಸ್ತುತ ಸುಮಾರು 60 ರೈತರು ಮುಂಜಾನೆ ಮತ್ತು ಸಂಜೆ ತಲಾ 6 ಕ್ಯಾನ್‌ ಹಾಲನ್ನು ಹಾಕುತ್ತಿದ್ದಾರೆ.

ಗ್ರಾಮದಲ್ಲಿ ಹಲವಾರು ಜನ ಹಾಕುವ ಹಾಲು ಡಿಗ್ರಿಗೆ ಬರುತ್ತಿಲ್ಲದ ಕಾರಣ ಕಳೆದ ಶನಿವಾರ ಸಂಜೆ ಒಕ್ಕೂಟದಿಂದಲೇ ಒಬ್ಬ ಹಾಲು ಪರೀಕ್ಷಕರು ಗ್ರಾಮಕ್ಕೆ ಆಗಮಿಸಿ ಪ್ರತಿ ಹಸುವಿನ ಬಳಿಯೂ ತೆರಳಿ ಹಾಲು ಕರೆದು ಪರೀಕ್ಷಿಸಿ ಬಂದಷ್ಟು ಡಿಗ್ರಿಗೆ ಹಾಲು ಸಂಗ್ರಹಿಸಿ ಒಕ್ಕೂಟಕ್ಕೆ 6 ಕ್ಯಾನ್‌ ತೆಗೆದುಕೊಂಡು ಹೋಗಿದ್ದರು. ಆದರೆ ಅಲ್ಲಿ ಮತ್ತೂಮ್ಮೆ ಪರೀಕ್ಷಿಸಿದಾಗ ಹಾಲು ಡಿಗ್ರಿಗೆ ಬರಲಿಲ್ಲವೆಂದು 3 ಕ್ಯಾನ್‌ ಹಾಲನ್ನು ಡೇರಿಗೆ ವಾಪಸ್‌ ಕಳುಹಿಸಿದ್ದರು.

ಬೀಗ ಜಡಿದು ಪ್ರತಿಭಟನೆ: ಅಂತೆಯೇ ಭಾನುವಾರ ಮುಂಜಾನೆಯೂ ಉತ್ಪಾದಕರು ಹಾಲಿಗೆ ನೀರು ಬೆರೆಸದೇ ಹಸುವಿನಿಂದ ಕರೆದ ಹಾಲನ್ನು ಹಾಗೆಯೇ ಸಂಘಕ್ಕೆ ಹಾಕಲು ಹೋದಾಗ ಅಧ್ಯಕ್ಷ ಯಲ್ಲಪ್ಪ, ಕಾರ್ಯದರ್ಶಿ ಗುರುಮೂರ್ತಿ ಮತ್ತು ಪರೀಕ್ಷಕರು ಹಾಲನ್ನು ಪರೀಕ್ಷಿಸಿದಾಗ 24 ಡಿಗ್ರಿ ಬರುತ್ತಿದೆ. ಹಾಲು ತೆಗೆದುಕೊಳ್ಳಲು 28 ಡಿಗ್ರಿ ಬರಬೇಕಿರುವುದರಿಂದ ಹಾಲನ್ನು ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದರಿಂದ ಮುಂಜಾನೆ 6 ಕ್ಯಾನ್‌ ಹಾಲು ಮತ್ತು ರಾತ್ರಿ ಒಕ್ಕೂಟದಿಂದ 3 ಕ್ಯಾನ್‌ ಹಾಲು ವಾಪಸ್‌ ಬಂದಿದೆ. ಹಾಲು ಹಾಗೇಉಳಿದಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಡೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next