Advertisement

ಜನ ವಿರೋಧಿ ಕಾಯ್ದೆ ಹಿಂಪಡೆಯಲು ಆಗ್ರಹ !

06:19 PM Mar 06, 2021 | Team Udayavani |

ಬಳ್ಳಾರಿ: ಕೇಂದ್ರ ಸರ್ಕಾರ ಬಂಡವಾಳ ಶಾಹಿಗಳ ಹಿತಕ್ಕಾಗಿ ಮತ್ತು ಜನಸಾಮಾನ್ಯರಿಂದ ಹಣವನ್ನು ಲೂಟಿ ಹೊಡೆಯುವ ಸಲುವಾಗಿ ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ. ಈ ಕಾಯ್ದೆಗಳನ್ನು ಹಿಂಪಡೆಯುವ ಸಲುವಾಗಿ ಮಾ.10 ರಂದು ದೇಶಾದ್ಯಂತ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಸ್‌ಯುಸಿಐ (ಸಿ) ಪಕ್ಷದ ರಾಜ್ಯ ಸೆಕ್ರೆಟರಿಯಟ್‌ ಸದಸ್ಯ ಕೆ.ಸೋಮಶೇಖರ್‌ ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಆರ್ಥಿಕ ಸಂಕಷ್ಟ ಎಂದು ರೈತರು, ಬಡವರು, ಜನಸಾಮಾನ್ಯರಿಗೆ ನೀಡುತ್ತಿದ್ದ ಸಬ್ಸಿಡಿ, ಆಹಾರ ಧಾನ್ಯದವನ್ನು ಖಡಿತ ಮಾಡಲಾಗುತ್ತಿದೆ. ಬೇಳೆ, ಸಕ್ಕರೆ, ಅಡುಗೆ ಎಣ್ಣೆ ಮೊದಲಾದವನ್ನು ನಿಲ್ಲಿಸಿದೆ. ಒಂದು ಕಡೆ ಜನರಿಗೆ ನೀಡುವುದನ್ನು ನಿಲ್ಲಿಸಿ ಮತ್ತೂಂದೆಡೆ ಅಡುಗೆ ಅನಿಲ, ತೈಲ ಬೆಲೆ ಹೆಚ್ಚಿಸಿ ಬಡಜನರ ಹೊಟ್ಟೆ ಮೇಲೆ ಬರೆ ಎಳೆಯ ತೊಡಗಿದೆ. ರೈತರನ್ನು ಕಾರ್ಪೊರೇಟ್‌ ಮಾಲೀಕರ ಹಿಡಿತಕ್ಕೆ ಸಿಲುಕಿಸುವ ಕಾನೂನು ಜಾರಿಗೆ ತಂದು ದೇಶದ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಜನರ ಆದಾಯ ಕುಸಿಯುತ್ತಿದ್ದರೆ ಮುಕೇಶ್‌ ಅಂಬಾನಿ ಆದಾಯ ತಿಂಗಳಲ್ಲಿ 2.5 ಲಕ್ಷ ಕೋಟಿ ಇದ್ದುದು 5 ಲಕ್ಷ ಕೋಟಿಗೆ ಹೆಚ್ಚಿದೆ. ಅದೇ ರೀತಿ ಅದಾನಿ ಆದಾಯವೂ ಹೆಚ್ಚಳವಾಗಿದೆ. ಅದಕ್ಕಾಗಿ ಕಾರ್ಪೊರೇಟ್‌ ಪರವಾದ ನೀತಿಗಳನ್ನು ವಿರೋಧಿಸಲೆಂದು ಮಾ. 19ರಂದು ಬೆಂಗಳೂರಿನಲ್ಲಿ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದವರು ವಿವರಿಸಿದರು.

ಕೇಂದ್ರ ಸರ್ಕಾರ ಕೃಷಿ ಕ್ಷೇತ್ರವನ್ನು ಸಹ ಖಾಸಗೀಕರಣ ಮಾಡಲು ಮುಂದಾಗಿದೆ. ಸಬ್ಸಿಡಿಯನ್ನು ಕಡಿತಗೊಳಿಸಿರುವ ಕೇಂದ್ರ ಸರ್ಕಾರ ರಾಸಾಯನಿಕ ಗೊಬ್ಬರ, ಬೀಜಗಳ ಬೆಲೆಯನ್ನು ದುಬಾರಿ ಮಾಡಿ, ಕಾಳಸಂತೆಕೋರರಿಗೆ ಅನುಕೂಲವಾಗುವಂತೆ ಮಾಡಲಾಗಿದೆ ಎಂದವರು ಆರೋಪಿಸಿದರು.

ರೈಲು ಓಡಾಟವನ್ನು ಸಹಜ ಸ್ಥಿತಿಗೆ ಮರಳಿಸಿ ಪ್ರಯಾಣಿಕ ರೈಲುಗಳನ್ನು ಓಡಿಸಬೇಕು. ರಾಜ್ಯದ ವಸತಿಹೀನರಿಗೆ ನಿವೇಶನ ಹಂಚಿಕೆ ಮಾಡಲು ಸೂಕ್ತ ನೀತಿಯನ್ನು ರೂಪಿಸಬೇಕು. ಆಶಾ, ಅಂಗನವಾಡಿ, ಬಿಸಿಯೂಟ ಮೊದಲಾದ ಸ್ಕೀಮ್‌ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಕೇಂದ್ರದ ಕರಾಳ ಕೃಷಿ ಕಾಯಿದೆಗಳನ್ನು ರಾಜ್ಯದಲ್ಲಿ ಜಾರಿಗೆ ತರಬಾರದು. ಕಾರ್ಮಿಕ ವಿರೋ ಧಿ ಕಾನೂನುಗಳನ್ನು ಸಹ ಜಾರಿ ಮಾಡಬಾರದು. ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದವರು ಪ್ರತಿಭಟನೆಯಲ್ಲಿ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಎ.ದೇವದಾಸ್‌, ಎಂ.ಎನ್‌.ಮಂಜುಳಾ, ಡಿ.ನಾಗಲಕೀÒ$¾, ಡಾ| ಪ್ರಮೋದ್‌,  ರಾಧಾಕೃಷ್ಣ ಉಪಾಧ್ಯಾ, ಶಾಂತಾ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next