Advertisement

ಬೇಡಿಕೆ ಈಡೇರುವವರೆಗೆ ಧರಣಿ

09:00 AM Jan 24, 2019 | |

ಬೀಳಗಿ: ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಕಳೆದ ಏಳು ದಿನಗಳಿಂದ ಧರಣಿ ನಡೆಸುವ ಮೂಲಕ ಪ್ರತಿಭಟಿಸುತ್ತಿದ್ದರೂ ಇದುವರೆಗೆ ನಮ್ಮ ಬೇಡಿಕೆ ಈಡೇರುವ ಸ್ಪಷ್ಟ ಲಕ್ಷಣ ಗೋಚರಿಸುತ್ತಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೆ ಧರಣಿ ಸತ್ಯಾಗ್ರಹದಿಂದ ಹಿಂದೆ ಸರಿಯುವುದಿಲ್ಲ ಎಂದು ಕೈಮಗ್ಗ ನೇಕಾರ ಸಂಘಟನೆಯವರು ತಿಳಿಸಿದ್ದಾರೆ.

Advertisement

ಪಟ್ಟಣದ ಕೆಎಚ್‌ಡಿಸಿ ಕಚೇರಿ ಎದುರು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕೈಮಗ್ಗ ನೇಕಾರ ಸಂಘಟನೆಯ ನೂರಾರು ಜನ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಬುಧವಾರ ಏಳನೇ ದಿನಕ್ಕೆ ಕಾಲಿಟ್ಟಿದೆ.

ಈ ವೇಳೆ ಮಾತನಾಡಿದ ಪ್ರಮುಖರು, ಧರಣಿ ಸತ್ಯಾಗ್ರಹ ಸ್ಥಳಕ್ಕೆ ಈಗಾಗಲೇ ಸ್ಥಳೀಯ ಶಾಸಕ ಮುರುಗೇಶ ನಿರಾಣಿ ಸೇರಿದಂತೆ ಹಲವಾರು ಜನಪ್ರತಿನಿಧಿಗಳು ಮತ್ತು ಗಣ್ಯರು ಭೇಟಿ ನೀಡಿ ಧರಣಿಗೆ ಬೆಂಬಲ ಸೂಚಿಸುವ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿರುವುದು ಅಭಿನಂದನೀಯ. ನೇಕಾರರ ಈ ದು:ಸ್ಥಿತಿಗೆ ಮೂಲ ಕಾರಣರಾದ ಕೆಎಚ್‌ಡಿಸಿ ನಿಗಮದ ಎಂಡಿ ಸ್ಥಳಕ್ಕೆ ಆಗಮಿಸಿ ಯಾವುದೇ ಭರವಸೆ ನೀಡದಿರುವುದು ನೋವಾಗಿದೆ. ನೇಕಾರರ ಸಮಸ್ಯೆಗೆ ಕಾರಣರಾದ ನಿರ್ಲಕ್ಷ್ಯ ಧೋರಣೆಯ ಎಂಡಿ ವರ್ಗಾವಣೆಯಾಗಬೇಕು. ನೇಕಾರರಿಗೆ ಬಿಮ್‌ ಹಾಗೂ ನೂಲು ಪೂರೈಕೆ ಮಾಡಬೇಕು ಮತ್ತು ದುಡಿಮೆಗೆ ತಕ್ಕಂತೆ ಸೂಕ್ತ ವೇತನ ನೀಡಬೇಕು. ಹಾಗೂ ಇದುವರೆಗೆ ಆದ ಹಾನಿಯನ್ನು ಭರಿಸಬೇಕೆಂದು ಪ್ರತಿಭಟನಾ ನಿರತ ನೇಕಾರ ಮುಖಂಡರು ಒತ್ತಾಯಿಸಿದರು.

ಜ. 25ರೊಳಗೆ ನಿಗಮದ ಎಂಡಿ ಅವರು ಸ್ಥಳಕ್ಕಾಗಮಿಸಿ ಸ್ಪಷ್ಟ ಭರವಸೆ ನೀಡದೇ ಹೋದಲ್ಲಿ ಮುಂದಿನ ಹೋರಾಟದ ಸ್ವರೂಪ ಬೇರೆಯಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ನೇಕಾರ ಮುಖಂಡ ದೇವೇಂದ್ರ ಕೋಟಿ, ಶಿವಲಿಂಗಪ್ಪ ಬಾದರದಿನ್ನಿ, ಗಂಗಪ್ಪ ಬಾಡಗಿ, ಶೇಖಪ್ಪ ಕುಂದರಗಿ, ಭಾಗವ್ವ ಮಾದರ, ಇಂದ್ರವ್ವ ಚಲವಾದಿ, ಶಂಕ್ರಪ್ಪ ಕೊಣ್ಣೂರ, ನಾಗಪ್ಪ ಬಾಡಗಿ, ಗೀತಾ ಚಲವಾದಿ, ಮಂಜುಳಾ ಮಾದರ, ಚಂದ್ರಕಲಾ ಚಲವಾದಿ, ಶಂಕ್ರಪ್ಪ ಜಾಡಗೌಡರ, ಶಿವಪ್ಪ ಬಾಳಿಗಿಡದ, ಸುರೇಶ ಕೊಪ್ಪಳ, ಮಲ್ಲವ್ವ ಸಿಂಹಾಸನ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next