Advertisement

ತೆರಿಗೆ ಹಿಂಪಡೆಯಲು ಒತ್ತಾಯಿಸಿ ಪ್ರತಿಭಟನೆ

12:37 PM Dec 14, 2019 | Team Udayavani |

ಬನಹಟ್ಟಿ: ಸಹಕಾರಿ ಸಂಸ್ಥೆಗಳಿಗೆ ವಿಧಿಸಿರುವ ತೆರಿಗೆಗಳನ್ನು ಕೈಬಿಡಬೇಕೆಂದು ಒತ್ತಾಯಿಸಿ ಶುಕ್ರವಾರ ಕರ್ನಾಟಕ ಕೋ-ಆಪ್‌ರೇಟಿವ್‌ ಸೊಸೈಟಿಸ್‌ ಅಸೋಸಿಯೇಶನ್‌ ನೇತೃತ್ವದಲ್ಲಿ ರಬಕವಿ-ಬನಹಟ್ಟಿ ತಾಲ್ಲೂಕಿನ ಎಲ್ಲ ಸಹಕಾರಿ ಸಂಸ್ಥೆಗಳನ್ನು ಬಂದ್‌ ಮಾಡುವ ಮೂಲಕ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

Advertisement

ರಬಕವಿ-ಬನಹಟ್ಟಿ ತಾಲೂಕು ವ್ಯಾಪ್ತಿಯ ನೂರಾರು ಸಹಕಾರಿ ಸಂಘಗಳ ಸದಸ್ಯರು, ನಿರ್ದೇಶಕರು ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿರಬಕವಿಯ ವಿರಕ್ತಮಠದಿಂದ ತಹಶೀಲ್ದಾರ್‌ ಕಚೇರಿವರೆಗೂ ಸುಮಾರು 2 ಕಿಮಿ ನಷ್ಟು ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಯಿತು. ಹಟಗಾರ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿ ಸಂಜಯ ಜವಳಗಿ ಮಾತನಾಡಿ, ಸಹಕಾರ ಸಂಸ್ಥೆಗಳ ಮೇಲೆ ಆದಾಯ ತೆರಿಗೆ, ಟಿಡಿಎಸ್‌ ಹಾಗು ಜಿಎಸ್‌ಟಿ ವಿಧಿಸಿರುವುದು ಸಹಕಾರ ಸಂಸ್ಥೆಗಳ ಬೆಳವಣಿಗೆಗೆ ತೊಡಕನ್ನುಂಟು ಮಾಡಿದೆ. ಸಹಕಾರ ಸಂಸ್ಥೆಗಳ ಅಭಿವೃದ್ಧಿಯಲ್ಲಿ ತೀವ್ರ ಹಿನ್ನಡೆಯುಂಟಾಗುತ್ತಿದ್ದು, ಸಹಕಾರ ಕ್ಷೇತ್ರದಲ್ಲಿ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ 52 ಸಾವಿರಕ್ಕೂ ಅಧಿಕ ಸಹಕಾರ ಸಂಸ್ಥೆಗಳ ಅಭಿವೃದ್ಧಿ ಕುಂಠಿತಗೊಂಡಿದೆ. ಇವುಗಳನ್ನೇ ನಂಬಿರುವ ಲಕ್ಷಾಂತರ ಉದ್ಯೋಗಿಗಳ ಬದುಕು ಅತಂತ್ರವಾಗುತ್ತಿದೆ ಎಂದರು.

ರಬಕವಿ-ಬನಹಟ್ಟಿ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಗ್ರೇಡ್‌-2 ತಹಶೀಲ್ದಾರ್‌ ಎಸ್‌.ಬಿ. ಕಾಂಬಳೆಯವರಿಗೆ ಮನವಿ ಸಲ್ಲಿಸಲಾಯಿತು. ಮಲ್ಲಿಕಾರ್ಜುನ ನಾಶಿ, ವಿರುಪಾಕ್ಷಪ್ಪ ಕೊಕಟನೂರ, ಮಲ್ಲಿಕಾರ್ಜುನ ಸಾಬೋಜಿ, ಗಂಗಪ್ಪ ಮಂಟೂರ, ಚಿದಾನಂದ ಗಾಳಿ, ನೀಲಕಂಠ ಮುತ್ತೂರ, ಗೂಳಪ್ಪ ಮೊಳೆಗಾಂವಿ, ಮಲ್ಲಿಕಾರ್ಜುನ ಬೆಳಗಲಿ, ಉದಯ ಜಿಗಜಿನ್ನಿ, ಎಸ್‌.ಜಿ. ಸಾಬೋಜಿ, ರಾಜು ಮಂಡಿ, ಶ್ರೀಶೈಲ, ಶಾಂತಾ, ರೇಖಾ, ರಜನಿ ಶೇಠೆ, ಕಮಲಾ, ಸಂಗಯ್ಯ, ಪ್ರಕಾಶ, ಈರಣ್ಣ, ರಾಜು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next