Advertisement

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ 5ರಂದು ಪ್ರತಿಭಟನೆ

12:37 PM Jul 03, 2022 | Team Udayavani |

ಯಾದಗಿರಿ: ನ್ಯಾಯಬಲೆ ಅಂಗಡಿ ಮಾಲೀಕರ ವಿವಿಧ ಬೇಡಿಕೆ ಈಡೇರಿಕೆಗಾಗಿ ಜು.5ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ ಹಾಗೂ ಆ.8ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್‌ ಪತ್ರಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ಸರ್ಕಾರಿ ಪಡಿತರ ವಿತರಕರ ಸಂಘ ಜಿಲ್ಲಾಧ್ಯಕ್ಷ ಆರ್‌. ಮಹಾದೇವಪ್ಪ ಹೇಳಿದರು.

Advertisement

ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತ ಸರ್ಕಾರದ ಹಣಕಾಸು ಸಚಿವಾಲಯ ರಚಿಸಿರುವ ವಿಶ್ವ ಆಹಾರ ಕಾರ್ಯಕ್ರಮದ ವರದಿ ಆಧಾರದ ಮೇಲೆ ಭಾರತ ಸರ್ಕಾರ ಪ್ರತಿ ಕ್ವಿಂಟಲ್‌ಗೆ 440 ರೂ. ಮಂಜೂರು ಮಾಡುವ ಶಿಫಾರಸು ಮುಂದೂಡಿರುವ ಬಗ್ಗೆ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ನಡೆಸುತ್ತಿರುವ ದೇಶದ ಎಲ್ಲ ಮಾರಾಟಗಾರರಿಗೆ ವಿಶ್ವ ಆಹಾರ ಕಾರ್ಯಕ್ರಮ ಶಿಫಾರಸು ಮಾಡಿದ ಪ್ರತಿ ಕ್ವಿಂಟಲ್‌ಗೆ ಆಹಾರ ಪದಾರ್ಥಗಳಿಗೆ 440 ರೂ. ಕಮಿಷನ್‌ ಮೊತ್ತ ಕೇಂದ್ರ ಸರ್ಕಾರ ಅನುಮತಿ ಕೊಡುವಂತೆ ಒತ್ತಾಯಿಸಿದರು.

ಅಕ್ಕಿ, ಗೋಧಿ, ಸಕ್ಕರೆಯಂತಹ ಆಹಾರ ಪದಾರ್ಥಗಳಲ್ಲಿ ಕ್ವಿಂಟಲ್‌ ಗೆ ಒಂದು ಕೆ.ಜಿ ನಿರ್ವಹಣೆ ನಷ್ಟ ನೀಡುವ ಒಪ್ಪಂದದ ಆಧಾರದ ಮೇಲೆ ಇದನ್ನು ಎಲ್ಲ ರಾಜ್ಯಗಳಲ್ಲಿ ತಕ್ಷಣವೇ ಜಾರಿಗೊಳಿಸಬೇಕು. ಎಲ್ಲ ರಾಜ್ಯಗಳ ಪಡಿತರ ಅಂಗಡಿಗಳಲ್ಲಿ ದೇಶದ ಹೆಚ್ಚಿನ ಜನಸಂಖ್ಯೆಗೆ ಆಹಾರದ ಜೊತೆಗೆ ತೈಲ, ಬೇಳೆ, ಸಕ್ಕರೆ ಹಾಗೂ ದಿನನಿತ್ಯಕ್ಕೆ ಬೇಕಾದ ಆಹಾರ ಪದಾರ್ಥ ಅನುಮತಿಕೊಡಬೇಕು. ದೇಶದ ಎಲ್ಲ ಜಿಲ್ಲೆಗಳಲ್ಲಿ ಇರುವ ವಿತರಕರ ಮೂಲಕ ಗ್ರಾಹಕರಿಗೆ ವಿತರಿಸುವ ಎಲ್‌ಪಿಜಿ ಗ್ಯಾಸ್‌, ಕೆಲವು ಗ್ರಾಹಕರನ್ನು ಪಡಿತರ ಅಂಗಡಿಗಳೊಂದಿಗೆ ಜೋಡಿಸಲು ಮತ್ತು ಎಲ್‌ಪಿಜಿ ಸಿಲಿಂಡರ್‌ ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು. ಇದು ಪಡಿತರ ಅಂಗಡಿಗಳ ಕಾರ್ಯಸಾಧ್ಯತೆ ಹೆಚ್ಚಿಸುತ್ತದೆ ಎಂದ ಅವರು, ಪ್ರತಿಭಟನೆಯಲ್ಲಿ ಜಿಲ್ಲೆಯಿಂದ ಸುಮಾರು 200-250 ಪಡಿತರ ವಿತರಕರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಮಣ್ಣ ಕಲ್ಲದೇವನಹಳ್ಳಿ, ಅನೀಲಕುಮಾರ್‌, ಶ್ರೀಮಂತ ಚಿನ್ನಾಕಾರ್‌, ಅಮೀನರೆಡ್ಡಿ, ಹೋನ್ನಪ್ಪ ಯಡ್ಡಳ್ಳಿ, ಶರಣಪ್ಪ ಚಾಮನಳ್ಳಿ, ಶರಣು ದಾಸನಕೇರಿ, ಶಿವಣ್ಣ ಬಡಿಗೇರ, ಚೆನ್ನಪ್ಪ ಸಾಹುಕಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next