ಬಾಗಲಕೋಟೆ: ಮರಣ ಹೊಂದಿದ ಕುರಿಗೆ ನೀಡುತ್ತಿರುವ ಪರಿಹಾರವನ್ನು ಕೂಡಲೇ ಮುಂದುವರಿಸಬೇಕು ಎಂದುಒತ್ತಾಯಿಸಿ ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳದಿಂದ ಗುರುವಾರ ಪ್ರತಿಭಟನೆ ನಡೆಸಿಜಿಲ್ಲಾ ಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘದ ರಾಜ್ಯಾಧ್ಯಕ್ಷ ಪಂಡಿತರಾವ್ ಚಿದ್ರಿ ಮಾತನಾಡಿ, ರಾಜ್ಯದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆ ಉತ್ತೇಜಿಸಲು ಕುರಿಗಾರರಿಗೆ ಅವಶ್ಯವಿರುವ ಆರ್ಥಿಕನೆರವು, ಮೇವಿನ ಸಮರ್ಪಕ ಬಳಕೆ, ಪಾಲನೆ, ರೋಗನಿವಾರಣೆ ವಿವಿಧ ರೀತಿಯ ನಿರ್ವಹಣೆಗೆ ಅವಶ್ಯವಿರುವ ಮಾರ್ಗದರ್ಶನ ಹಾಗೂ ವೈದ್ಯಕೀಯ ಸೇವೆಗಾಗಿ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆಗಳ ಸಾಕಾಣಿಕೆದಾರರ ಸಂಘಗಳು ಸ್ಥಾಪನೆಯಾಗಿವೆ.
ಹಿಂದಿನ ಸರ್ಕಾರ ಇದಕ್ಕಾಗಿ ಮೃತಪಟ್ಟ ಕುರಿಗೆ 5 ಸಾವಿರ ರೂ. ಪರಿಹಾರ ನೀಡುತಿತ್ತು. ಆದರೆ, ಈಗಿನ ಸರ್ಕಾರ ಅದನ್ನು ರದ್ದು ಮಾಡಿದೆ. ಇದರಿಂದ ಕುರಿ ಸಾಕಾಣಿಕೆದಾರರಿಗೆ ಅನ್ಯಾಯ ಮಾಡಿದಂತಾಗಿದೆ. ಕೂಡಲೇ ಮತ್ತೇ ಪರಿಹಾರವನ್ನು ನೀಡಲು ಸಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಕುರಿಗಾರರ ಜೀವನೋಪಾಯಕ್ಕಾಗಿ ಅವಲಂಬಿಸಿರುವ ಕುರಿಗಳನ್ನು ಮೇಯಿಸಲು ಸ್ವಂತ ಜಮೀಜು ಇಲ್ಲದಿರುವುದರಿಂದ ಅರಣ್ಯ ಪ್ರದೇಶ ಅವಲಂಬಿತರಾಗಿದ್ದಾರೆ. ಅರಣ್ಯ ಪ್ರದೇಶದಲ್ಲಿ ಯಾವುದೇ ಗಿಡಮರಗಳಿಗೆ ಹಾನಿಯಾಗದಂತೆ ಹಾಗೂ ಅರಣ್ಯ ನಾಶವಾಗದಂತೆ ಕುರಿಗಳನ್ನು ಮೇಯಿಸಲು ಅನುಮತಿ ನೀಡಬೇಕು.
ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಕುರಿ ಮೇಕೆಗಳಿಗೆ ಜಂತುನಾಶಕ ಔಷಧಿ ನೀಡಲಾಗುತ್ತಿತ್ತು. ಈಗ ಪಶು ಆಸ್ಪತ್ರೆ ಮೂಲಕ ವಿತರಿಸುತ್ತಿದ್ದು, ಇದರಿಂದ ಸರಿಯಾದ ಸಮಯದಲ್ಲಿ ಕುರಿಗಾರರಿಗೆ ಔಷ ಧಿಯನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ. ಔಷ ಧಿಗಳು ಕುರಿ ಸಂಘದಿಂದಲೇ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕುರಿಗಾರರಿಗೂ ಪತ್ತಿನ ಸಹಕಾರ ಸಂಸ್ಥೆಗಳಿಂದ ಶ್ಯನ್ಯ ಬಡ್ಡಿ ದರದಲ್ಲಿ ಸಾಲ ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದರು. ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘದ ಮಹಾಮಂಡಳದ ನಿರ್ದೇಶಕರಾದ ಬಿ.ಎಸ್. ಮೊಕಾಶಿ, ಸಂಗಮೇಶ ವಾಲಿಕಾರ, ಕಮತಗಿಯ ದುರ್ಗಾ ಕುರಿ ಸಂಗೋಪನೆ ಭೀಮಪ್ಪ ಕೆಂಗಾರ, ಹೆರಕಲ್ ಸಿದ್ದೇಶ್ವರ ಕುರಿ ಸಂಗೋಪನೆ ಅಧ್ಯಕ್ಷ ಮಲ್ಲಪ್ಪ ವಾಲಿಕಾರ, ಆನಂದ ಮೊಕಾಶಿ, ಪರಪ್ಪ ವಗ್ಗ, ಪರಶುರಾಮ ಧರೆಗೊಂಡ, ಸಿದ್ದಪ್ಪ ಕಟಗಿ, ಮುನಿಯಪ್ಪ ಹುಣಶಿಕಟ್ಟಿ ಉಪಸ್ಥಿತರಿದ್ದರು.