Advertisement

ಮೋಜು-ಮಸ್ತಿಗಾಗಿ ಅನಿರ್ಧಿಷ್ಟಾವಧಿ ಧರಣಿ: ಗ್ರಾಪಂ ಸದಸ್ಯ ಮೂರ್ತಿ ಗಂಭೀರ ಆರೋಪ

04:50 PM Mar 09, 2022 | Team Udayavani |

ಬೇತಮಂಗಲ: ಗ್ರಾಮದಲ್ಲಿ ಯಾವುದೇ ಬೇಧ ಭಾವ ತಾರತಮ್ಯ ಇಲ್ಲದೆ ಅನ್ಯೋನ್ಯತೆ ಯಿಂದ ಜೀವನ ಮಾಡುತ್ತಿರುವ ನಮ್ಮ ನಡುವೆ ಜಾತಿ ಧರ್ಮ ಎಂಬ ವಿಷ ಬೀಜ ಬಿತ್ತುವ ಕೆಲಸವನ್ನು ದಲಿತ ಮುಖಂಡ ಸಂದೇಶ್ ಮಾಡುತ್ತಿದ್ದಾನೆಂದು ಗ್ರಾಮ ಪಂಚಾಯಿತಿ ಸದಸ್ಯ ಎಂ.ಮೂರ್ತಿ ಗಂಭೀರ ಆರೋಪ ಮಾಡಿದರು.

Advertisement

ಕಂಗಾಡ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣ್ಣೂರು ಗ್ರಾಮದಲ್ಲಿ ಪರಿಶಿಷ್ಟರ ಸ್ಮಶಾನ ಭೂಮಿ ಹಂಚಿಕೆ ವಿಚಾರದಲ್ಲಿ ಅನಿರ್ಧಿಷ್ಟಾವಧಿ ಧರಣಿ ಕುರಿತು ಪತ್ರಿಕಾ ಹೇಳಿಕೆ ಯಲ್ಲಿ ಮಾತನಾಡಿದರು.

ಪೂರ್ವ ಕಾಲದಿಂದಲೂ ಗ್ರಾಮಸ್ಥರೆಲ್ಲರೂ ಕರೆ ಬಳಿ ಶವ ಸಂಸ್ಕಾರ ಮಾಡುತ್ತಿದ್ದೆವು ಆದರೆ ಇತ್ತೀಚೆಗೆ ಕೆರೆಯಲ್ಲಿ ನೀರು ತುಂಬಿಕೊಂಡಿತ್ತು ಆದ್ದರಿಂದ ಕಂದಾಯ ಅಧಿಕಾರಿಗಳು ಸರ್ವೇ ನಂ.62 ರಲ್ಲಿ ಎಲ್ಲಾ ವರ್ಗದ ಜನಾಂಗಕ್ಕೆ 2 ಎಕರೆ ಮಂಜೂರು ಮಾಡಲಾಗಿದೆ.

ಆದರೆ ಸಂದೇಶ್  ದಲಿತ  ಮಹಿಳೆಯರಿಗೆ ಸರ್ಕಾರದಿಂದ ಬಡವರಿಗೆ ಭೂಮಿ ಕೊಡಿಸುವ ಭರವಸೆ ನೀಡಿ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಂಡು ನಮ್ಮ ಗ್ರಾಮದಲ್ಲಿ ಅಶಾಂತಿ ಉಂಟು ಮಾಡಿ ಕೆಟ್ಟ ಹೆಸರು ತೋರುತ್ತಿದ್ದಾರೆ.

Advertisement

ಪ್ರಸ್ತುತ ಗುರುತಿಸಿದ ಜಮೀನಿನಲ್ಲಿ ರೈತರು 30 ವರ್ಷಗಳಿಂದ  ಅನುಭವದಲ್ಲಿದ್ದಾರೆ. ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಆದರೂ ಜನರಿಗೆ ಅಡ್ಡಿ ಉಂಟು ಮಾಡದೆ ಶವ ಸಂಸ್ಕಾರ ಕ್ಕೆ ಅನುವು ಮಾಡಿದ್ದರೂ ಪ್ರತಿಭಟನೆ ನಡೆಸುತ್ತಿರುವುದು ಖಂಡನೀಯ ಎಂದರು.

ಪ್ರತಿಭಟನೆ ಹೆಸರಲ್ಲಿ ಮೋಜು ಮಸ್ತಿ: ಕಳೆದ 5 ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದು, ಪ್ರತಿಭಟನಾಕರಾರು ರಾತ್ರಿ ವೇಳೆ ಮಧ್ಯಪಾನ ಸೇವಿಸಿ, ಪಬ್ ನಿಂತೆ ಕಾರಿನಲ್ಲಿ ಹಾಡುಗಳು ಹಾಕಿಕೊಂಡು ಸ್ಟೇಪ್ಸ್ ಹಾಕುತ್ತಾರೆ. ಪ್ರತಿದಿನ ಗುಂಡು ತುಂಡು ಪಾರ್ಟಿಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾವು ಪರಿಶಿಷ್ಟ ಜಾತಿ ಗ್ರಾಮ ಪಂಚಾಯಿತಿ ಸದಸ್ಯರಾದರೂ ನಮ್ಮ ಗ್ರಾಮದ ಸಮಸ್ಯೆಗೆ ನಮ್ಮ ಅನುಮತಿ ಇಲ್ಲದೆ ಮಹಿಳೆಯರಿಗೆ ಸೌಲಭ್ಯ ನೀಡುವ ಸುಳ್ಳು ಆಶ್ವಾಸನೆ ನೀಡಿ ಧರಣಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಕುಟುಂಬಗಳಲ್ಲಿ  ಗಲಾಟೆ ನಡೆಯುತ್ತಿವೆ. ಕೂಡಲೇ ಇಂತಹ ಮೋಜು ಮಸ್ತಿ ಪ್ರತಿಭಟನೆ ಕೈ ಬಿಟ್ಟು ತಮ್ಮ ದೈನಂದಿನ ಜೀವನವನ್ನು ನಡೆಸಿಕೊಳ್ಳಲು ಈ ಮೂಲಕ ತಿಳಿಸುತ್ತೇವೆ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೊಡಲೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ.

ಪ್ರತಿಭಟನೆ ಬಗ್ಗೆ ಪ್ರಶ್ನೀಸಿದ ಗ್ರಾಮದವರ ಮೇಲೆ ಸುಳ್ಳು ಅಟ್ರಾಸಿಟಿ ಪ್ರಕರಣ ದಾಖಲು ಮಾಡಲಾಗುತ್ತಿದೆ. ಸ್ಮಶಾನದಲ್ಲಿ ಗ್ರಾಮಸ್ಥರೆಲ್ಲ ರೀತಿಗೂ ಸಮಾನ ಹಕ್ಕಿದೆ ಎಂಬುದನ್ನು ಅರಿತು ಕೊಳ್ಳಬೇಕು ಎಂದರು.

ಪ್ರಸ್ತುತ ಸದರಿ ಸ್ಮಶಾನ ಭೂಮಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು ತಡೆಯಾಜ್ಞೆ ರದ್ಧಾದ ನಂತರ ಪ್ರಕರಣ ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉಪ ವಿಭಾಗಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾ ಕರಾರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮೂರ್ತಿ, ನಾಗಮಣಿ, ಚಲಪತಿ ನಾಯ್ಡು, ರಾಧಾಕೃಷ್ಣ, ವಿಜಯ್ ಕುಮಾರ್, ಕೆವಿ ಸುಬ್ಬಣ್ಣ, ಶ್ರೀನಿವಾಸ, ಶಂಕರ್, ಭಾಸ್ಕರ್ ನಾಯ್ಡು, ಸುಬ್ರಹ್ಮಣ್ಯ ನಾಯ್ಡು, ಪ್ರತಾಪ್, ಚಂದ್ರಣ್ಣ, ಡೇರಿ ಅಧ್ಯಕ್ಷ ತಿಪ್ಪಯ್ಯ ನಾಯ್ಡು, ಉಪಾಧ್ಯಕ್ಷ ನಾರಾಯಣಸ್ವಾಮಿ, ನಿರ್ದೇಶಕ ಸುಬ್ಬಯ್ಯ ಹಾಗೂ ಅನೇಕ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next