Advertisement

ದಲಿತರಿಗೆ ಕಿರುಕುಳ; ಕ್ರಮಕ್ಕೆ ಆಗ್ರಹ

07:36 PM Nov 11, 2020 | Suhan S |

ಯಾದಗಿರಿ: ನಗರದ ಸ.ನಂ. 85,86/ಅ ಜಮೀನಿನ ಮಾಲೀಕ ತಿಪ್ಪಣ್ಣ ಗೋಸಿ ಅವರಿಂದ ಸುಮಾರು 25-30 ವರ್ಷಗಳ ಹಿಂದೆ ಖರೀದಿಸಿದ ಸ್ಥಳದಲ್ಲಿ 50ಕ್ಕೂ ಹೆಚ್ಚು ಕುಟುಂಬದವರುಮನೆ ನಿರ್ಮಿಸಿಕೊಂಡಿದ್ದು ಇದೀಗಅವರ ಮಗ ಮಲ್ಲಿಕಾರ್ಜುನ ಗೋಸಿದಲಿತರಿಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಡಿಸಿಗೆ ಮನವಿ ಸಲ್ಲಿಸಿತು.

Advertisement

ನಗರದ ಮುಖ್ಯಬೀದಿಗಳ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ ಡಿಸಿ ಕಚೇರಿ ಎದುರು ಧರಣಿ ನಡೆಸಿ ದಲಿತರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಆಗ್ರಹಿಸಲಾಯಿತು. ಸ್ಥಳ ಖರೀದಿಸಿರುವ ಫಲಾನುಭವಿಗಳು ಮನೆ ನಿರ್ಮಿಸಿಕೊಂಡಿದ್ದು, ಜಮೀನು ಮಾಲೀಕರ ಮರಣದ ನಂತರ ಅವರ ಮಗ ಜಮೀನು ಖರೀದಿಸಿದವರನ್ನು ಒಕ್ಕಲೆಬ್ಬಿಸಲು ಪ್ರಾರಂಭಿಸಿದ್ದು ವಕೀಲರ ಮೂಲಕ ಕಾನೂನು ತಿಳಿವಳಿಕೆ ಪತ್ರ ಕಳಿಸುತ್ತಿದ್ದಾರೆ ಎಂದು ನೊಂದವರು ಅಳಲು ತೋಡಿಕೊಂಡರು.

ಸ್ಥಳದ ತೆರಿಗೆ ಕಟ್ಟಿ, ಪರವಾನಗಿ ಪಡೆದು ಕಟ್ಟಡ ನಿರ್ಮಿಸಿಕೊಂಡರೂ ಕಾನೂನು ಬಾಹಿರ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಹೇಳಲಾಗಿದ್ದು ಇಲ್ಲಿನ ನಿವಾಸಿಗಳು ಹಣ ನೀಡಿ ಜಮೀನು ಖರೀದಿಸಿದ್ದಾರೆ ಎಂದು ಹೇಳಿದರು. ಮನೆ ನಿರ್ಮಿಸಿಕೊಂಡ ಕುಟುಂಬಗಳಿಗೆ ರಕ್ಷಣೆ ನೀಡಿ, ದಲಿತರ ತೊಂದರೆ ನೀಡುತ್ತಿರುವ ವ್ಯಕ್ತಿ ವಿರುದ್ಧಪರಿಶಿಷ್ಟ ಜಾತಿ ದೌರ್ಜನ್ಯದಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟ ಜಿಲ್ಲಾಡಳಿತಕ್ಕೆ ಒಂದು ವಾರದ ಗಡುವು ನೀಡಿದೆ.

ಈ ವೇಳೆ ಗುರುಮಠಕಲ್‌ ಖಾಸಾಮಠದ ಶಾಂತವೀರ ಸ್ವಾಮೀಜಿ, ಮಲ್ಲಿಕಾರ್ಜುನ ಕ್ರಾಂತಿ, ಶಿವಪ್ಪ ಗಿರೆಪ್ಪನೋರ್‌, ಸೈದಪ್ಪ ಕೂಲೂರು, ತಾಯಪ್ಪ ಭಂಡಾರಿ, ಮರೆಪ್ಪ ಚಿಟ್ಟರಕರ್‌, ಮಲ್ಲಿನಾಥ ಸುಂಗಲಕರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next