Advertisement
ಹಲ್ಲೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಘಟನೆಗೆ ಕಾರಣರಾದ ಶಾಸಕ ಜೆ.ಎನ್.ಗಣೇಶ್ ಹಾಗೂ ಭೀಮ ನಾಯ್ಕರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.ಆಪರೇಶನ್ ಕಮಲದ ಮೂಲಕ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿ ಯಬೇಕು ಎಂಬ ಹುನ್ನಾರ ನಡೆಸಿದ್ದನ್ನು ವಿಫಲಗೊಳಿ ಸಲು ಶಾಸಕ ಆನಂದ ಸಿಂಗ್ ಪ್ರಯತ್ನಿಸಿದ್ದಾರೆ.ಇದಕ್ಕಾಗಿಯೇ ಅವರ ಮೇಲೆ ಹಲ್ಲೆ ನಡೆದಿದೆ ಎಂದು ಪ್ರತಿಭಟನಾ ಕಾರರು ಆರೋಪಿಸಿದರು.ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಇದೇ ವೇಳೆ, ತಾಲೂಕಿನ ಕಮಲಾಪುರದಲ್ಲಿ ಹೊಸಪೇಟೆ-ಗಂಗಾವತಿ ರಾಷ್ಟ್ರೀಯ ಹೆದ್ದಾ ರಿತಡೆದು ಪ್ರತಿಭಟನೆ ನಡೆಸಲಾಯಿತು.