Advertisement

ಪೊಲೀಸ್‌ ದಬ್ಬಾಳಿಕೆ ವಿರೋಧಿಸಿ ಪ್ರತಿಭಟನೆ

10:51 AM Mar 18, 2021 | Team Udayavani |

ತಿಪಟೂರು: ತಾಲೂಕು ಆಡಳಿತದ ನಿಷ್ಕ್ರಿಯತೆ ಹಾಗೂ ರೈತರ ಮತ್ತು ರೈತ ಹೋರಾಟಗಾರರ ಮೇಲೆಪೊಲೀಸ್‌ ದಬ್ಟಾಳಿಕೆ ವಿರೋಧಿಸಿ ಎತ್ತಿನಹೊಳೆ ಹೋರಾಟ ಸಮಿತಿ, ರೈತ-ಕೃಷಿ ಕಾರ್ಮಿಕರ ಸಂಘಟನೆ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂಪ್ರಗತಿಪರ ಸಂಘಟನೆಗಳು ನಗರದಲ್ಲಿ ಬುಧವಾರಬೃಹತ್‌ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಜನಸ್ಪಂದನ ಟ್ರಸ್ಟ್‌ ಅಧ್ಯಕ್ಷ ಹಾಗೂ ಹೋರಾಟಗಾರ ಸಿ.ಬಿ.ಶಶಿಧರ್‌ ಮಾತನಾಡಿ, ದೇಶದ ಆರ್ಥಿಕತೆಬಿಕ್ಕಟ್ಟಿನಲ್ಲಿದ್ದು, ಜನರು ಸಮಸ್ಯೆಗಳ ಸುಳಿಯಲ್ಲಿಸಿಕ್ಕಿದ್ದಾರೆ. ರೈತಪರ ಇರಬೇಕಾದ ಸರ್ಕಾರಗಳು ಬಂಡವಾಳಶಾಹಿಗಳ ಪರವಿದ್ದು, ರೈತರನ್ನು ಬೀದಿಪಾಲುಮಾಡುವ ಕೃಷಿ ಕಾಯ್ದೆಗಳು, ಕೃಷಿಭೂಮಿಭೂಸ್ವಾಧೀನ ಹಾಗೂ ಕಾರ್ಮಿಕ ಕಾಯ್ದೆಗಳು,ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗಸಮಸ್ಯೆಗಳು ಜನರನ್ನು ಜರ್ಜರಿತರನ್ನಾಗಿ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನಲ್ಲೂ ಜನಸಾಮಾನ್ಯರ ಪರ ಆಡಳಿತನಿಷ್ಕ್ರಿಯವಾಗಿದ್ದು, ರೈತಪರ ಹೋರಾಟ ವಿಷಯಗಳಲ್ಲಿ ಪೊಲೀಸ್‌ ದಬ್ಟಾಳಿಕೆ ಹಾಗೂ ಹಸ್ತಕ್ಷೇಪಹೆಚ್ಚಾಗುತ್ತಿದೆ‌. ರಾಷ್ಟ್ರೀಯ ಹೆದ್ದಾರಿಯ ಭೂಸ್ವಾಧೀನಕ್ಕೆ ಸಂಬಂಧಪಟ್ಟ ಜಮೀನಿನ ವಿವಾದಗಳು,ಪರಿಹಾರದ ಸಮಸ್ಯೆಗಳು ಪೊಲೀಸ್‌ ಠಾಣೆಯಲ್ಲಿ ಚರ್ಚೆಯಾಗುತ್ತಿರುವುದು ವಿಪರ್ಯಾಸ.

ಎತ್ತಿನಹೊಳೆ ಯೋಜನೆಯಲ್ಲಿ ತಾಲೂಕು ಆಡಳಿತ ತಲೆ ಹಾಕುತ್ತಿಲ್ಲ. ಸಂಬಂಧಪಟ್ಟ ಭೂಸ್ವಾಧೀನಅಧಿಕಾರಿ, ಎಂಜಿನಿಯರ್‌ ಇದುವರೆಗೂತಿಪಟೂರಿನ ಕಡೆ ಮುಖವನ್ನೇ ತೋರಿಸಿಲ್ಲ.ಈ ಎಲ್ಲಾ ಕೆಲಸಗಳು ಪೊಲೀಸ್‌ ಇಲಾಖೆನೇತೃತ್ವದಲ್ಲೇ ನಡೆಯುತ್ತಿವೆ. ಹಾಗಾದರೆ, ನಾಗರಿಕ ಆಡಳಿತದ ಕೆಲಸವೇನು?. ಪೊಲೀಸ್‌ ಇಲಾಖೆಯು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲುಜನರ ತೆರಿಗೆ ಹಣದಲ್ಲಿ ಕೆಲಸ ಮಾಡುವ ಇಲಾಖೆಯಾಗಿದೆ. ಭೂಮಿ ಕಳೆದುಕೊಂಡ ಸಂತ್ರಸ್ತರೈತರಿಗೆ ಸಿಕ್ಕಿದ್ದು ರಕ್ಷಣೆಯಲ್ಲ, ಪ್ರಕರಣಗಳು.ಅಕ್ರಮ ಕ್ರಷರ್‌ಗಳಲ್ಲಿ ಸಿಡಿಮದ್ದುಗಳ ಸಿಡಿತದಿಂದಜನ ಸತ್ತರೂ, ಮನೆ ಹಾಳಾದರೂ, ಕೆರೆ ಕಟ್ಟೆಗಳುನಾಶವಾದರೂ ಠಾಣೆಯಲ್ಲಿ ಇಂಥ ಗಂಭೀರಪ್ರಕರಣಗಳು ದಾಖಲಾಗಿಲ್ಲ. ಆದರೆ ಕಾನೂನುಹಾಗೂ ನ್ಯಾಯಯುತ ಹೋರಾಟಗಾರರ ವಿರುದ್ಧ ಮಾತ್ರ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಹಮ್ಮಿಕೊಳ್ಳಲಾಗುವುದು ಎಂದರು.

ಕಾಂಗ್ರೆಸ್‌ ಮುಖಂಡ ಕೆ.ಟಿ.ಶಾಂತಕುಮಾರ್‌ಮಾತನಾಡಿ, ತಾಲೂಕಿನ ಜನತೆ ತೀವ್ರವಾದಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಾಷ್ಟ್ರೀಯಹೆದ್ದಾರಿ ಅಗಲೀಕರಣ ಮತ್ತು ಬೈಪಾಸ್‌ನಿರ್ಮಾಣಕ್ಕೆ ರೈತರ ಜಮೀನನ್ನುವಶಪಡಿಸಿಕೊಳ್ಳಲಾಗುತ್ತಿದೆ. ರೈತರಿಗೆ ಪುಡಿಗಾಸುಆಸೆ ತೋರಿಸಿ, ಪರಿಹಾರ ನೀಡುವ ಮುನ್ನವೇ ರಸ್ತೆನಿರ್ಮಾಣ ಮಾಡಿ, ಕಂಟ್ರಾಕ್ಟರ್‌ಗಳನ್ನು ಉದ್ಧಾರಮಾಡಲು ತಾಲೂಕು ಆಡಳಿತ ಸಜ್ಜಾಗಿದೆ. ಎತ್ತಿನಹೊಳೆ ಯೋಜನೆಯಲ್ಲಿ ಮತ್ತೆ ಭೂಸ್ವಾಧೀನ ಪಡಿಸಿಕೊಳ್ಳಲಾಗುತ್ತಿದ್ದರೂ ಮೇಲಧಿಕಾರಿಗಳುರೈತರ ಜೊತೆ ಸಭೆಗಳನ್ನೇ ಮಾಡಿಲ್ಲ. ತಾಲೂಕುಆಡಳಿತವೂ ಸಹ ಗುತ್ತಿಗೆದಾರರ ಪರನಿಂತಿದೆಯೆ ವಿನಹ ರೈತರ ಪರ ನಿಂತಿಲ್ಲ. ರೈತಹೋರಾಟಗಾರರ ವಿರುದ್ದದ ಪ್ರಕರಣಗಳನ್ನುಹಿಂತೆಗೆದುಕೊಳ್ಳದಿದ್ದಲ್ಲಿ ಹೋರಾಟ ಉಗ್ರ ಸ್ವರೂಪದಲ್ಲಿರಲಿದೆ ಎಂದು ತಿಳಿಸಿದರು.

Advertisement

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷಆನಂದ್‌ಪಟೇಲ್‌, ಆರ್‌ಕೆಎಸ್‌ ಜಿಲ್ಲಾ ಸಂಚಾಲಕಎಸ್‌.ಎನ್‌. ಸ್ವಾಮಿ, ಹಸಿರು ಸೇನೆ ತಾ. ಅಧ್ಯಕ್ಷತಿಮ್ಲಾಪುರ ದೇವರಾಜು, ರಾಜ್ಯ ರೈತ ಸಂಘದ ತಾ.ಅಧ್ಯಕ್ಷ ಬಸ್ತೀಹಳ್ಳಿ ರಾಜಣ್ಣ, ಸಿಐಟಿಯುಸುಬ್ರಹ್ರಮಣ್ಯ, ಎತ್ತಿನಹೊಳೆ ಹೋರಾಟ ಸಮಿತಿಉಪಾಧ್ಯಕ್ಷ ಬಿ.ಬಿ. ಸಿದ್ದಲಿಂಗಮೂರ್ತಿ, ಹೆದ್ದಾರಿಹೋರಾಟ ಸಮಿತಿ ಮನೋಹರ್‌ ಪಟೇಲ್‌, ಬೆಲೆ ಕಾವಲು ಸಮಿತಿಯ ಶ್ರೀಕಾಂತ್‌, ಆರ್‌ಕೆಎಸ್‌ನಬೈರನಾಯ್ಕನಹಳ್ಳಿ ಲೋಕೇಶ್‌, ಮುಖಂಡರಾದ ಚಂದ್ರೇಗೌಡ, ಸದಾನಂದ್‌, ಸಚಿನ್‌,ಎಐಎಂಎಸೆಸ್‌ ರತ್ನಮ್ಮ, ಎಐಯುಟಿಯುಸಿ ಮಂಜುಳಾ, ಅಶ್ವಿ‌ನಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next