Advertisement

ಬಿಜೆಪಿಯಲ್ಲಿ ಮರಿ ಪುಡಾರಿಗಳದ್ದೇ ಹಾವಳಿ: ಮಂಜುನಾಥ್ ಗೌಡ

02:47 PM May 05, 2022 | Shwetha M |

ತೀರ್ಥಹಳ್ಳಿ: ಬಿಜೆಪಿ ಸರ್ಕಾರದ ದುರಾಡಳಿತ, ಹಾಗೂ ಈಶ್ವರಪ್ಪನವರ ಕಮಿಷನ್ ವ್ಯವಹಾರವನ್ನು ಖಂಡಿಸಿ ಪಿಎಸ್ಐ ನೇಮಕಾತಿ ವಿಚಾರ, ಗ್ಯಾಸ್ ಬೆಲೆ ಏರಿಕೆ, ಬಗರ್ ಹುಕುಂ ಸೇರಿ ಅನೇಕ ವಿಷಯಗಳನ್ನು ಖಂಡಿಸಿ ಮೇ 10 ರ ಮಂಗಳವಾರ ಶಿವಮೊಗ್ಗದಲ್ಲಿ ಪ್ರತಿಭಟನೆ ನೆಡೆಸುವುದಾಗಿ ಕಾಂಗ್ರೆಸ್ ಮುಖಂಡರಾದ ಆರ್ ಎಂ ಮಂಜುನಾಥ ಗೌಡರು ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಮೇ 10 ರಂದು ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೀರ್ಥಹಳ್ಳಿ ತಾಲೂಕಿನಿಂದ 5000 ಕಾರ್ಯಕರ್ತರೊಡನೆ ಬರಲು ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ ಎಂದರು.

ಇನ್ನು ಪಿಎಸ್ಐ ಪರೀಕ್ಷೆ ವಿಚಾರ ಬಹಳ ಚರ್ಚೆಯಾಗುತ್ತಿದೆ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಹೊರತುಪಡಿಸಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿ ಹಲವು ಇಲಾಖೆಗಳಿಂದ ದಬ್ಬಾಳಿಕೆ ನಡೆಸುತ್ತಿದ್ದಾರೆ.  ಬಿಜೆಪಿ ಬಿಟ್ಟರೆ ಬೇರೆ ಯಾರು ಸಹ ಮರಳು ಮುಟ್ಟುವ ಹಾಗೆ ಇಲ್ಲ. ಮರಿ ಪುಡಾರಿಗಳ ಹಾವಳಿಯಿಂದ ಇಂತಹ ಪರಿಸ್ಥಿತಿ ಉಂಟಾಗಿದೆ ಎಂದರು.

ಇದನ್ನೂ ಓದಿ:ವಿಶ್ವಮಾನವ, ಪಿತಾಮಹನ ಕಾಲದಲ್ಲೂ ಭ್ರಷ್ಟಾಚಾರ : ಡಿ.ಕೆ.ಶಿವಕುಮಾರ್ ವ್ಯಂಗ್ಯ

ಪಿಎಸ್ಐ ನೇಮಕಾತಿ ವಿಚಾರ ನೋಡಿದರೆ ಕೇಸ್ ಹಳ್ಳ ಹಿಡಿಸುವ ಪ್ರಯತ್ನ ನಡೆಯುತ್ತಿದೆ. ಕಾರಣ ದಿವ್ಯ ಹಾಗರಗಿ ಅವರು ಸಿಕ್ಕಿ ಹಾಕಿಕೊಂಡ ಮೇಲೆ ಬಿಜೆಪಿ ಪಕ್ಷದವರೇ ಅಲ್ಲ ಎನ್ನುತ್ತಾರೆ. ಹೀಗೆ ಬಿಟ್ಟರೆ ಕೇಸ್ ಮುಚ್ಚಿ ಹಾಕಲಾಗುತ್ತದೆ. ಅದನ್ನು ನಾವು ಖಂಡಿತ ಬಿಡುವುದಿಲ್ಲ ಎಂದು ಹೇಳಿದರು.

Advertisement

ರಾಜ್ಯದಲ್ಲಿ ಎಷ್ಟೊಂದು ಸಮಸ್ಯೆಗಳು ಇದೆ. ಅದೆಲ್ಲವನ್ನು ಬಿಟ್ಟು ಧರ್ಮ ಸಂಘರ್ಷ ಮಾಡುತ್ತಿದ್ದಾರೆ. ಹಿಜಾಬ್, ಹಲಾಲ್ ಕಟ್, ಜಟ್ಕಾ ಕಟ್, ಒಂದಾದ ಮೇಲೆ ಒಂದು ವಿಷಯವನ್ನು ತೆಗೆಯುತ್ತಿದ್ದಾರೆ. ಇದೆಲ್ಲವೂ ಇಲ್ಲಿಗೆ ನಿಲ್ಲಬೇಕು ಎಂದು ತಿಳಿಸಿದರು.

ಕಿಮ್ಮನೆ ರತ್ನಾಕರ್ ಮಾತನಾಡಿ, ಮೇ 10 ಕ್ಕೆ ಶಿವಮೊಗ್ಗಕ್ಕೆ ಡಿ ಕೆ ಶಿವಕುಮಾರ್ ಬರುತ್ತಾರೆ. ಅಲ್ಲಿಗೆ ನಾವು ಮತ್ತು ನಮ್ಮ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ಸುಂದರೇಶ್, ಬೆಟ್ಟ ಮಕ್ಕಿ ಕೃಷ್ಣಮೂರ್ತಿ ಭಟ್, ಪಟ್ಟಣ ಪಂಚಾಯತಿ ಅಧ್ಯಕ್ಷೆ ಶಬನಂ, ಕಟ್ಟೆಹಕ್ಲು ಕಿರಣ್ ಪಟ್ಟಣ ಪಂಚಾಯತ್ ಸದಸ್ಯರಾದ ಸುಶೀಲ ಶೆಟ್ಟಿ, ಕುರುವಳ್ಳಿ ನಾಗರಾಜ್ ಪೂಜಾರಿ, ನವೀನ್ ಕುಮಾರ್, ಯಲ್ಲಪ್ಪ, ಅಂಜು ಸಾಹೇಬ್, ರತ್ನಾಕರ್ ಶೆಟ್ಟಿ, ಮಧುಕರ್ ಕರಿಮನೆ, ವಿಲಿಯಮ್ಸ್ ಸೇರಿ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next