Advertisement
ಸಕಲೇಶಪುರ, ಮೂಗಲಿ, ಜೆ.ಪಿ.ನಗರ ಹಾಗೂ ರಾಜೇಂದ್ರಪುರದಿಂದ ನಾಲ್ಕು ತಂಡಗಳಾಗಿ ಬಾಳ್ಳುಪೇಟೆ ಗ್ರಾಮಕ್ಕೆ ಬೈಕ್‌ರ್ಯಾಲಿ ನಡೆಸಿದ ಕಾರ್ಯಕರ್ತರು, ಗ್ರಾಮದ ಗುರಪ್ಪವೃತ್ತದಲ್ಲಿ ಭಾರತ ಮಾತಾ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರತಿಭಟನೆ ನಡೆಸಿದರು. ನಂತರ ನಡೆದ ಬಹಿರಂಗ ಸಭೆಯಲ್ಲಿ ಭಜರಂಗದಳ ಗ್ರಾಮದಲ್ಲಿ ನೆಲೆಸಿರುವ ಇಬ್ಬರು ಅನ್ಯಕೋಮಿನವರು ರಾಜೇಂದ್ರ ಪುರ ಗ್ರಾಮದಲ್ಲಿನ ಸರ್ವೆ ನಂ.20ರಲ್ಲಿನ ಸರ್ಕಾರಿ ಜಮೀನು ಕಬಳಿಸಲು ಮುಂದಾಗಿದ್ದಾರೆಎಂದು ಆರೋಪಿಸಿದರು.
Related Articles
Advertisement
ಸಮಾಜ ಸೇವಕ ಬಾಳ್ಳುಗೋಪಾಲ್, ಬಜರಂಗದಳ ತಾಲೂಕು ಸಂಯೋಜಕ ಶ್ರೀಜಿತ್‌ಗೌಡ, ನಗರ ಘಟಕದ ಸಂಚಾಲಕ ಕಾರ್ತೀಕ್, ಬೆಳಗೋಡು ಹೋಬಳಿಯ ಸಂಚಾಲಕ ನಿಖೀಲ್, ವಿಶ್ವ ಹಿಂದೂ ಪರಿಷತ್ ತಾಲೂಕುಕಾರ್ಯದರ್ಶಿ ಮಂಜು, 12 ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು.
ಬಿಗಿ ಪೊಲೀಸ್ ಬಂದೋಬಸ್ತ್ ; ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಬೃಹತ್‌ಪ್ರತಿಭಟನೆ ಹಿನ್ನೆಲೆಯಲ್ಲಿ ಬುಧವಾರ ಮಧ್ಯರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.ಅಹಿತಕರ ಘಟನೆ ಸಂಭವಿಸದಂತೆ ಡಿವೈಎಸ್‌ಪಿ ಬಿ.ಆರ್. ಗೋಪಿ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಕಲೇಶಪುರ ವೃತ್ತ ನಿರೀಕ್ಷಕ ಗಿರೀಶ್, ಗ್ರಾಮಾಂತರ ಠಾಣೆ ಪಿಎಸ್‌ಐ ಚಂದ್ರಶೇಖರ್, ನಗರ ಠಾಣೆ ಪಿಎಸ್‌ಐ ಮಾಲಾ, ಯಸಳೂರು ಪಿಎಸ್‌ಐ ಸುರೇಶ್, ಆಲೂರು ಪಿಎಸ್‌ಐ ಮಂಜುನಾಥ್ ನಾಯಕ್, ಐವರು ಎಎಸ್‌ಐ,ಸಶಸ್ತ್ರ ಮೀಸಲು ಪಡೆಯ ಎರಡು ವಾಹನ ಹಾಗೂ 60 ಪೊಲೀಸರು ಬಂದೋಬಸ್ತ್ನಲ್ಲಿ ಪಾಲ್ಗೊಂಡಿದ್ದರು.