Advertisement

ನೆರೆ ಜಿಲ್ಲೆಗಳಿಗೆ ಪ್ರಧಾನಿ ಬರಲಿ

02:47 PM Oct 20, 2020 | Suhan S |

ರಾಮನಗರ: ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಪ್ರಧಾನ ಮಂತ್ರಿಗಳು ಖುದ್ದು ಭೇಟಿ ನೀಡಿ ಪರಿಶೀಲಿಸಿ ಪರಿಹಾರ ಘೋಷಿಸಬೇಕು, ರಾಜ್ಯ ಸರ್ಕಾರ ಶಿಕ್ಷಕರು, ಉಪನ್ಯಾಸಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿ ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ನಗರದ ಐಜೂರು ವೃತ್ತದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರ ಜೊತೆಗೂಡಿ ಪ್ರತಿಭಟನೆ ನಡೆಸಿದ ಅವರು, ರಾಜ್ಯದ ಶಿಕ್ಷಕರ ಮತ್ತು ಉಪನ್ಯಾಸಕರ ಸಮಸ್ಯೆ ಕಣ್ಣೀರಿನ ಕಥೆಯಾಗಿದೆ. ಆದರೆ ಇವರ ಸಮಸ್ಯೆಗಳನ್ನು ಯಾರು ಆಲಿ ಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನ.1 ರಿಂದ ಮುಂದಿನ ನವೆಂಬರ್‌ 1ರ ವರೆಗೆ ಶಿಕ್ಷಕ, ಉಪನ್ಯಾಸಕರ ಬೇಡಿಕೆ ಈಡೇರಿಸುವಂತೆ ನಿರಂತರ ಹೋರಾಟಗಳನ್ನು ಹಮ್ಮಿಕೊಳ್ಳಲಾಗುದು. ಶಿಕ್ಷಕರು ಅನೇಕ ಬೇಡಿಕೆ ಈಡೇರಿಸುವಂತೆ ರಾಜ್ಯ ಸರ್ಕರಕ್ಕೆ ಮನವಿ ಮಾಡಿದ್ದು, ಈಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುವುದಾಗಿ ತಿಳಿಸಿದರು. ಸರ್ಕಾರದ ಅನ್ಯ ಕಾರ್ಯಗಳಿಗೆ ಶಿಕ್ಷಕಿಯರನ್ನು  ಬಳಸಿಕೊಳ್ಳದೆ, ಬೋಧನೆಗೆ ಮಾತ್ರ ಬಳಸಿಕೊಳ್ಳಬೇಕು. ಶಿಕ್ಷಕಿಯಗೆ ರಕ್ಷಣೆ ಒದಗಿಸುವುದು ಸರ್ಕಾರದ ಹೊಣೆ. ಶಿಕ್ಷಕಿರಿಗಾಗಿ ಸಹಾಯವಾಣಿ ತೆರೆಯಬೇಕು ಎಂದು ಒತ್ತಾಯಿಸಿದರು.

ಅನುದಾನಿತ ಶಾಲಾ ಕಾಲೇಜುಗಳ ಶಿಕ್ಷಕರಿಗೂ ಪಿಂಚಣಿ ಸೌಲಭ್ಯ ವಿಸ್ತರಿಸಬೇಕು. ಪ್ರೌಢಶಾಲಾ ಮತ್ತು ಪಿಯುಸಿ ಉಪನ್ಯಾಸಕರ ಬಡ್ತಿ ವಿಚಾರ ಪರಿಹರಿಸಬೇಕು. ಗುತ್ತಿಗೆ ಉಪನ್ಯಾಸಕರಿಗೆ ನೇಮಕಾತಿ ಆದೇಶ ನೀಡುವುದು ಸೇರಿದಂತೆ ಇತ್ಯಾದಿ ಬೇಡಿಕೆ ಈಡೇರಿಸುವಂತೆ ವರ್ಷಪೂರ್ತಿ ಬೀದರ್‌ನಿಂ ದಚಾಮರಾಜನಗರ, ಮಂಗಳೂರಿನಿಂದ ಕೋಲಾರದವರೆಗೆ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸಂಸದರು, ಕೇಂದ್ರ ಮಂತ್ರಿಗಳ ಹರಾಜು!: ಉತ್ತರ ಕರ್ನಾಟಕ ಮತ್ತು ಹೈದರಾಬಾದ್‌ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳು ಪ್ರವಾಹ ಪೀಡಿತವಾಗಿವೆ. ಆದರೆ ಸಂಸದರು, ಕೇಂದ್ರದ ಮಂತ್ರಿಗಳು ಎಲ್ಲಿದ್ದಾರೋ ಗೊತ್ತಾಗುತ್ತಿಲ್ಲ. ಮುಂದಿನ ವಾರ ಹುಬ್ಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಮತ್ತು ಕೇಂದ್ರ ಸಚಿವರನ್ನು ಹರಾಜು ಹಾಕಲಾಗುವುದು. ಯಾರು ಬೇಕಾದರೂ ಹರಾಜು ಬಿಡ್‌ನ‌ಲ್ಲಿ ಭಾಗವಹಿಸಬಹುದು ಎಂದರು.

Advertisement

ಹೋರಾಟಗಳಿಗೆ ಸರ್ಕಾರ ಸ್ಪಂದಿಸುತ್ತಿದೆಯೇ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಸರ್ಕಾರ ಸ್ಪಂದಿಸಲಿ ಬಿಡಲಿ, ಜನರ ಪರ ಹೋರಾಟವನ್ನು ತಾವು ಮುಂದುವರೆಸುವುದಾಗಿ ತಿಳಿಸಿದರು. ಪ್ರತಿಭಟನೆಯಲ್ಲಿ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್‌, ಜಿಲ್ಲಾಧ್ಯಕ್ಷ ಸಿ.ಎಸ್‌.ಜಯಕುಮಾರ್‌, ದಲಿತ ಘಟಕದ ಜಿಲ್ಲಾ ಧ್ಯಕ್ಷ ಕೆ.ಜಯರಾಮು, ಗಾಯತ್ರಿಬಾಯಿ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next