Advertisement

ಸಾರಿಗೆ ನೌಕರರ ಮುಷ್ಕರ ಎರಡನೇ ದಿನಕ್ಕೆ : ಪ್ರಯಾಣಿಕರ ಪರದಾಟ

08:05 AM Dec 12, 2020 | sudhir |

ಬೆಂಗಳೂರು : ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಶನಿವಾರ ಮುಂಜಾನೆ ಪ್ರಯಾಣಿಕರು ಬಸ್ಸುಗಳಿಲ್ಲದೆ ಪರದಾಡುವಂತಾಗಿದೆ, ಕೆಲಸಕ್ಕೆ ತೆರಳುವ ಪ್ರಯಾಣಿಕರು, ಅಗತ್ಯ ಕಾರ್ಯಗಳಿಗೆ, ಆಸ್ಪತ್ರೆಗಳಿಗೆ ತೆರಳಬೇಕಿದ್ದ ಜನರು ಬಸ್ಸು ಸಂಚಾರ ಇಲ್ಲದೆ ಪರದಾಡುವಂತಾಗಿದೆ, ಕೆಲವೊಂದು ಕಡೆಗಳಲ್ಲಿ ಪ್ರಯಾಣಿಕರು ಕಾರು, ರಿಕ್ಷಾಗಳ ಮೊರೆ ಹೋಗಿದ್ದಾರೆ.

Advertisement

ಪೊಲೀಸ್ ಭದ್ರತೆಯಲ್ಲಿ ಬಿಎಂಟಿಸಿ ಬಸ್ ಸಂಚಾರಕ್ಕೆ ಸಿದ್ಧತೆ :
ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದ ಪರಿಣಾಮ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪೊಲೀಸ್ ಭದ್ರತೆಯೊಂದಿಗೆ ಬಿಎಂಟಿಸಿ ಬಸ್ ಸಂಚಾರಕ್ಕೆ ಸಿದ್ದತೆಯನ್ನು ನಡೆಸುತ್ತಿದ್ದಾರೆ ಎನ್ನಲಾಗಿದ್ದು ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿ ಎನ್ನುವುದು ಪ್ರಶ್ನೆಯಾಗಿದೆ.
ಈಗಾಗಲೇ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಎರಡು ಬಸ್ಸುಗಳು ಬಂದಿದ್ದು ಪೊಲೀಸ್ ಭದ್ರತೆ ನೀಡಲಾಗಿದೆ.

ಖಾಸಗಿ ವಾಹನಗಳ ಮೊರೆ ಹೋದ ಪ್ರಯಾಣಿಕರು :
ಮೈಸೂರಿನಲ್ಲಿ ಬಸ್ಸುಗಳಿಲ್ಲದೆ ಪ್ರಯಾಣಿಕರು ಕಾರು ರಿಕ್ಷಾಗಳ ಮೊರೆ ಹೋಗಿದ್ದಾರೆ, ಅಲ್ಲದೆ ಕೆಲವೊಂದು ಕಡೆಗಳಲ್ಲಿ ಒಂದು ಕಾರಿನಲ್ಲಿ ಎಂಟರಿಂದ ಒಂಬತ್ತು ಮಂದಿಯನ್ನು ತುಂಬಿಸಿ ಕರೆದೊಯ್ಯುವ ಚಿತ್ರಣಗಳು ಕಂಡುಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next