Advertisement

ಗಾಂಧಿ ಪ್ರತಿಮೆ ಮುಂದೆ ಉಪವಾಸ ಸತ್ಯಾಗ್ರಹ

03:21 PM Oct 03, 2020 | Suhan S |

ಕಲಬುರಗಿ: ನಗರದ ಟೌನ್‌ ಹಾಲ್‌ ಆವರಣದಲ್ಲಿರುವ ಗಾಂಧಿ ಪ್ರತಿಭಟನೆ ಮುಂದೆ ಎರಡು ಪ್ರತ್ಯೇಕ ಧರಣಿ ಸತ್ಯಾಗ್ರಹಗಳು ನಡೆದವು.

Advertisement

ಕೋವಿಡ್ ಮತ್ತು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ತಮ್ಮ ನೆರವಿಗೆ ಸರ್ಕಾರ ಧಾವಿಸಬೇಕೆಂದು ಖಾಸಗಿ ಶಾಲಾ- ಕಾಲೇಜುಗಳ ಶಿಕ್ಷಕರು ಮತ್ತು ರೈತ ವಿರೋಧಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕೆಂದು ಎರಡು ಸಂಘಟನೆಗಳು ಸತ್ಯಾಗ್ರಹ ಹಮ್ಮಿಕೊಂಡಿದ್ದವು.

ಈಶಾನ್ಯ ವಲಯ ಶಿಕ್ಷಕರ ವೇದಿಕೆ ಹಾಗೂ ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ-ಕಾಲೇಜುಗಳ ಒಕ್ಕೂಟ ಅಧ್ಯಕ್ಷರಾದ ಎಂ.ಬಿ. ಅಂಬಲಗಿ ನೇತೃತ್ವದಲ್ಲಿ ಶಿಕ್ಷಕರು ಉಪವಾಸ ಸತ್ಯಾಗ್ರಹ ನಡೆಸಿ, ಖಾಸಗಿ ಶಾಲಾ-ಕಾಲೇಜುಗಳ ಶಿಕ್ಷಕರು ಮತ್ತು ಸಿಬ್ಬಂದಿಗೆ ಸರ್ಕಾರಮಾಸಿಕವಾಗಿ ತಲಾ 5 ಸಾವಿರ ರೂ. ಪರಿಹಾರ ಧನ ನೀಡಬೇಕೆಂದು ಒತ್ತಾಯಿಸಿದರು.

ಸರ್ಕಾರಿ ಹಾಗೂ ಅನುದಾನಿತ ಶಾಲಾ- ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಕೇಂದ್ರ ಸರ್ಕಾರದ ಮಾದರಿಯಂತೆ ಸಂಬಳ ನೀಡಬೇಕು.  ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಲ್ಲಿ ಸೇವೆ ಸಲ್ಲಿಸುತ್ತಿರುವ 14,817 ಜನ ಅತಿಥಿ ಶಿಕ್ಷಕರ ಸೇವೆ ಕಾಯಂಗೊಳಿಸಬೇಕು ಹಾಗೂ 371 (ಜೆ) ಅಡಿಯಲ್ಲಿ ಅಗತ್ಯ ಸವಲತ್ತುಗಳನ್ನು ಕಲ್ಪಿಸಬೇಕೆಂದು ಬೆಳಗ್ಗೆಯಿಂದ ಸಂಜೆಯವರೆಗೂ ಉಪವಾಸ ಕುಳಿತುಕೊಂಡರು.

ಉಪವಾಸ ಸತ್ಯಾಗ್ರಹವನ್ನು ಸಾಹಿತಿಗಳಾದ ಎ.ಕೆ. ರಾಮೇಶ್ವರ, ಡಾ| ಕೆ.ಎಸ್‌.ಬಂಧು, ಧರ್ಮಣ್ಣ ಧನ್ನಿ ಹಾಗೂ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಶಾಮರಾವ ಸೂರನ್‌ ಬೆಂಬಲ ಸೂಚಿಸಿದರು. ಶಾಂತರೆಡ್ಡಿ ಚೌಧರಿ ಮುದನೂರ, ಡಾ| ಪರಮೇಶ್ವರ ಬಸಸೂಡೆ, ಅಸ್ಲಂ ಖದೀರ್‌, ಮಹಾಂತಯ್ಯ ಹಿರೇಮಠ ಜೇವರ್ಗಿ, ಶಿವಪುತ್ರಪ್ಪ ನೆಲ್ಲಗಿ, ಮಲ್ಲಿಕಾರ್ಜುನ ಪಾಟೀಲ್‌, ಮಹಿಬೂಬ ಮುಂತಾದವರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

Advertisement

ರೈತ ಸಂಘರ್ಷ ಸಮನ್ವಯ ಸಮಿತಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ , ಕಾರ್ಮಿಕ ವಿರೋಧಿಯಾದ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕೃಷಿ ಉತ್ಪನ್ನ ವಾಣಿಜ್ಯ ಮತ್ತು ಮಾರಾಟ ಕಾಯ್ದೆ, ವಿದ್ಯುತ್‌ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ಅಖೀಲಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ ಜಿಲ್ಲಾ ಸಮಿತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಯಿತು. ರೈತರು ಕಾರ್ಮಿಕರು ಇತ್ಯಾದಿದುಡಿಯುವ ವರ್ಗಗಳ ಪ್ರತಿರೋಧವನ್ನು ಲೆಕ್ಕಿಸದೇ ಪ್ರಜಾಪ್ರಭುತ್ವ ನಿಯಮಗಳನ್ನು ಗಾಳಿಗೆ ತೂರಿ ಕೇಂದ್ರ ಸರ್ಕಾರ ದೇಶದಆಹಾರ ಭದ್ರತೆ ಸ್ವಾವಲಂಬನೆಗೆ ಧಕ್ಕೆ  ತರಲು ಹೊರಟಿದೆ. ಅಂತಹ ನೀತಿಯಿಂದಹಿಂದೆ ಸರಿಯುವರೆಗೆ ಈ ಸಂಘರ್ಷ  ನಿಲ್ಲುವುದಿಲ್ಲ ಎನ್ನುವ ಪ್ರತಿಜ್ಞೆ ಹೊಂದಿಗೆ ಹೋರಾಟ ನಡೆಸಿದರು.

ಮುಖಂಡರಾದ ಭೀಮಾಶಕಂಕರ ಮಾಡ್ಯಾಳ, ಮಹೇಶ್‌ ಎಸ್‌ಬಿ, ಪಾಂಡುರಂಗ ಮಾವನಕರ್‌, ಬಸವರಾಜ ಗೌಡ, ಜಗದೇವಿ ಹೆಗಡೆ, ಮುಬೀನ್‌ ಅಹ್ಮದ್‌, ಭೀಮರಾಯ ರೂಪನೂರ, ಹಣಮಂತರಾಯ ಅಟ್ಟೂರ, ಸುಧಾಮ ಧನ್ನಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next