Advertisement

‌ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ

05:33 PM Sep 02, 2020 | Suhan S |

ಸುರಪುರ: ಸಿಂದಗಿ ತಾಲೂಕಿನ ಬೂದಿಹಾಳ ಪಿ.ಎಚ್‌. ಗ್ರಾಮದ ಮಾದಿಗ ಸಮುದಾಯದ ಮುಖಂಡನ ಕೊಲೆ ಹಾಗೂ ಸಿಂಧನೂರ ತಾಲೂಕು ಎಲೆಕೂಡ್ಲಿಗಿ ಗ್ರಾಮದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗಳನ್ನು ಬಂಧಿಸಿ ಘಟನೆಗಳ ಸಿಒಡಿ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಮಾದಿಗ ಸಮುದಾಯ ಸಾಮೂಹಿಕ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ಗ್ರೇಡ್‌ -2 ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ಒಕ್ಕೂಟದ ಮುಖಂಡರಾದ ಭೀಮಾಶಂಕರ ಬಿಲ್ಲವ್‌, ದಾನಪ್ಪ ಕಡಿಮನಿ ಚಂದ್ರು ದಿವಳಗುಡ್ಡ ಇತರರು ಮಾತನಾಡಿ, ದಲಿತ ಯುವಕನ ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು. ಎಲೆಕೂಡ್ಲಿಗಿ ಗ್ರಾಮದಲ್ಲಿ ಸಮುದಾಯದ ಬಾಲಕಿ ಮೇಲೆ ಬಲಾತ್ಕಾರಕ್ಕೆ ಯತ್ನಿಸಿದ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದರು. ಈ ವೇಳೆ ಮರೆಪ್ಪ ಬಸಂತಪುರ, ಹಣಮಂತ ಕಟ್ಟಿಮನಿ, ನಾಗರಾಜ ಓಕುಳಿ, ದುರಗಪ್ಪ ನಾಗರಾಳ, ಮಲ್ಲು ಬಿಲ್ಲವ್‌, ಬಸವರಾಜ ಮುಷ್ಠಳ್ಳಿ, ರಾಜು ದಿವಳಗುಡ್ಡ ಇತರರು ಇದ್ದರು.

……………………………………………………………………………………………………………………………………………………

ಯಾದಗಿರಿ; 142 ಜನರಿಗೆ ಕೋವಿಡ್ : ಯಾದಗಿರಿ: ಜಿಲ್ಲೆಯಲ್ಲಿ ಕೋವಿಡ್ ಮಹಾಮಾರಿ ಅಟ್ಟಹಾಸ ಮುಂದುವರಿದಿದ್ದು, ಮಂಗಳವಾರ ಜಿಲ್ಲೆಯಲ್ಲಿ ಸೋಂಕಿಗೆ ಗುರಿಯಾಗಿದ್ದ 70 ವರ್ಷದ ಮಹಿಳೆ ಪಿ-280340 ಜ್ವರದಿಂದ ಮೃತಪಟ್ಟಿದ್ದು, ಮೃತರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.

ಆ.21ರಂದು ಆಸ್ಪತ್ರಗೆ ದಾಖಲಾಗಿದ್ದ ಸೋಂಕಿತ ಆ.31ರಂದು ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ. ಜಿಲ್ಲೆಯಲ್ಲಿ ವೈರಸ್‌ ಇಂದು ಮತ್ತೆ 142 ಜನರಲ್ಲಿ ವಕ್ಕರಿಸಿದೆ. ಸೋಂಕಿನ ಮೂಲವೇ ಪತ್ತೆಯಾಗದವರಲ್ಲಿ ವೈರಸ್‌ ವ್ಯಾಪಕವಾಗಿ ಹರಡುತ್ತಿದ್ದು ಒಟ್ಟು 5536 ಜನರಿಗೆ ಸೋಂಕು ತಗುಲಿದೆ. 8 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 99 ಜನ ಚೇತರಿಸಿಕೊಂಡಿದ್ದು ಒಟ್ಟು 4254 ಜನ ಗುಣಮುಖವಾಗಿದ್ದು 1241 ಸಕ್ರಿಯ ಪ್ರಕರಣಗಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next