Advertisement

ಕೆಬಿಜೆಎನ್‌ಎಲ್‌ ಕಚೇರಿ ಎದುರು ಪ್ರತಿಭಟನೆ

03:07 PM Aug 20, 2022 | Team Udayavani |

ಜೇವರ್ಗಿ: ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ಯಡ್ರಾಮಿ ತಾಲೂಕಿನ ಗೂಗಿಹಾಳ ಹಾಗೂ ಇಜೇರಿ ಗ್ರಾಮದಲ್ಲಿ ನಡೆಯುತ್ತಿರುವ ಕೆರೆ ತುಂಬುವ ಯೋಜನೆ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ತಾಲೂಕು ಘಟಕದ ವತಿಯಿಂದ ತಾಲೂಕಿನ ಚಿಗರಳ್ಳಿ ಕೆಬಿಜೆಎನ್‌ಎಲ್‌ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

Advertisement

ಯಡ್ರಾಮಿ ತಾಲೂಕಿನ ಇಜೇರಿ ಹಾಗೂ ಗೂಗಿಹಾಳ ಗ್ರಾಮದಲ್ಲಿ ನಡೆಯುತ್ತಿರುವ ಕೆರೆ ತುಂಬುವ ಯೋಜನೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಕ್ರಿಯಾ ಯೋಜನೆ ಪ್ರಕಾರ ಕಾಮಗಾರಿ ನಡೆಸದೇ ಬೇಕಾಬಿಟ್ಟಿಯಾಗಿ ನಡೆಸಲಾಗುತ್ತಿದೆ. ನಾಲಾ ಬಿರುಕು ಬಿಟ್ಟ ಪರಿಣಾಮ ಹೊಲಗಳಿಗೆ ನೀರು ಹರಿದು ತೇವಾಂಶ ಹೆಚ್ಚಾಗಿ ಬೆಳೆಹಾನಿಯಾಗುವ ಸಂಭವ ವಿದೆ. ಕೂಡಲೇ ಉನ್ನತ ಮಟ್ಟದ ಸಮಿತಿ ರಚನೆ ಮಾಡಿ ತನಿಖೆ ನಡೆಸಬೇಕು. ನಿರ್ಲಕ್ಷಿಸಿದರೆ ಮುಂಬರುವ ದಿನಗಳಲ್ಲಿ ಬೀಮರಾಯನಗುಡಿ ಕೇಂದ್ರ ಕಚೇರಿ ಎದುರು ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ಅದ್ಯಕ್ಷ ಶ್ರವಣಕುಮಾರ ನಾಯಕ ಇಜೇರಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಅಲ್ಲಾಪಟೇಲ ಇಜೇರಿ, ತಾಯಪ್ಪ ನಾಯಕ, ದೇವಿಂದ್ರ ಚಿಗರಳ್ಳಿ, ಸಿದ್ದು ನೀರಲಕೋಡ, ಸೈಯದ್‌ ಪಟೇಲ ಪೊಲೀಸ್‌ ಪಾಟೀಲ, ಸೆ„ದಪ್ಪ ಹೊಸಮನಿ, ಮೌಲಾಲಿ ಕುಕನೂರ, ರಮೇಶ ಗಜಕೋಶ, ನಿಂಗಪ್ಪ ಚಿಗರಳ್ಳಿ, ವಾಸುದೇವ ಯಂಕಂಚಿ, ಯೂನುಸ್‌ ಕಾಲೇಗೌಡ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next