Advertisement
ಕೇಂದ್ರ-ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದ ಪ್ರತಿಭಟನಾಕಾರರು ಭೂ ಸ್ವಾಧೀನ ಪಕ್ರಿಯೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಕೃಷಿ ಭೂಮಿ ವಶಪಡಿಸಿಕೊಳ್ಳಲು ಮುಂದಾಗಿರುವ ಕೆಎಡಿಬಿ ಇಲಾಖೆ ಅಧಿಕಾರಿಗಳು ಸ್ಥಳೀಯ ಸ್ಥಿತಿಗತಿ ಪರಿಗಣಿಸದೆ ಇರಲು ಕಾರಣವೇನು ತಿಳಿಯುತ್ತಿಲ್ಲ. ಈ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಭೂಮಿಗೆ ಚಿನ್ನದ ಬೆಲೆ ಬರಲಿದೆ. ಆದರೆ, ಸಂಸದರು, ಶಾಸಕರು, ಅಧಿಕಾರಿಗಳು ಈ ವ್ಯಾಪ್ತಿಯಲ್ಲಿ ಭೂಮಿ ಖರೀದಿ ಕೊಡುತ್ತಿದ್ದಾರೆ ಎಂದರು.
Related Articles
Advertisement
ರೈತನೇ ಮುಂದಾಳತ್ವ ವಹಿಸಬೇಕಿದೆ: ರೈತ ಸಂಘದ ತಾಲೂಕು ಅಧ್ಯಕ್ಷ ಹನುಮೇಗೌಡ, ಜಿಲ್ಲಾ ಮುಖಂಡ ಮುತ್ತೇಗೌಡ ಮಾತನಾಡಿ, ಈ ಹಿಂದೆ ರೈತರ ಹೋರಾಟದ ಫಲವಾಗಿ ಪವರ್‌ಗ್ರಿಡ್ ಕಂಪನಿಯಿಂದ 4ಲಕ್ಷ ರೂ.ವರೆಗೆ ಪರಿಹಾರ ಸಿಕ್ಕಿತ್ತು. ಹೋರಾಟವಿಲ್ಲದೇ ಯಾವುದೂ ಸಿಗುವುದಿಲ್ಲ. ರೈತನೇ ಅದರ ಮುಂದಾಳತ್ವ ವಹಿಸಬೇಕಿದೆ. ಭೂಮಿ ಬೆಲೆ ಹೆಚ್ಚಿಸುವ ಹೋರಾಟಕ್ಕೆ ರೈತ ಸಂಘ ಬೆಂಬಲ ನೀಡುವುದಿಲ್ಲ. ರೈತರು ಕೈಗಾರಿಕೆ ಸ್ಥಾಪನೆಯಿಂದ ಕೊಟ್ಟ ಭೂಮಿಗೆ ಹಣ, ಮನೆಗೆ ಕೆಲಸ ಸಿಗುತ್ತೆ ಎಂಬ ಭ್ರಮೆಯಿಂದ ಹೊರ ಬರಬೇಕೆಂದರು.
ಕೊಡಿಗೇಹಳ್ಳಿಯ ಲಕ್ಷ್ಮಣ ಮಠದ ಮೋಹನ್ ರಾಮ್ ಸ್ವಾಮೀಜಿ ಮಾತನಾಡಿ, ಫಲವತ್ತಾದ ಕೃಷಿ ಭೂಮಿ ಡೀಸೆಲ…, ಗ್ರೀಸ್, ಕಬ್ಬಿಣಕ್ಕೆ ನೀಡುತ್ತಿರುವ ಸರ್ಕಾರದ ನಿಲುವು ಖಂಡನೀಯ ಎಂದರು.
ಇದನ್ನೂ ಓದಿ : ಸರ್ಕಾರದ ಸ್ಪಂದನೆಯಿಂದ ಆತ್ಮ ವಿಶ್ವಾಸ ಹೆಚ್ಚಲಿ
ಮನವಿ ಪತ್ರ ಸ್ವೀಕರಿಸಿದ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮಾತನಾಡಿ, ರೈತರ ಮನವಿಯನ್ನು ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು ಎಂದರು. ಉಪ ವಿಭಾಗಾಧಿಕಾರಿ ಅರುಳ್ ಕುಮಾರ್, ತಹಸೀಲ್ದಾರ್ ಟಿ.ಎಸ್.ಶಿವರಾಜ್ ಇದ್ದರು. ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ, ಮುಖಂಡ ಸುಲೋಚನಮ್ಮ ವೆಂಕಟರೆಡ್ಡಿ, ಕನ್ನಡ ಪಕ್ಷದ ಸಂಜೀವ್ ನಾಯಕ್, ಕೃಷಿ ಕ್ಷಣಾ ಸಮಿತಿ ಅಧ್ಯಕ್ಷ ಎಚ್. ಆರ್.ದೇವರಾಜ್, ಸಮಿತಿಯ ವಿಶ್ವನಾಥಯ್ಯ, ಗೋಪಿನಾಥ್, ಸೋಮಶೇಖರಯ್ಯ, ರಘು ರಂಗಸ್ವಾಮಿ, ಶಂಕರಯ್ಯ ಭಾಗವಹಿಸಿದ್ದರು.