ಗೋಕಾಕ: ಗಡಿ ವಿವಾದ ಸುಪ್ರೀಂಕೋರ್ಟ್ ನಲ್ಲಿದ್ದರೂ ಸಹ ತಮ್ಮ ರಾಜಕೀಯ ಲಾಭಕ್ಕಾಗಿ ಮಹಾರಾಷ್ಟ್ರ ಸರಕಾರ ಪದೇ ಪದೇ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಕಾರ್ಯ ಮಾಡುತ್ತಿರುವುದು ಖಂಡನೀಯ ಎಂದು ಕರವೇ ತಾಲೂಕಾ ಅಧ್ಯಕ್ಷ ಬಸವರಾಜ ಖಾನಪ್ಪನವರ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ನಗರದ ವಾಲ್ಮೀಕಿ ವೃತ್ತದಲ್ಲಿ ಮಹಾರಾಷ್ಟ್ರ ಸರಕಾರ ಹೊರ ತರುತ್ತಿರುವ ಮಹಾರಾಷ್ಟ್ರ ಕರ್ನಾಟಕ ಸೀಮಾವಾದ ಆಣಿ ಸಂಕಲ್ಪ ಪುಸ್ತಕದ ಮುಖಪುಟವನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿ ಮಹಾರಾಷ್ಟ್ರದ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಕನ್ನಡ ಹಾಗೂ ಮರಾಠಿ ಭಾಷಿಕರ ಬಾಂಧವ್ಯದಲ್ಲಿ ಹುಳಿ ಹಿಂಡುವ ಕೆಲಸಇದಾಗಿದ್ದು, ಕೇಂದ್ರ ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಈ ಪುಸ್ತಕವನ್ನು ಮುಟ್ಟಗೋಲು ಹಾಕಿಕೊಳ್ಳಬೇಕು.
ಮುಖ್ಯಮಂತ್ರಿ ಯಡಿಯೂರಪ್ಪ ಸಹ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಕೂಡಲೇ ಒಬ್ಬ ಐಎಎಸ್ ದರ್ಜೆಯ ವಿಶೇಷ ಕರ್ತವ್ಯಾ ಧಿಕಾರಿಯನ್ನು ನೇಮಿಸಬೇಕು ಎಂದು ಬಸವರಾಜ ಖಾನಪ್ಪನವರ ಆಗ್ರಹಿಸಿದರು.
ಇದನ್ನೂ ಓದಿ:ಹಿಂದೂ ದೇವತೆಗಳ ಅವಮಾನ ಖಂಡಿಸಿ ಪ್ರತಿಭಟನೆ
ಕೃಷ್ಣಾ ಖಾನಪ್ಪನವರ, ದೀಪಕ ಹಂಜಿ, ಮುಗುಟ ಪೈಲ್ವಾನ್, ರಮೇಶ ಕಮತಿ, ಶೆಟ್ಟೆಪ್ಪಾ ಗಾಡಿವಡ್ಡರ, ಮಹಾದೇವ ಮಕ್ಕಳಗೇರಿ, ಕಿರಣ ತೊಗರಿ, ಅಶೋಕ ಬಂಡಿವಡ್ಡರ, ಬಸು ಗಾಡಿವಡ್ಡರ, ರಾಮ ಕುಡೆಮ್ಮಿ, ಶೆಟ್ಟೆಪ್ಪಾ ಡಬಾಜ, ರಾಮ ಕೊಂಗನ್ನೊಳ್ಳಿ, ಈರಪ್ಪಾ ಕೋಳಿ, ಬಸು ತೇಲಿ, ನಾಗರಾಜ ಬಂಡಿವಡ್ಡರ,ದುರ್ಗಪ್ಪಾ ಬಂಡಿವಡ್ಡರ, ಗಣಪತಿ ಜಾಗನೂರ, ಮಾಳಪ್ಪಾ ಮಾಳೇದರ,ಮಾಳಪ್ಪಾ ಹಣಜಿ, ಹಣಮಂತ ಕಮತಿ ವಿಠಲ ನಾಯಿಕ, ಆನಂದ ಬಿರಡಿ, ಹಣಮಂತ ಅಮ್ಮಣಗಿ, ಮೌನೇಶ ಲೋಣಾರಿ ಸೇರಿದಂತೆ ಅನೇಕರು ಇದ್ದರು.