Advertisement

ಮನೆಗೆ ಬಿಸಿಲ ಕೋಲು

05:38 PM Aug 28, 2017 | Harsha Rao |

ಉತ್ತರ ದಿಕ್ಕಿನ ಬಾಗಿಲು ಹಾಗೂ ಕಿಟಕಿಗೆ ಸೂರ್ಯ ಕಿರಣಗಳು ನೇರವಾಗಿ ಬೀಳುವುದರಿಂದ ಈ ದಿಕ್ಕಿನಲ್ಲಿ ಸೂಕ್ತ ಸನ್‌ಶೇಡ್‌ ವಿನ್ಯಾಸ ಮಾಡಬೇಕು. ಬರೀ ಕಿಟಕಿಯ ಮೇಲೆ ಸಜ್ಜಾ ಹಾಕಿದರೆ ಸಾಕಾಗುವುದಿಲ್ಲ.  ಅಕ್ಕ ಪಕ್ಕದಲ್ಲೂ ಬೆಳಗ್ಗೆ ಹಾಗೂ ಸಂಜೆಯ ಸೂರ್ಯ ಕಿರಣಗಳನ್ನು ತಡೆಯಲು ವರ್ಟಿಕಲ್‌ ಶೇಡ್ಸ್‌ ಡಿಸೈನ್‌ ಮಾಡಬೇಕು. 

Advertisement

ಸೂರ್ಯ, ವರ್ಷವಿಡೀ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗಿದಂತೆ ಕಾಣುವುದು ಸಾಮಾನ್ಯವೇ ಆದರೂ ರವಿಯ ಕಿರಣಗಳು ನಮ್ಮನ್ನು ಯಾವ ಕೋನದಲ್ಲಿ ದಿನವಿಡೀ ತಾಗುತ್ತದೆ ಎಂಬುದನ್ನು ಆಧರಿಸಿ ವರ್ಷದ ವಿವಿಧ ಋತುಗಳು ನಿರ್ಣಯವಾಗುತ್ತವೆ. ಕೆಳಕೋನದಲ್ಲಿ,  ಭೂಮಿಯ ನಾವಿರುವ ಪ್ರದೇಶದಲ್ಲಿ ತಗುಲಿದರೆ ಆಗ ಚಳಿಗಾಲ, ಏರುಕೋನದಲ್ಲಿ, ತಲೆಗೆ ನೇರವಾಗಿ ತಾಗಿದರೆ ಆಗಲೇ ಬಿಸಿಲುಗಾಲ. ಹಾಗಾಗಿ, ಸೂರ್ಯ ಯಾವ ಕೋನದಲ್ಲಿ ಆಯಾ ಋತುವಿನಲ್ಲಿ ಇರುತ್ತಾನೆ ಎಂಬುದನ್ನು ಅರಿತು ಅದಕ್ಕೆ ತಕ್ಕಂತೆ ನಮ್ಮ ಮನೆಯ ವಿನ್ಯಾಸ ಮಾಡಿಕೊಂಡರೆ ಬೇಸಿಗೆಯಲ್ಲೂ ನಮ್ಮ ಮನೆ ತಂಪಾಗಿರುತ್ತದೆ.

ಬಿಸಿಲು ಯಾವ ಕೋನದಲ್ಲಿ ಮನೆಗೆ ತಾಗುತ್ತದೆ ಎಂಬುದನ್ನು ತಿಳಿಯಲು ಇದಕ್ಕೆಂದೇ ವಿಶೇಷವಾಗಿ ತಯಾರು ಮಾಡಿರುವ ಸೂರ್ಯಕಿರಣಗಳ ಕೋನ ಕೋಷ್ಠಕ ಲಭ್ಯ. ಇದನ್ನು ಬಳಸಿ ಯಾವ ಕಾಲದಲ್ಲಿ ಸೂರ್ಯ ಎಷ್ಟು ಹೊತ್ತು, ಇಲ್ಲವೇ ದಿನವಿಡೀ ನಮ್ಮ ಮನೆಯನ್ನು ಪ್ರವೇಶಿಸುತ್ತಾನೆಯೆ? ಇಲ್ಲವೇ ಎಂಬುದನ್ನು ಪತ್ತೆಹಚ್ಚಬಹುದು!  ಈ ವಿಜಾnನ ಹೊಸದೇನಲ್ಲ. ನಮ್ಮ ಪೂರ್ವಜರು ಇಂಥ ಅಧ್ಯಯನದ ಲಾಭ ಪಡದೇ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದ ಲಿಂಗದ ಮೇಲೆ ನಿರ್ದಿಷ್ಟ ದಿನದಂದು ಬಿಸಿಲಿನ ಅರ್ಚನೆ ಆಗುವಂತೆ ದೇವಸ್ಥಾನದ ವಿನ್ಯಾಸವನ್ನು ಮಾಡಿದ್ದಾರೆ. 

ನೀವೂ ಕೂಡ ನಿಮ್ಮ ಮನೆಗೆ ಇದೇ ರೀತಿಯಲ್ಲಿ ರವಿಯ ಸ್ಥಾನಮಾನಗಳನ್ನು ಅರಿತು, ಬೇಕಾದ ಋತುವಿನಲ್ಲಿ ಅಂದರೆ ಚಳಿಗಾಲದಲ್ಲಿ ಸೂರ್ಯ ಕಿರಣಗಳನ್ನು ಆಹ್ವಾನಿಸಿ, ಬೇಸಿಗೆಯಲ್ಲಿ ದೂರ ಇಡಬಹುದು. ನಮಗೆ ನಮ್ಮ ಮನೆಯ ಯಾವ ಗೋಡೆ, ಕಿಟಕಿಗಳ ಮೇಲೆ ಯಾವ ಕೋನದಲ್ಲಿ ಸೂರ್ಯ ಕಿರಣಗಳು ತಾಗುತ್ತವೆ ಎಂಬುದು ತಿಳಿದರೆ, ಅದಕ್ಕೆ ಸೂಕ್ತವಾದ ನೆರಳು ಬೀಳುವ ಸಾಧನವನ್ನು ಇಲ್ಲ ಉಷ್ಣನಿರೋಧಕ ವಸ್ತುಗಳ‌ನ್ನು ಬಳಸಬಹುದು.

ಕಿರಣಗಳ ಲೆಕ್ಕಾಚಾರ
ಸೂರ್ಯ ಉತ್ತರಕ್ಕೆ ಚಲಿಸುತ್ತಿರುವಂತೆ ಡಿಸೆಂಬರ್‌ 22ರ ನಂತರ ಅನುಭವವಾಗುತ್ತದೆ.  ಅದು ಚಳಿಗಾಲವಾದ ಕಾರಣ ಸುಮಾರು 60 ಡಿಗ್ರಿಯಷ್ಟು ಕೆಳಕೋನದಲ್ಲಿ ನಮಗೆ ತಾಗಿದಾಗ, ಆಗ ಚಳಿಗಾಲವಾದ ಕಾರಣ ಅಹ್ಲಾದಕರವಾಗಿರುತ್ತದೆ. ಆದರೆ ಮಾರ್ಚ್‌ 15ರ ನಂತರ ತಲೆಯಮೇಲೆ ಏರು ಕೋನದಲ್ಲಿ ಸುಡುವುದರಿಂದ ಸೂರ್ಯಕಿರಣಗಳ ಕೋನ ಸುಮಾರು 75 ಡಿಗ್ರಿಯಷ್ಟಿದ್ದು ಸೆಖೆಯ ಅನುಭವ ತೀವ್ರವಾಗುತ್ತದೆ. ಇನ್ನು ಏಪ್ರಿಲ್‌ 15ರಿಂದ ಮೇ 15ರವರೆಗೆ  ನೇರಾತಿನೇರವಾಗಿ ತಲೆಯ ಮೇಲೆಯೇ ಹೆಚ್ಚಾಕಡಿಮೆ 90 ಡಿಗ್ರಿ ಕೋನದಲ್ಲಿ ಎರಗುವುದರಿಂದ ನಾವು ಬಿಸಿಲಿನ ಅಡ “ಕತ್ತರಿ’ ಯಲ್ಲಿ ಸಿಲುಕಿದಷ್ಟು ತೀಕ್ಷ್ಣವಾದ ಸೂರ್ಯನ ಕಿರಣಗಳ ತಾಪಕ್ಕೆ ಒಳಗಾಗಬೇಕಾಗುತ್ತದೆ. ಈ ಎಲ್ಲ ಲೆಕ್ಕಾಚಾರಗಳನ್ನಿಟ್ಟುಕೊಂಡು ನಮ್ಮ ಮನೆಯನ್ನು ಬೇಸಿಗೆಯಲ್ಲಿ ತಂಪಾಗಿ ಇಟ್ಟುಕೊಳ್ಳುವುದು ಹೇಗೆ ಅಂದರೆ…?

Advertisement

ಬಿಸಿಲಿಗೆ ತಡೆಗಳನ್ನು ಬಳಸಿ
ಬಿಸಿಲಿಗೆ ನೇರವಾಗಿ ತೆರೆದುಕೊಂಡಾಗ, ಅದರಲ್ಲೂ ಗಾಢ ಬಣ್ಣ- ಕರಿಬಣ್ಣದ ವಸ್ತು ಆಗಿದ್ದರಂತೂ ಅತಿ ಹೆಚ್ಚು ತಾಪಮಾನ ಏರಿಕೆಗೆ ಒಳಗಾಗಿ 70- 80 ಡಿಗ್ರಿ ಸೆಲ್ಸಿಯಸ್‌ ನಷ್ಟು ಬಿಸಿಯಾಗುತ್ತದೆ! ಸೋಲಾರ್‌ ಹೀಟರ್‌ ನೀರನ್ನು ಉಪಯೋಗಿಸಿದವರಿಗೆ ಇದರ ಅನುಭವ ಬೇಸಿಗೆಯಲ್ಲಿ ಚೆನ್ನಾಗಿ ಆಗಿರುತ್ತದೆ. ನಿಮ್ಮ ಮನೆ ಈ ರೀತಿಯಲ್ಲಿ ಸೂರ್ಯ ಕಿರಣಗಳಿಗೆ ಒಳಗಾದರೆ ಬಿಸಿಯೇರಿ ಒಳಗಿರಲು ಅಸಾಧ್ಯವಾಗಬಹುದು. ಹಾಗಾಗಿ ಸೂಕ್ತ ನೆರಳು ನೀಡುವ ಶೇಡ್‌ – ಸಜಾj ಹಾಗೂ ಇತರೆ ವಿಧಾನಗಳನ್ನು ಅಳವಡಿಸುವುದು ಅನಿವಾರ್ಯ. ನೆರಳಿನಲ್ಲಿ ಸಾಮಾನ್ಯವಾಗಿ ಮಧ್ಯಾಹ್ನದ ಹೊತ್ತು ಸುಮಾರು 30 ಡಿಗ್ರಿಯಷ್ಟಿದ್ದು ರಾತ್ರಿ ಅದಕ್ಕಿಂತ ಕೆಳಗಿರುತ್ತದೆ. 

ಸನ್‌ಶೇಡ್‌ ವಿನ್ಯಾಸ
ಉತ್ತರ ದಿಕ್ಕಿನ ಬಾಗಿಲು ಹಾಗೂ ಕಿಟಕಿಗೆ ಸೂರ್ಯ ಕಿರಣಗಳು ನೇರವಾಗಿ ಬೀಳುವುದರಿಂದ ಈ ದಿಕ್ಕಿನಲ್ಲಿ ಸೂಕ್ತ ಸನ್‌ಶೇಡ್‌ ವಿನ್ಯಾಸ ಮಾಡಬೇಕು. ಬರೀ ಕಿಟಕಿಯ ಮೇಲೆ ಸಜ್ಜಾ ಹಾಕಿದರೆ ಸಾಕಾಗುವುದಿಲ್ಲ.  ಅಕ್ಕ ಪಕ್ಕದಲ್ಲೂ ಬೆಳಗ್ಗೆ ಹಾಗೂ ಸಂಜೆಯ ಸೂರ್ಯ ಕಿರಣಗಳನ್ನು ತಡೆಯಲು ವರ್ಟಿಕಲ್‌ ಶೇಡ್ಸ್‌ ಡಿಸೈನ್‌ ಮಾಡಬೇಕು. ಪೂರ್ವ ಹಾಗೂ ಪಶ್ಚಿಮ ದಿಕ್ಕಿನಿಂದ ತೀರ ಕೆಳ ಕೋನದಲ್ಲಿ ಬೆಳಗ್ಗೆ ಹಾಗೂ ಸಂಜೆ ಬಿಸಿಲು ಒಳ ಬರುವುದರಿಂದ, ಸಜಾjಗಳನ್ನು ವಿನ್ಯಾಸ ಮಾಡಲು ಕಷ್ಟ. ಆದರೆ 9ಗಂಟೆಯ ನಂತರದ ಬಿಸಿಲು ಹಾಗೂ ಸಂಜೆ 3ಗಂಟೆಯ ಮೊದಲಿನ ಕಿರಣಗಳನ್ನು ತಡೆಯಲು ಸೂಕ್ತ ವಿನ್ಯಾಸಗಳನ್ನು ಮಾಡಬಹುದು, ದಕ್ಷಿಣ ದಿಕ್ಕಿನ ಕಿಟಕಿಗಳಿಗೆ ಈ ಕಾಲದಲ್ಲಿ ಬಿಸಿಲು ಬೀಳದ ಕಾರಣ, ಅವುಗಳಿಗೆ ಹೆಚ್ಚಿನ ಸಜ್ಜಾ – ಸನ್‌ ಶೇಡ್‌ಗಳ ಅಗತ್ಯವಿರುವುದಿಲ್ಲ.  

ಗೋಡೆಗಳಿಗೆ ನೆರಳು
ಗೋಡೆ ದಪ್ಪಗಾದಷ್ಟೂ ತಾಪಮಾನ ಒಳಹರಿಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂಬುದು ನಿಜವಾದರೂ ಅವು ಅದೇ ರೀತಿಯಲ್ಲಿ ರಾತ್ರಿಯ ಹೊತ್ತು ಒಳಗೂ ಅದೇ ಬಿಸಿಯನ್ನು ಹರಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಗೋಡೆಗಳು ಬಿಸಿಯೇರದಂತೆ ಸೂಕ್ತ ನೆರಳು ಸಾಧನಗಳನ್ನು ಅಳವಡಿಸಬಹುದು. 

ಬೇಸಿಗೆಯಲ್ಲಿ ಉತ್ತರದ ಗೋಡೆಗಳಿಗೆ ದಿನದ ಹೆಚ್ಚುಹೊತ್ತು ಸುಮಾರು 75 ಡಿಗ್ರಿ ಕೋನದಿಂದ ಬಿಸಿಲು ಬೀಳುವುದರಿಂದ ಸೂರು ಹಾಗೂ  ಲಿಂಟಲ್‌ವುಟ್ಟದಲ್ಲಿ ಒಂದು ಹಾಗು ಎರಡು ಅಡಿ ಪೊ›ಜೆಕ್ಷನ್‌ ಕೊಟ್ಟರೆ, ಮಧ್ಯಾಹ್ನದ ಸೂರ್ಯ ಕಿರಣಗಳಿಂದ ರಕ್ಷಣೆ ಪಡೆದು ಗೋಡೆ ಬಿಸಿಯೇರುವುದನ್ನು ತಡೆಯಬಹುದು. ಈ ಚಾಚು ಸಜಾjಗಳು ಕಿಟಕಿಗಳ ಮೇಲೆ ಹಾಕುವ ಸಾಮಾನ್ಯ ಸಜಾjಗಳಂತಿರಬಹುದು, ಇಲ್ಲವೇ ಇನ್ನೂ ಹೆಚ್ಚು ತೆರೆದುಕೊಂಡಿರುವ ಪೆರೊYಲ ಫಿನ್‌ ಮಾದರಿಯಲ್ಲೂ ಇರಬಹುದು.

ಸೂರಿಗೆ ನೆರಳು
ಮನೆಯ ಗೋಡೆಗಳಿಗಿಂತ ದಿನದ ಬಹುಹೊತ್ತು ಬಿಸಿಲು ತಾಗುವುದು ಸೂರಿಗೆ, ಹಾಗಾಗಿ ಸೂಕ್ತ ನೆರಳಿನ ವ್ಯವಸ್ಥೆ ಮಾಡಿದರೆ ನಮ್ಮ ಸೂರು ತಣ್ಣಗಾಗಿ, ಮನೆಯ ಒಳಗೂ ತಂಪಾಗಿರುತ್ತದೆ. ಸಾಮಾನ್ಯವಾಗಿ ಬಿಸಿಲಿನಿಂದ ನೆರಳು ಪಡೆಯಲು ಪಶ್ಚಿಮ ಹಾಗೂ ಉತ್ತರದಿಕ್ಕಿನಲ್ಲಿ  ಪೆರೊYಲಗಳನ್ನು ವಿನ್ಯಾಸ ಮಾಡಬಹುದು.  ಇವು ಗಾಳಿ ಹರಿದಾಡಲು ಅಡ್ಡಿಪಡಿಸದೆ ಸಾಕಷ್ಟು ನೆರಳನ್ನು ನೀಡುತ್ತವೆ. ಇನ್ನು ಈ ಪೆರೊYಲಾಗಳಿಗೆ ಹಸಿರು ಬಳ್ಳಿಗಳನ್ನು ಹಬ್ಬಿಸಿದರೆ ಮನೆ ಇನ್ನೂ ತಂಪಾಗುವುದು ಖಚಿತ.

ಗಿಡಮರಗಳ ನೆರಳಿನ ಲೆಕ್ಕಾಚಾರ 
ಮನೆಗೊಂದು ಮರವಿದ್ದರೆ ಸಾಕಷ್ಟು ನೆರಳು ಬಿದ್ದು ಮನೆ ತಂಪಾಗುವುದು ನಮಗೆಲ್ಲ ಗೊತ್ತೇ ಇದೆ. ಆದರೆ ಮರ ಎಲ್ಲಿದ್ದರೆ ಒಳ್ಳೆಯದು? ಪೂರ್ವದಿಕ್ಕಿನಲ್ಲಿ ಬೆಳಗಿನ ಸೂರ್ಯ ಕಿರಣಗಳ ತೀಕ್ಷ್ಣತೆ ಹೆಚ್ಚಾಗಿ ಅರಿವಿಗೆ ಬರುವುದಿಲ್ಲ. 
ವಾತಾವರಣ ಹಾಗೂ ಮನೆಯೂ ರಾತ್ರಿ ಇಡೀ ಶಾಖ ಕಳೆದುಕೊಂಡು ತಂಪಾಗಿರುವ ಕಾರಣ ನಮಗೆ ಹೆಚ್ಚು ತಾಪತ್ರಯವಿರುವುದಿಲ್ಲ. ಆದರೆ ಮಧ್ಯಾಹ್ನ ಬಿಸಿಯೇರಿದ ಹೊತ್ತು ಹಾಗೂ ಸಂಜೆಯ ವೇಳೆ ಪಶ್ಚಿಮ ಹಾಗು ಉತ್ತರದಿಂದ ನಮಗೆ ತೀಕ್ಷ್ಣವಾದ ಬಿಸಿಲಿನ ಅನುಭವವಾಗುತ್ತದೆ. ಹಾಗಾಗಿ ಈ ದಿಕ್ಕಿನಿಂದ ನೆರಳು ಬೀಳುವಂತೆ ಮರಗಿಡಗಳನ್ನು ನೆಡಿ. 

ಬೆಂಗಳೂರಿನಂಥ ತಂಪು ಹವಾಮಾನಕ್ಕೆ ಹೆಸರಾದ ನಗರದಲ್ಲಿ ಮನೆಯ ಮೇಲೆ ಚಳಿಗಾಲದಲ್ಲಿ ಮರದ ನೆರಳು ಬೀಳದಂತೆ ಎಚ್ಚರ ವಹಿಸುವುದು ಒಳ್ಳೆಯದು. ಇಲ್ಲದಿದ್ದರೆ ತೀಕ್ಷ್ಣವಾದ ಚಳಿಯ ಅನುಭವವಾಗುವುದು ಖಚಿತ!
ಸೂರ್ಯ ಕಿರಣಗಳು ಯಾವಯಾವ ಕೋನಗಳಿಂದ ಭೂಮಿಯನ್ನು ಸ್ಪರ್ಶಿಸಿ ಚಳಿ, ಬೇಸಿಗೆ, ಮಳೆಗಾಲಗಳಿಗೆ ಕಾರಣವಾಗುತ್ತದೆ ಎಂಬುದರ ಜಾnನ ನೂರಾರು ವರ್ಷಗಳ ಹಿಂದೆಯೇ ನಮಗೆ ಲಭ್ಯವಾಗಿದೆ. ಸೂರ್ಯನ ಉತ್ತರಾಯಣ- ದಕ್ಷಿಣಾಯಣ ಪ್ರಯಾಣಗಳ ಮಾಹಿತಿಯನ್ನಾಧರಿಸಿ  ಚಳಿಗಾಲದಲ್ಲಿ ಮನೆಯನ್ನು ಬೆಚ್ಚಗಿಟ್ಟುಕೊಳ್ಳುವ ರೀತಿಯಲ್ಲೇ ಬೇಸಿಗೆಯಲ್ಲೂ ನೆರಳು ಪಡೆದು ನಮ್ಮ ಮನೆಯನ್ನು ತಂಪಾಗಿ ಇಟ್ಟುಕೊಳ್ಳಬಹುದು.  

ಹೆಚ್ಚಿನ ಮಾತಿಗೆ – 98441 32826

ಸಜಾj ಆಜಾ.. 
ಮನೆಯ ಮುಂಬಾಗಿಲನ್ನು ಸಾಕಷ್ಟು ಅಲಂಕರಿಸಿ ಪ್ರಾಮುಖ್ಯತೆ ಬರುವಂತೆ ಮಾಡುವುದು ಸಾಮಾನ್ಯ. ಇದು ಮನೆಗೆ ಒಂದು ರೀತಿಯ ಪರಿಚಯ -ಇಂಟ್ರೊಡಕ್ಷನ್‌ ಕೊಡುವುದರ ಜೊತೆಗೆ ಎರಡನೆ ಬಾರಿ ಮನೆಗೆ ಬರುವವರಿಗೆ “ಇದೇ ಆ ಮನೆ’ ಎಂದು ಸುಲಭದಲ್ಲಿ ಗುರುತು ಸಿಗುವ ವ್ಯಕ್ತಿತ್ವವನ್ನೂ ನೀಡಬಲ್ಲದು. ಹಾಗಾಗಿ ಮನೆಯ ಎಲಿವೇಷನ್‌ನ ಒಂದು ಭಾಗವಾಗಿ ಮುಂಬದಿಯ ಕಿಟಕಿ ಬಾಗಿಲಿನ ಸಜಾj – ಪೋರ್‌c ಗಳಿಗೆ ಸ್ವಲ್ಪ ಮುತುವರ್ಜಿವಹಿಸಿ ವಿನ್ಯಾಸ ಮಾಡುವುದುಂಟು. ಇದರಿಂದ ಶುದ್ಧಗಾಳಿ ಕೂಡ ಒಳಗೆ ಬರುತ್ತದೆ.  ಬಾಗಿಸಿದ ಗಾಜಿನ ಸನ್‌ಶೇಡ್‌ ವಿವಿಧ ಆಕಾರ ಬಣ್ಣಗಳಲ್ಲಿ ಲಭ್ಯ. ಇವನ್ನು ಮುಂಬಾಗಿಲಿಗೆ ಹಾಕಿದರೆ ಸಾಕು – ಇದೇ ಮನೆಗೆ ವಿಶೇಷ ಮೆರಗನ್ನು ನೀಡಬಲ್ಲದು.

ಬಿಸಿಲಿನಿಂದ ತಪ್ಪಿಸಿಕೊಳ್ಳಲೂ ಬಹುದು. ಮನೆಯ ಇತರೆ ಪ್ರದೇಶವನ್ನು ಸಿಂಪಲ್ಲಾಗಿ ವಿನ್ಯಾಸ ಗೊಳಿಸಿದರೂ ನಡೆಯುತ್ತದೆ. ಗಾಜು ಪಾರದರ್ಶಕವಾದ ಕಾರಣ, ಕಿಟಕಿ ಬಾಗಿಲುಗಳನ್ನು ತೆರೆದರೆ ಪ್ರಕಾಶಮಾನವಾಗಿ ಬೆಳಕು ಒಳಬರಲು ಇವು ಸಹಾ¿åಕಾರಿ. 

ಎಲ್ಲಿ ಸಂಪೂರ್ಣ ಪಾರದರ್ಶಕತೆ ಬೇಡವೋ ಅಲ್ಲಿ ಉಜ್ಜಿದ ಗಾಜನ್ನು ಬಳಸಬಹುದು. ಗಾಜನ್ನು ಮರಳು ಮಾದರಿಯ ವಸ್ತುಗಳಿಂದ ಉಜ್ಜಿ, ಬೆಳಕು ಸೋಸಿ- ಫಿಲ್ಟರ್‌ ಆಗಿ  ಒಳಬರುವಂತೆ ಮಾಡುವುದರ ಮೂಲಕ, ಸೂರ್ಯನ ಕಿರಣಗಳು ನೇರವಾಗಿ ಮನೆಯನ್ನು ಪ್ರವೇಶಿಸದಂತೆ ತಡೆಯಬಹುದು.

ಹೀಗೆ ಗ್ರೌಂಡ್‌ ಗ್ಲಾಸ್‌ ಬಳಸುವಾಗ ಉಜ್ಜಿದ ತರಿತರಿಯಾದ ಮುಖ ಕೆಳಗೆ ಅಂದರೆ ಗಾಳಿ ಮಳೆಗೆ ಹೆಚ್ಚು ಒಡ್ಡಿಕೊಳ್ಳದಂತೆ ಇರಿಸುವುದರ ಮೂಲಕ ಅವು ಧೂಳನ್ನು ಹೆಚ್ಚು ಆಕರ್ಷಿಸದಂತೆ ತಡೆಯಬಹುದು.

ಇತ್ತೀಚಿನ ದಿನಗಳಲ್ಲಿ ಮನೆಯ ಸುತ್ತ ಎರಡು ಅಡಿ ಖಾಲಿ ಜಾಗ ಬಿಟ್ಟರೆ ಹೆಚ್ಚು ಎಂದಾಗಿರುವಾಗ ನಾವು ದಪ್ಪದಪ್ಪ ಗಾತ್ರದ ಕಾಂಕ್ರಿಟ್‌ ಸಜಾjಗಳನ್ನು ಬಳಸುವ ಬದಲು ತೆಳುವಾದ, ಪಾರದರ್ಶಕ ಇಲ್ಲವೆ ಅರೆಪಾರದರ್ಶಕ ಸಜಾjಗಳನ್ನು ಉಪಯೋಗಿಸಿದರೆ, ಇರುವ ಸ್ಥಳವೇ ಹೆಚ್ಚು ತೆರೆದಂತೆ ಕಾಣುತ್ತದೆ. ಜೊತೆಗೆ ಗಾಳಿಬೆಳಕಿಗೂ ಸರಾಗವಾಗಿ ಹರಿದಾಡಲು ಸಹಕಾರಿಯಾಗುತ್ತದೆ.

– ಆರ್ಕಿಟೆಕ್ಟ್ ಕೆ. ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next