Advertisement
ಗುರುವಾರ ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೀರಶೈವ ಲಿಂಗಾಯತ ಪಂಚಮಸಾಲಿ ಆಲಗೂರ ಪೀಠದ ಜಗದ್ಗುರು ಡಾ.ಮಹದೇವ ಶ್ರೀಗಳು ಹಾಗೂ ಪೀಠದ ಉಸ್ತುವಾರಿ ಡಾ.ಸುರೇಶ ಬಿರಾದಾರ ಬೆಳಗಾವಿ ಅಧಿವೇಶನಕ್ಕೆ ಪೂರ್ವದಲ್ಲಿ ಮೀಸಲಾತಿ ಘೋಷಿಸಬೇಕು ಎಂದು ಆಗ್ರಹಿಸಿದರು.
Related Articles
Advertisement
ಪಂಚಮಸಾಲಿ ಸಮಾಜದ ಮೂರು ಪೀಠಗಳು ಮೀಸಲಾತಿ ಹಕ್ಕೊತ್ತಾಯದ ಏಕ ಗುರಿ ಹೊಂದಿದ್ದು, ಪ್ರತ್ಯೇಕತೆ ಎಂಬುದಿಲ್ಲ. ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು, ಹರಿಹರ ಪೀಠದ ವಚನಾನಂದ ಶ್ರೀಗಳು ನಡೆಸಿದ ಬಹುತೇಕ ಎಲ್ಲ ಹೋರಾಟಗಳಲ್ಲೂ ನಾವು ಸಕ್ರಿಯವಾಗಿ ಪಾಲ್ಗೊಂಡಿದ್ದೇವೆ ಎಂದರು.
ಇದೀಗ ಸಮುದಾಯದ ಜನರಲ್ಲಿ ಜಾಗೃತಿ ಹಾಗೂ ಮೀಸಲಾತಿ ಹಕ್ಕೊತ್ತಾಯಕ್ಕಾಗಿ ನಮ್ಮ ಭಾಗದಲ್ಲಿ ನಮ್ಮ ಪೀಠದಿಂಸಲೂ ಹೋರಾಟ ನಡೆಸಿದ್ದೇವೆ. ಡಿ.16 ರಂದು ಬಬಲೇಶ್ವರ ಗುರುಪಾದೇಶ್ವರ ಮಠದಿಂದ ತಹಶಿಲ್ದಾರರ ಕಛೇರಿಗೆ ತೆರಳಿ ಮನವಿ ಸಲ್ಲಿಸಲಾಗುತ್ತದೆ. ಬೆಳಗಾವಿ ಅಧಿವೇಶನದಲ್ಲಿ ಮೀಸಲಾತಿ ಪ್ರಕಟಿಸುವಂತೆ ಆಗ್ರಹಿಸುವುದು ಹೋರಾಟದ ಮೂಲ ಉದ್ದೇಶ ಎಂದರು.
ಧರಿದೇವರ ಮಠದ ಲಕ್ಷ್ಮಣ ಶ್ರೀಗಳು, ಬಿ.ಎಸ್. ಪಾಟೀಲ, ಶಂಕರಗೌಡ ಬಿರಾದಾರ, ಲತಾ ಬಿರಾದಾರ ಇತರರು ಉಪಸ್ಥಿತರಿದ್ದರು.