ಧಾರವಾಡ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಹಾಗೂ ಲಿಂಗಾಯತರಿಗೆ ಕೇಂದ್ರ ಸರಕಾರದ ಓಬಿಸಿ ಮೀಸಲಾತಿಗಾಗಿ ಒತ್ತಾಯಿಸಿ, ಕೇಂದ್ರ ಸರಕಾರಕ್ಕೆ ಲಿಂಗಾಯತರ ಲಾಂಛನಗಳಾದ ಇಷ್ಟಲಿಂಗ, ವಿಭೂತಿ ಹಾಗೂ ರುದ್ರಾಕ್ಷಿಯನ್ನು ಕಳುಹಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಕಲಾಭವನದ ಬಸವೇಶ್ವರ ಮೂರ್ತಿ ಎದುರು ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದಿಂದ ಬಸವೇಶ್ವರ ಪುತ್ಥಳಿ ಮಾಲಾರ್ಪಣೆ ಮಾಡಿ, ಲಿಂಗಾಯತರ ಲಾಂಛನಗಳಾದ ಇಷ್ಟಲಿಂಗ, ವಿಭೂತಿ ಹಾಗೂ ರುದ್ರಾಕ್ಷಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸುವುದರ ಮೂಲಕ ತಮ್ಮ ಬೇಡಿಕೆ ವ್ಯಕ್ತಪಡಿಸಿದರು.
ಬಳಿಕ ಬಸವೇಶ್ವರ ಪ್ರತಿಮೆ ಬಳಿ ಲಿಂಗಾಯತ ಸಮಾಜದ ಮಹಿಳೆಯರು ಸೇರಿ ಕೇಂದ್ರ ಸರಕಾರದ ವಿರುದ್ಧ ಹಕ್ಕೊತ್ತಾಯವನ್ನು ಮಾಡಿದರು.
ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯದರ್ಶಿ ಗೌರಮ್ಮ ನಾಡಗೌಡರ, ಸಿದ್ದರಾಮ ನಡಕಟ್ಟಿ, ಬಸವಂತಪ್ಪ ತೋಟದ, ಪ್ರದೀಪ ಪಾಟೀಲ, ರಾಜು ಮಳಪನವರ ಸೇರಿದಂತೆ ಇತರರು ಇದ್ದರು.