Advertisement

ನೆರೆ ಸಂತ್ರಸ್ತರಿಂದ ರಸ್ತೆ ತಡೆದು ಪ್ರತಿಭಟನೆ

11:24 AM Aug 31, 2019 | Team Udayavani |

ಹೊಳೆಆಲೂರು: ನವ ಗ್ರಾಮಕ್ಕೆ ಬಂದು ನೆಲೆಸಿರುವ ಮೆಣಸಗಿ ಗ್ರಾಮದ ನಿವಾಸಿಗಳು ಕುಡಿಯುವ ನೀರು, ಸಮರ್ಪಕ ರಸ್ತೆ, ಶಾಲೆ ಸೇರಿದಂತೆ ಸಕಲ ಸೌಲಭ್ಯಗಳಿಂದ ವಂಚಿತವಾಗಿರುವುದಾಗಿ ಆರೋಪಿಸಿ ಗ್ರಾಮಸ್ಥರು ಹೊಳೆಆಲೂರ-ಕೊಣ್ಣೂರ ಮುಖ್ಯ ರಸ್ತೆಯನ್ನು ಗಂಟೆಗೂ ಹೆಚ್ಚು ಕಾಲ ತಡೆದು ಪ್ರತಿಭಟಿಸಿದರು.

Advertisement

20 ದಿನಗಳ ಹಿಂದೆ ಸಂಭವಿಸಿದ ಮಲಪ್ರಭಾ ಹಾಗೂ ಬೆಣ್ಣಿ ಹಳ್ಳದ ಪ್ರವಾಹಕ್ಕೆ ಮನೆ ಮಠ ಕಳೆದುಕೊಂಡು ನವ ಗ್ರಾಮದ ಆಸರೆ ಮನೆಗಳಲ್ಲಿ ವಾಸ ಮಾಡುತ್ತಿದ್ದೇವೆ .ಆದರೆ ನವ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಕುಡಿಯಲು ಹನಿ ನೀರು ಸಿಗುತ್ತಿಲ್ಲ. ಇನ್ನೂ ಕೆಲ ಮನೆಗಳಿಗೆ ವಿದ್ಯುತ್‌ ಸಂಪರ್ಕವಿಲ್ಲ. ಜಾನುವಾರು ಕಟ್ಟಿಕೊಳ್ಳಲು ಸ್ಥಳದ ಅಭಾವವಿದೆ. ಅದಕ್ಕಿಂತ ನಿತ್ಯ ಜೀವನಕ್ಕೆ ಬೇಕಾದ ವಸ್ತುಗಳು ಸಿಗುತ್ತಿಲ್ಲ. ಇಲ್ಲಿರುವ ರಸ್ತೆಗೆ ಕೆಂಪು ಮಣ್ಣು ಹಾಕಿದ್ದು, ಸುಗಮ ದಾರಿ ಇರದ ಕಾರಣ ರಸ್ತೆ ಸಂಪರ್ಕ ಸಮರ್ಪಕವಾಗಿಲ್ಲ. ಇಲ್ಲಿಂದ 3 ಕಿಮೀ ದೂರ ಇರುವ ಮೂಲ ಗ್ರಾಮಕ್ಕೆ ಶಿಕ್ಷಣ ಪಡೆಯಲು ತೆರಳುವ ಶಾಲಾ ಮಕ್ಕಳ ಪರದಾಟ ನೋಡುವಂತಿಲ್ಲ. ಮಕ್ಕಳು ಶಾಲೆಗೆ ದುಡ್ಡು ಕೊಟ್ಟು ಹೋಗುವ ಪರಸ್ಥಿತಿಯಿದೆ. ಮೆಣಸಗಿ ನವ ಗ್ರಾಮದಲ್ಲಿ ಒಟ್ಟು 1300 ಮೆನೆಗಳಿದ್ದು, ಪ್ರಾಥಮಿಕ, ಪ್ರೌಢಶಾಲೆ ಇಲ್ಲಿಯೇ ಪ್ರಾರಂಭಿಸಿ, ಹಳೆಯ ಗ್ರಾಮಗಳಲ್ಲಿ ಸಿಗುತ್ತಿದ್ದ ಸೌಲಭ್ಯ ಇಲ್ಲಿ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್‌ ಶರಣಮ್ಮ ಕಾರಿ, ಸಿಪಿಐ ಎಂ.ಐ. ನಡವಿನಮನಿ, ಪಿಎಸ್‌ಐ ಎಲ್.ಕೆ. ಜೋಲಕಟ್ಟಿ, ಜಿ.ಪಂ. ಸದಸ್ಯ ಶಿವಕುಮಾರ ನೀಲಗುಂದ, ಶಿಕ್ಷಣ, ಸಾರಿಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಜನರೂಂದಿಗೆ ಚರ್ಚಿಸಿ ಇಲ್ಲಿರುವ ನವ ಗ್ರಾಮಗಳ ನಿವಾಸಿಗಳಿಗೆ ಎಲ್ಲ ಮೂಲ ಸೌಲಭ್ಯ ನೀಡುತ್ತೇವೆ. ಮಕ್ಕಳಿಗೆ ಇಲ್ಲಿಂದ ಬೇರೆ ಕಡೆಗೆ ಹೋಗಲು ಉಚಿತ ಬಸ್‌ ಪಾಸ್‌ ವ್ಯವಸ್ಥೆ ಮಾಡಲಾಗುವುದು. ಇಲ್ಲಿನ ಆಸ್ಪತ್ರೆ ಮತ್ತು ಶಾಲೆಗಳನ್ನು 2-3 ದಿನಗಳಲ್ಲಿ ನÊ ಗ್ರಾಮದಲ್ಲೇ ಪ್ರಾರಂಭ ಮಾಡುತ್ತೇವೆ. ರಸ್ತೆ, ಶೌಚಾಲಯ, ಚರಂಡಿ ವ್ಯವಸ್ಥೆ ಆದಷ್ಟು ಬೇಗ ಸುಧಾರಣೆ ಮಾಡಿಕೊಡುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ರವೀಂದ್ರ ಹಿರೇಮಠ, ಗ್ರಾ.ಪಂ ಸದಸ್ಯ ಕೇದಾರಗೌಡ ಮಣ್ಣೂರ, ಶರಣು ಸೂಡಿ, ನಿಂಗಬಸಪ್ಪ ಮುದೇನೂರ, ಮರದಪ್ಪ ಮಾದರ, ಪರಸಪ್ಪ ಮುದೇನೂರ, ಶಿವಾನಂದ ಮಾದರ, ಪುಂಡಲಿಕ ಮಾದರ, ಮುತ್ತಪ್ಪ ಮಾದರ, ಲಿಂಗರಾಜ ಜಾದವ, ಸುಭಾಷ ಕಪ್ಪಲಿ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next