Advertisement

ಪರೀಕ್ಷೆ ಮುಂದೂಡಲು ಆಗ್ರಹಿಸಿ ಪ್ರತಿಭಟನೆ

12:15 PM Oct 20, 2019 | Suhan S |

ಜಮಖಂಡಿ: ತಾಲೂಕಿನಲ್ಲಿ ಕೃಷ್ಣಾನದಿ ಭೀಕರ ಪ್ರವಾಹದಿಂದ ಮಹಿಳಾ ಕಾಲೇಜಿನಲ್ಲಿ ಸರಿಯಾಗಿ ತರಗತಿಗಳು ನಡೆದಿಲ್ಲ. ಪಠ್ಯಕ್ರಮ ಪೂರ್ಣಗೊಳ್ಳದೇ ಅಕ್ಕಮಹಾದೇವಿ ವಿಶ್ವ ವಿದ್ಯಾಲಯ ಪರೀಕ್ಷೆ ದಿನಾಂಕ ಹೊರಡಿಸಿದ ಹಿನ್ನೆಲೆಯಲ್ಲಿ ಶನಿವಾರ ಆಕ್ರೋಶ ವ್ಯಕ್ತಪಡಿಸಿದ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜು ಎದುರು ಪ್ರತಿಭಟನೆ ನಡೆಸಿ ಪ್ರಾಚಾರ್ಯ ಎಂ.ಡಿ. ನೇವಣಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಅಧೀನದಲ್ಲಿ ಬರುವ ಕಾಲೇಜುಗಳಲ್ಲಿ 1, 3 ಹಾಗೂ 5ನೇ ಸೆಮಿಸ್ಟರ್‌ ಪರೀಕ್ಷೆ ಅ.25ರಿಂದ ಆರಂಭಗೊಳ್ಳಲಿವೆ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರಿಗೆ ಅನ್ಯಾಯವಾಗಿದೆ. ಪರೀಕ್ಷೆ ಮುಂದೂಡುವಂತೆ ಕುಲಸಚಿವರಿಗೆ ಮನವಿ ನೀಡಿದರೂ ಮನವಿಗೆ ಮಾನ್ಯತೆ ನೀಡದೇ ಪರೀಕ್ಷಾ ದಿನಾಂಕ ಪ್ರಕಟಿಸಿದ್ದಾರೆ. ಜಿಲ್ಲೆಯಲ್ಲಿ ಕನಿಷ್ಠ 15 ದಿನ ಪರೀಕ್ಷೆ ಮುಂದೂಡಬೇಕೆಂದು ಸಾವಿರಾರು ವಿದ್ಯಾರ್ಥಿನಿಯರ ಒತ್ತಾಯವಾಗಿದೆ. ಪರೀಕ್ಷೆ ಎದುರಿಸಲು ಪೂರ್ವ ಸಿದ್ಧತೆಗೆ ಕಾಲಾವಕಾಶ ನೀಡಬೇಕೆಂದು ಆಗ್ರಹಿಸಿದರು.

ಅಕ್ಕಮಹಾದೇವಿ ವಿಶ್ವವಿದ್ಯಾಲಯ ಮುಖ್ಯಸ್ಥರು ಜಿಲ್ಲೆಯ ಮಹಿಳಾ ವಿದ್ಯಾಲಯದ ವಿದ್ಯಾರ್ಥಿನಿಯರ ಸಮಸ್ಯೆಗೆ ಸ್ಪಂದಿಸದಿದ್ದರೆ ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಸಪ್ನಾ ಕಡಕೋಳ, ರಚಿತಾ ಸುರಗೊಂಡ, ಫರಿದಾ ಸವನೂರ, ವಿಜಯಲಕ್ಷ್ಮೀ ಪೂಜಾರಿ, ಶಾಂಭವಿ ದೇಸಾಯಿ, ಪಯಾಲ ಶಿಂಧೆ, ಕೀರ್ತಿ ಪಾಟೀಲ, ರೂಪಾ ಪೂಜಾರಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next