ಕೋಲಾರ: ನಗರದ ಬಹಳಷ್ಟು ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ರಸ್ತೆಯೂ ಹಳ್ಳ ಗಳಿಂದಕೂಡಿದ್ದು ಹದಗೆಟ್ಟ ರಸ್ತೆಗಳನ್ನು ಸರಿಪ ಡಿಸಲು ಒತ್ತಾಯಿಸಿ ಮಂಗಳವಾರಕೋಲಾರ ಪ್ರಗತಿಪರ ಸಂಘಟನೆಗಳ ಮುಖಂಡರು, ಎಂ.ಬಿ.ರಸ್ತೆ ವಿನಯ್ ಸಭಾಂಗಣದ ಮುಂಭಾಗ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿ ಪ್ರತಿಭಟಿಸಿದರು.
ಪ್ರತಿಭಟನಾಕಾರರು ಸುಮಾರು ಒಂದು ಗಂಟೆ ಕಾಲ ರಸ್ತೆ ಬಂದ್ ಮಾಡಿ ಲೋಕೋ ಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನಾ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬರುವರೆಗೂ ಪ್ರತಿಭಟನೆ ಮುಂದು ವರಿಸುವುದಾಗಿ ಪಟ್ಟು ಹಿಡಿದರು.
ಕಾಲಹರಣ: ಒಂದು ಗಂಟೆ ನಂತರ ಸ್ಥಳಕ್ಕೆ ಬಂದ ಲೋಕೋಪಯೋಗಿ ಇಲಾಖೆ ಅಧಿಕಾ ರಿಗಳನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು. ನಗರಸಭೆ ಅಧಿಕಾರಿಗಳು ಪಿಡಬ್ಲ್ಯೂಡಿ ಅಧಿಕಾರಿಗಳ ಮೇಲೆ, ಪಿಡಬ್ಲ್ಯೂಡಿ ಅಧಿಕಾರಿಗಳು ನಗರಸಭೆಯ ಅಧಿಕಾರಿಗಳ ಮೇಲೆ ಆರೋಪ ಮಾಡುತ್ತಾ ಕಾಲಹರಣ ಮಾಡುತ್ತಿರುವ ಕಾರಣ ನಗರದ ಎಲ್ಲಾ ರಸ್ತೆ ಹಾಳಾಗಿದ್ದು, ಜನ ಓಡಾಡಲು ಪರಿತಪಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ವಿಫಲ: ಸುಮಾರು 2 ವರ್ಷಗಳ ಹಿಂದೆ ಈ ವಿಷಯದಲ್ಲಿ ಕೋಲಾರ ಬಂದ್‌ಗೆಕರೆ ನೀಡಿದಾಗ ಆಗಿನ ಜಿಲ್ಲಾಧಿಕಾರಿ ತಿಂಗಳೊಳಗಾಗಿ ರಸ್ತೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರೂಇದುವರೆಗೂ ನಗರದ ರಸ್ತೆ ಸರಿಪಡಿಸುವಲ್ಲಿ ಲೋಕೋಪ ಯೋಗಿ ಇಲಾಖೆ ಮತ್ತು ನಗರಸಭೆ ಸಂಪೂ ರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಕೇಬಲ್ ಅಳವಡಿಕೆ: ಈಗಾಗಲೇ ಕೋಲಾರನಗರದ ಅಗಲೀಕರಣವಾಗುತ್ತಿರುವ ರಸ್ತೆಗಳಎರಡೂ ಬದಿ ಚರಂಡಿ ಪಕ್ಕದಲ್ಲಿ ವಿವಿಧ ರೀತಿಯ ಕೇಬಲ್ ಹಾದುಹೋಗಲು ಪ್ರತ್ಯೇಕ ಡ್ರೈನೇಜ್ ವ್ಯವಸ್ಥೆ ಮಾಡಲು ಪ್ರತಿಭಟನಾಕಾರರು ಆಗ್ರಹಿಸಿದರು.ಇದಕ್ಕೆ ಉತ್ತರಿಸಿದ ಅಧಿಕಾರಿಗಳು,ಪ್ರಗತಿಪರ ಸಂಘಟನೆಗಳ ಮುಖಂಡರನ್ನು ಶನಿವಾರ ಸಭೆ ಕರೆದು ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರಾದ ಹೊಳಲಿಪ್ರಕಾಶ್, ಕುರುಬರಪೇಟೆ ವೆಂಕಟೇಶ್, ರೈತಸಂಘಗಳ ಮುಖಂಡರಾದ ನಾರಾಯಣ ಗೌಡ, ನಳಿನಿಗೌಡ, ಜಿ.ನಾರಾಯಣಸ್ವಾಮಿ, ರಾಮು ಶಿವಣ್ಣ , ಚಿನ್ನಿ ಶ್ರೀನಿವಾಸ್, ಕರವೇ
ಸಂಘಟನೆಯ ನವೀನ್, ಲೋಕೇಶ್, ಮಂಜುನಾಥ್, ಸೈಯದ್, ಶ್ರೀನಿವಾಸ್, ಶೇಷಾದ್ರಿಶಾಸ್ತ್ರಿ, ಮಾನವ ಹಕ್ಕುಗಳ ಶಿವಕುಮಾರಗೌಡ, ದಿಂಬಚಾಮನಹಳ್ಳಿ ಅಂಬರೀಶ್, ಚರ್ಚ್ ಛೇರ್ಮನ್ ಸುಧೀರ್, ಜಬೀ, ಸೈಯದ್ ಫಿರ್ದೋಸ್, ಅತಾವುಲ್ಲಾ, ಸಾಬಿರ್ ಪಾಷಾ, ಸಾದಿಕ್ ಪಾಷಾ, ಇಮ್ರಾನ್ ಖಾನ್ ಮತ್ತಿತರರಿದ್ದರು.
ಅಧಿಕಾರಿಗಳಿಗೆ ಮುಖಂಡರ ಎಚ್ಚರಿಕೆ : ರಸ್ತೆ ಸರಿಪಡಿಸಲು ನಿರ್ಲಕ್ಷ್ಯ ಧೋರಣೆ ತಾಳಿರುವ ಅಧಿಕಾರಿ ಮತ್ತು ಜನಪ್ರತಿನಿಧಿಗಳನ್ನು ಜನ ಪ್ರತಿನಿತ್ಯ ಛೀಮಾರಿ ಹಾಕುತ್ತಾ ದಾರಿಯಲ್ಲಿ ಹೋಗುತ್ತಿದ್ದಾರೆ. ಸಂಬಂಧಪಟ್ಟವರಿಗೆ ಹಲವಾರು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೇ ರೀತಿ ಮುಂದುವರಿದರೆ 15 ದಿನಗಳಲ್ಲಿಕೋಲಾರ ನಗರ ಬಂದ್‌ಕರೆ ನೀಡುತ್ತೇವೆ ಎಂದು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಎಚ್ಚರಿಸಿದರು.