Advertisement

ಕನಿಷ್ಠ ವೇತನಕ್ಕೆ ಒತ್ತಾಯಿಸಿ ಪ್ರತಿಭಟನೆ

02:14 PM Dec 27, 2019 | Suhan S |

ಮೈಸೂರು: ಬಿಸಿಯೂಟ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿ ಕರ ಸಂಘದ ಜಿಲ್ಲಾ ಸಮಿತಿವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.

Advertisement

ಸಂಘವು ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಬಿಸಿಯೂಟ ಕಾರ್ಯಕರ್ತೆಯರನ್ನು ಸಂಘಟಿಸಿ ಅವರ ನ್ಯಾಯ ಸಮ್ಮತದ ಬೇಡಿಕೆಗಳೊಂದಿಗೆ ಹೋರಾಡುತ್ತಾ ಬಂದಿದೆ. ಅಕ್ಷರ ದಾಸೋಹ ಯೋಜನೆಯಡಿ ಮೈಸೂರು ಜಿಲ್ಲೆಯಲ್ಲಿ 5300ಕ್ಕೂ ಹೆಚ್ಚು ಅಡುಗೆ ಯವರು ಹಾಗೂ ಅಡುಗೆ ಸಹಾಯಕರಾಗಿ ಕಳೆದ 17 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಈ ಯೋಜನೆಯಡಿ ಕಾರ್ಯ ನಿರ್ವ ಹಿಸುವ ಎಲ್ಲರೂ ಬಡ ಮಹಿಳೆಯರಾಗಿದ್ದು, ಕಡು ಬಡತನದಲ್ಲಿ ಜೀವನ ನಿರ್ವಹಿಸುತ್ತಿದ್ದಾರೆ. ಬಿಸಿಯೂಟ ಕಾರ್ಮಿಕ ರಿಗೆ ಕಾರ್ಯ ಕರ್ತೆಯರು, ಸಮಾಜ ಸೇವಕರು ಎಂಬ ಹೆಸರಿನಲ್ಲಿ ತಿಂಗಳಿಗೆ ಕೇವಲ 2600 ರೂ. ಗೌರವಧನ ನೀಡಲಾಗುತ್ತಿದೆ ಎಂದರು.

ಬಿಸಿಯೂಟ ಕಾರ್ಮಿಕರನ್ನು ಖಾಯಂಗೊಳಿಸಿ: ಇಂದಿನ ಬೆಲೆ ಏರಿಕೆ, ಶಿಕ್ಷಣದ ವ್ಯಾಪಾರೀಕರಣ, ದುಬಾರಿಯಾಗುತ್ತಿರುವ ಆರೋಗ್ಯ ಚಿಕಿತ್ಸೆ ಸಂದರ್ಭದಲ್ಲಿ ಕುಟುಂಬ ನಿರ್ವಹಣೆಯು ದುಸ್ತರ ವಾಗಿದ್ದು, ಇವರನ್ನೂ ಕಾರ್ಮಿಕರೆಂದು ಪರಿಗಣಿಸಿ ಕಾರ್ಮಿಕ ಇಲಾಖೆಯು ವಸತಿ ನಿಲಯ ಹಾಗೂ ವಸತಿಶಾಲೆಯ ಅಡುಗೆ ಯ ವರು, ಅಡುಗೆ ಸಹಾಯಕರಿಗೆ ನಿಗದಿಪಡಿಸಿರುವ ಕನಿಷ್ಠವೇತನವನ್ನು ಕೂಡಲೇ ಜಾರಿ ಮಾಡಬೇಕು. ಜತೆಗೆ ಬಿಸಿಯೂಟ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

ಅನ್ಯ ಕೆಲಸಕ್ಕೆ ಅಡುಗೆಯವರನ್ನು ಬಳಸಿಕೊಳ್ಳಬಾರದು: ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಷ್ಟು ಅಡುಗೆ ತಯಾರಕರು ಮತ್ತು ಸಹಾಯಕರನ್ನು ನೇಮಕ ಮಾಡ ಬೇಕು. ಅಡುಗೆ ತಯಾರಕರು ಮತ್ತು ಸಹಾಯಕರಿಗೆ ಸಾಮಾಜಿಕ ಭದ್ರತೆಯೊಂದಿಗೆ ಆರೋಗ್ಯ ರಕ್ಷಣೆ, ವಿಮೆ, ರಜೆ, ಹೆರಿಗೆ ರಜೆ, ಹೆರಿಗೆ ಭತ್ಯೆ, ಪಿಂಚಿಣಿ ಇನ್ನಿತರೆ ಸೌಲಭ್ಯಗಳನ್ನು ನೀಡಬೇಕು. ಬಿಸಿಯೂಟ ಯೋಜನೆಯ ಖಾಸಗೀಕರಣ ನಿಲ್ಲಿಸಿ,

ಲಕ್ಷಾಂತರ ಕೆಲಸಗಾರರಿಗೆ ಜೀವನ ನೀಡಬೇಕು. ಅಡುಗೆ ಕೆಲಸ ಗಳು ಮುಗಿದ ಬಳಿಕವೂ ಶಾಲೆಯಲ್ಲೇ ಇರುವಂತೆ ಒತ್ತಡ ಹೇರುವುದನ್ನು ನಿಲ್ಲಿಸಬೇಕು. ಅಡುಗೆಗೆ ಸಂಬಂಧಿಸಿದ ಕೆಲಸಗಳನ್ನು ಹೊರತುಪಡಿಸಿ ಇನ್ಯಾವುದೇ ಅನ್ಯ ಕೆಲಸಗಳಿಗೆ ಅಡುಗೆಯವರನ್ನು ಬಳಸಿಕೊಳ್ಳಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Advertisement

ಸಮಿತಿಯ ಜಿಲ್ಲಾ ಸಂಚಾಲಕ ಮುದ್ದುಕೃಷ್ಣ ಎನ್‌., ಎಐಯು ಟಿಯುಸಿ ಜಿಲ್ಲಾ ಕಾರ್ಯದರ್ಶಿ ಚಂದ್ರ ಶೇಖರ್‌ ಮೇಟಿ, ಬಿಸಿ ಯೂಟ ಸಂಘದ ಮುಖಂಡ ಬಸವ ರಾಜು, ಜಿಲ್ಲಾ ಸಮಿತಿ ಸದಸ್ಯ ದೊಡ್ಡಕಾನ್ಯ ರಾಜು, ಸಂಘದ ಮುಖಂಡರಾದ ಗೀತಾ, ಸಣ್ಣ ಮಲ್ಲಿಗೆ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next