Advertisement

2ಎ ಮೀಸಲಾತಿ ಸಿಗುವವರೆಗೂ ಹೋರಾಟ ಕೈ ಬಿಡಲ್ಲ

03:45 PM Nov 01, 2021 | Shwetha M |

ಇಂಡಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ನೀಡುತ್ತೇವೆ ಮೂರು ತಿಂಗಳ ಕಾಲಾವಕಾಶ ಕೊಡಿ ಎಂದು ಕೇಳಿದ್ದು, ಈಗಾಗಲೆ ಒಂದು ತಿಂಗಳ ಗಡುವು ಮುಗಿದಿದೆ. ಗಡುವು ಮುಗಿಯುತ್ತಿದ್ದಂತೆ ಮೀಸಲಾತಿ ಸಿಗುವವರೆಗೂ ಹೋರಾಟ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪಿಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

Advertisement

ಸಾತಲಗಾಂವ ಪಿಐ ಗ್ರಾಮದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ತಾಪಂ ಮಟ್ಟದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌ ಅಭಿಯಾನ ಹಾಗೂ ಕಿತ್ತೂರು ಚನ್ನಮ್ಮನವರ 198ನೇ ವಿಜಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಮೀಸಲಾತಿ ನೀಡದಿದ್ದರೆ ಈ ಬಾರಿ 20 ಲಕ್ಷ ಜನರನ್ನು ಸೇರಿಸಿ ಹೋರಾಟ ಮಾಡುತ್ತೇವೆ ಎಂದರು.

ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, 2ಎ ಮೀಸಲಾತಿ ಹೋರಾಟದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳಲಾಗುವದು. ಯಾವುದೇ ಪರಿಸ್ಥಿತಿಗೂ ಮೀಸಲಾತಿ ನೀಡುವವರೆಗೆ ಹೋರಾಟ ಮುಂದುವರಿಯಲಿದೆ ಎಂದರು.

ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಕೂಡಲಸಂಗಮ ಶ್ರೀಗಳನ್ನು 712 ಕಿ.ಮೀ ದೂರದವರೆಗೆ ನಡೆಸಿದ ಪಾಪ ಯಡಿಯೂರಪ್ಪನವರಿಗೆ ತಟ್ಟಿ ತಮ್ಮ ಖುರ್ಚಿಯನ್ನೇ ಖಾಲಿ ಮಾಡುವಂತೆ ಮಾಡಿದೆ. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇನ್ನೆರಡು ತಿಂಗಳಲ್ಲಿ ಮೀಸಲಾತಿ ನೀಡದಿದ್ದರೆ ಯಡಿಯೂರಪ್ಪನವರ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.

ಕಿತ್ತೂರು ಚನ್ನಮ್ಮನವರ ಏಳನೇ ತಲೆಮಾರಿನನ ವಂಶಸ್ಥ ಸೋಮಶೇಖರ ದೇಸಾಯಿ ಮಾತನಾಡಿ, ಸಮಾಜ ಬಾಂಧವರು ಸಂಘಟಿತಾರಾಗಬೇಕು. ರಾಯಣ್ಣ ಪ್ರಾಧಿಕಾರ ಮಾದರಿಯಲ್ಲಿ ಚನ್ನಮ್ಮನವರ ಪ್ರಾಧಿಕಾರಕ್ಕೂ ಹೆಚ್ಚಿನ ಅನುದಾನ ನೀಡಬೇಕು. ಇಂಡಿ ತಾಲೂಕಿನ ಕೊಟ್ನಾಳ ಗ್ರಾಮದಲ್ಲಿ ಚನ್ನಮ್ಮಾಜಿ ಜನಿಸಿದ್ದು ಆ ಸ್ಥಳವನ್ನು ಕೂಡಲೆ ಪ್ರೇಕ್ಷಣೀಯ ಸ್ಥಳವನ್ನಾಗಿಸಲು ಸರಕಾರ ಮುಂದಾಗಬೇಕು ಎಂದರು.

Advertisement

ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷ ನಾನಾಗೌಡ ಬಿರಾದಾರ ಮಾತನಾಡಿ, ಸಾತಲಗಾಂವ ಗ್ರಾಮದಲ್ಲಿ ಕಿತ್ತೂರು ಚನ್ನಮ್ಮ ಕಂಚಿನ ಮೂರ್ತಿ ಪ್ರತಿಷ್ಠಾಪನೆಗೆ ಒಂದು ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಿಸಿದರು. ಡಾ| ಬಸನಗೌಡ ಪಾಟೀಲ ನಾಗರಾಳಹುಲಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ, ವಿರಾಜ್‌ ಪಾಟೀಲ, ಮಂಜುನಾಥ ಕಾಮಗೊಂಡ ಮಾತನಾಡಿದರು. ಸಾತಲಗಾಂವ ಸಿದ್ದಾಶ್ರಮದ ಮದ್ದಾನಿ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಶಿವಯ್ಯ ಹಿರೇಮಠ, ಭೀಮರಾಯಗೌಡ ಪಾಟೀಲ, ವಿ.ಎಚ್‌. ಬಿರಾದಾರ, ಲಕ್ಷ್ಮಣ ನಿರಾಣಿ, ಶ್ರೀಶೈಲ ಮುಳಜಿ, ಸಂಗಣ್ಣ ಹೊಸೂರ, ಸೊಮು ದೇವರ, ಬಿ.ಎಂ. ಪಾಟೀಲ, ಎಂ.ಆರ್‌. ಪಾಟೀಲ, ಶಂಕರಗೌಡ ಬಂಡಿ, ಅನಿಲಗೌಡ ಬಿರಾದಾರ, ಶಂಕ್ರಪ್ಪ ಬಿರಾದಾರ, ಶ್ರೀಕಾಂತ ಕೂಡಿಗನೂರ, ಪ್ರಶಾಂತ ಅಲಗೊಂಡ, ಪ್ರಭುಗೌಡ ಪಾಟೀಲ, ಶಿವಯೋಗೆಪ್ಪ ಖಣದಾಳ, ಜೀತಪ್ಪ ಕಲ್ಯಾಣಿ, ಶಿವಾನಂದ ರಾವೂರ, ಬಸವರಾಜ ಮಡಗೊಂಡ, ರಮೇಶ ಬಿರಾದಾರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next