Advertisement

ಪಿಡಿಒ ಅಮಾನತಿಗೆ ಒತ್ತಾಯಿಸಿ ಪ್ರತಿಭಟನೆ

11:50 AM Jan 11, 2020 | Team Udayavani |

ಹುಬ್ಬಳ್ಳಿ: ರೇವಡಿಹಾಳ ಗ್ರಾಮದಲ್ಲಿ ಬಡವರಿಗೆ ಸೇರಬೇಕಾದ ಸರ್ಕಾರದ ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಸಹಕರಿಸಿದ ದೇವರಗುಡಿಹಾಳ ಪಿಡಿಒ ನಾಗರಾಜ ದೊಡ್ಡಮನಿ ಅಮಾನತು ಮಾಡಬೇಕು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕೆಂದು ರೇವಡಿಹಾಳ ಗ್ರಾಮಸ್ಥರು ತಹಶೀಲ್ದಾರ್‌ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ರೇವಡಿಹಾಳ ಗ್ರಾಮದ ಬ್ಲಾಕ್‌ ನಂ. 24, 73, 84/1 ರಲ್ಲಿ 11 ಎಕರೆ 12 ಗುಂಟೆ ಜಮೀನಿನಲ್ಲಿ ಒಟ್ಟು 310 ಸರ್ಕಾರದ ನಿವೇಶನಗಳಲ್ಲಿ ಅನರ್ಹರು ಅಕ್ರಮವಾಗಿ ಕಟ್ಟಡ ಕಟ್ಟಲು ದೇವರಗುಡಿಹಾಳ ಗ್ರಾಪಂ ಪಿಡಿಒ ನಾಗರಾಜ ದೊಡ್ಡಮನಿ ಸಹಕರಿಸಿದ್ದಾರೆ. ರೇವಡಿಹಾಳ ಗ್ರಾಮದ ವಸತಿ ರಹಿತರ ಬದಲಾಗಿ ಅನ್ಯರಿಗೆ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.

Advertisement

ಸಾರ್ವಜನಿಕ ರಸ್ತೆ ಅತಿಕ್ರಮಿಸಿ ನಿಮಯ ಬಾಹಿರವಾಗಿ ಮನೆ ಕಟ್ಟಿಕೊಳ್ಳಲು ರೇವಡಿಹಾಳ ಗ್ರಾಮದ ಶಂಕ್ರಪ್ಪ ಪೂಜಾರ ಅವರಿಗೆ ದೇವರಗುಡಿಹಾಳ ಗ್ರಾಪಂ ಪಿಡಿಓ ಸಹಕರಿಸಿ ಅನ್ಯಾಯವೆಸಗಿದ್ದು, ಕೂಡಲೇ ಪಿಡಿಒ ಅಮಾನತು ಮಾಡಬೇಕೆಂದು ಒತ್ತಾಯಿಸಿದರು. ಅಕ್ರಮವಾಗಿ ಮನೆ ನಿರ್ಮಾಣದಲ್ಲಿ ಶಾಮೀಲಾದ ಶಂಕ್ರಪ್ಪ ಪೂಜಾರ ಅವರನ್ನು ಕೂಡಲೇ ಬಂ ಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ತಾಪಂ ಇಒ ಎಂ.ಎಂ. ಸವದತ್ತಿ ಅವರು ಬರುವವರೆಗೂ ಪ್ರತಿಭಟನೆ ನಡೆಸಿದರು. ಈರಪ್ಪ ಮಾದರ, ಗುರುಪಾದಯ್ಯ ಮುಪ್ಪಯ್ಯನವರ, ಚನ್ನಬಸಪ್ಪ ಭಜಂತ್ರಿ, ಸಿದ್ದಪ್ಪ ಹರಿಜನ,ಮಹಾದೇವಪ್ಪ ಹರಿಜನ, ಗುರುಸಿದ್ದ ಬೆಂಗೇರಿ, ಶಿವು ಹರಿಜನ, ಮರೇವ್ವ ಹರಿಜನ, ಫಕ್ಕಿರವ್ವ ಹರಿಜನ, ನಿಂಗವ್ವ ಹರಿಜನ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next