Advertisement

ಶುದ್ದ ನೀರು ಪೂರೈಕೆಗೆ ಒತ್ತಾಯಿಸಿ ಪ್ರತಿಭಟನೆ

05:20 PM Sep 06, 2022 | Team Udayavani |

ಗುರುಮಠಕಲ್‌: ಪುರಸಭೆ ವ್ಯಾಪ್ತಿಯಲ್ಲಿ 2 ದಿನಕ್ಕೊಮ್ಮೆ ನೀರು ಪೊರೈಸುತ್ತಿದ್ದು ಹಾಗೂ ಭೀಮಾ ನದಿಯಿಂದ ಬರುವ ನೀರು ಕಲುಷಿತವಾಗಿದೆ. ಕೂಡಲೇ ಶುದ್ಧೀಕರಿಸಿ ನಿತ್ಯ ನೀರು ಪೂರೈಸಬೇಕೆಂದು ಬಿಜೆಪಿ ಮಂಡಲ ಹಾಗೂ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಿ, ಪುರಸಭೆ ಮುಖ್ಯಾಧಿಕಾರಿ ಭಾರತಿ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ವೇಳೆ ಬಿಜೆಪಿ ಮುಖಂಡ ಚಂದುಲಾಲ್‌ ಚೌದರಿ ಮಾತನಾಡಿ, ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯಗಳು ನಿರ್ವಹಣೆ ಇಲ್ಲದೇ ಸಂಪೂರ್ಣ ಹದಗೆಟ್ಟಿದ್ದು, ಇದನ್ನು ಸರಿಪಡಿಸಿ ಸರ್ವಾಜನಿಕರಿಗೆ ಅನೂಕುಲ ಮಾಡಬೇಕು. ಪಟ್ಟಣದಲ್ಲಿ ಮುಖ್ಯ ರಸ್ತೆ ಹಾಗೂ ಬೀದಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಮತ್ತು ಚರಂಡಿ ಕಾಮಗಾರಿ ಪೂರ್ಣಗೊಳ್ಳದೇ ನೀರು ರಸ್ತೆಯಲ್ಲಿ ಪೋಲಾಗುತ್ತಿದ್ದು, ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿ ವಾರ್ಡ್‌ನಲ್ಲಿ ಬ್ಲಿಚಿಂಗ್‌ ಪೌಡರ್‌ ಸಿಂಪಡಣೆ ಮಾಡಬೇಕು ಹಾಗೂ ಆಶ್ರಯ ಯೋಜನೆಯ ಮನೆಗಳನ್ನು ದುರಸ್ತಿ ಮಾಡಬೇಕು. ಫಲಾನುಭಾವಿಗಳ ಹಕ್ಕುಪತ್ರ ವಿತರಣೆ ಮಾಡಬೇಕು. ಪುರಸಭೆಯ ಮಳಿಗೆಗಳ ಟೆಂಡರ್‌ ಅವಧಿ ಮುಗಿದಿದ್ದು, ಟೆಂಡರ್‌ ಮಾಡಬೇಕು. ಈ ಎಲ್ಲ ಬೇಡಿಕೆಗಳನ್ನು ವಾರದೊಳಗೆ ಈಡೇರಿಸದಿದ್ದರೆ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ತಿಳಿಸಿದರು.

ರಾಜ್ಯ ಬಿಜೆಪಿ ಮಾಜಿ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ, ಯುವ ಮೋರ್ಚಾ ಅಧ್ಯಕ್ಷ ವಿನಯವರಾವ್‌, ಜಿಲ್ಲಾ ಉಪಾಧ್ಯಕ್ಷ ದೇವದಾಸ, ಮಂಡಲ ಕಾರ್ಯದರ್ಶಿ ಜಗದೀಶ ಮೇಂಗಜಿ, ನಗರಾಧ್ಯಕ್ಷ ವೆಂಕಟಪ್ಪ ಅವಂಗಪುರ, ವೀರಪ್ಪ ಪ್ಯಾಟಿ, ನರಸಿಂಹಲು ನೀರೆಟ್ಟಿ, ಪ್ರವೀಣ ಜೋಶಿ, ನರೇಶ ಗೋಂಗ್ಲೆ, ಬಾಲಪ್ಪ ಯಲಮೋಳ, ರವಿಂದ್ರರೆಡ್ಡಿ ಪೋತಲ್‌ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next