Advertisement

Dandeli – ಅಳ್ನಾವರ ಪ್ಯಾಸೆಂಜರ್ ರೈಲು ಸಂಚಾರ ಪುನರಾರಂಭಕ್ಕೆ ಆಗ್ರಹಿಸಿ ಪ್ರತಿಭಟನೆ

03:07 PM Jan 19, 2024 | Team Udayavani |

ದಾಂಡೇಲಿ: ಸ್ಥಗಿತಗೊಂಡಿರುವ ದಾಂಡೇಲಿ – ಅಳ್ನಾವರ ಪ್ಯಾಸೆಂಜರ್ ರೈಲು ಸಂಚಾರ ಪುನರಾರಂಭಕ್ಕೆಆಗ್ರಹಿಸಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಂಘಟನೆಯು ಶುಕ್ರವಾರ ನಗರದ ಹಸನ್ಮಾಳದಲ್ಲಿರುವ ರೈಲ್ವೆ ಹಳಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.

Advertisement

ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಂಘಟನೆಯ ರಾಜ್ಯ ನಿರ್ದೇಶಕ ಫೈರೋಜ್ ಫಿರ್ಜಾದೆ, ಸಂಘಟನೆಯ ಪದಾಧಿಕಾರಿ ರವಿ ಸುತಾರ್ ಮಾತನಾಡಿ, ಬ್ರಿಟಿಷರ ಕಾಲದಿಂದಲೇ ಇದ್ದಂತ ರೈಲು ಸಂಚಾರ ಆನಂತರ ಸ್ಥಗಿತಗೊಂಡು ಸಾಕಷ್ಟು ವರ್ಷಗಳ ನಿರಂತರ ಹೋರಾಟದ ಫಲವಾಗಿ ಮತ್ತೆ ಪುನರಾರಂಭವಾಯಿತು. ಆದರೆ ನಂತರದ ದಿನಗಳಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಹೀಗೆ ಸ್ಥಗಿತಗೊಳಿಸಲಾದ ರೈಲು ಸಂಚಾರವನ್ನು ಮತ್ತೆ ಪುನರಾರಂಭಿಸಲಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಮನವಿಯನ್ನು ಮಾಡಿದ್ದರು ಒಂದೊಂದೇ ಕಾರಣಗಳನ್ನು ಹೇಳಿರುವುದು ಬಿಟ್ಟರೆ ಸಂಚಾರವನ್ನು ಪುನರಾರಂಭಿಸುವ ಭರವಸೆ ಮಾತ್ರ ಭರವಸೆಯಾಗಿಯೇ ಉಳಿದಿದೆ ಎಂದು ಹೇಳಿದರು.

15 ದಿನದೊಳಗಡೆ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳದೆ ಇದ್ದಲ್ಲಿ ಹುಬ್ಬಳ್ಳಿಯ ವಿಭಾಗೀಯ ರೈಲ್ವೆ ಕಾರ್ಯಾಲಯದ ಮುಂಭಾಗದಲ್ಲಿ ಮತ್ತು ಕಾರವಾರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.

ರೈಲ್ವೆ ಸಚಿವರಿಗೆ ಬರೆದ ಮನವಿಯನ್ನು ಹುಬ್ಬಳ್ಳಿ ರೈಲ್ವೆ ಇಲಾಖೆಯ ಅಧಿಕಾರಿಗಳ ಮೂಲಕ ನೀಡಲಾಯಿತು.

Advertisement

ಪ್ರಮುಖರುಗಳಾದ ಬಲವಂತ ಬೊಮ್ಮನಳ್ಳಿ, ದಿವಾಕರ ನಾಯ್ಕ, ಸತೀಶ ನಾಯ್ಕ, ಅವಿನಾಶ್ ಘೋಡ್ಕೆ, ಗೌರೀಶ್ ಬಾಬ್ರೇಕರ, ಶ್ಯಾಮು ಬೆಂಗಳೂರು, ಶ್ರೀಕಾಂತ್ ಅಸೋದೆ, ರಾಮಲಿಂಗ ಜಾಧವ್, ಸಲೀಂ‌ ಕಾಕರ್, ರಾಜಶೇಖರ ನಿಂಬಾಳ್ಕರ್, ಸಾಧಿಕ್ ಮುಲ್ಲಾ, ದಾದಾಪೀರ್, ಕರ್ಣಮ್ಮ ತೋಡಟ್ಟಿ, ಮುಜೀಬಾ ಛಬ್ಬಿ, ನೀಲಾ‌ ಮಾದರ, ಸವಿತಾ ದಂಡಗಿ, ಸಮೀರ್ ಅಂಕೋಲೆಕರ, ಮಂಜುಳಾ , ಬೇಬಿ, ಸಂಗೀತಾ ಅಮ್ರೆ, ಮೇರಿ, ದಿಲ್ಶಾದ್, ಭಾರ್ಗವಿ ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.  ಈ ಸಂದರ್ಭದಲ್ಲಿ ದಾಂಡೇಲಿಯ ಪೊಲೀಸರು ಮತ್ತು ಹುಬ್ಬಳ್ಳಿಯ ರೈಲ್ವೆ ಪೊಲೀಸರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next