Advertisement

ಕಬ್ಬಿನ ಬಾಕಿ ಹಣ ಪಾವತಿಗೆ ಆಗ್ರಹಿಸಿ ಪ್ರತಿಭಟನೆ

02:44 PM Mar 22, 2022 | Team Udayavani |

ಹುಮನಾಬಾದ: ಕಬ್ಬಿನ ಬಾಕಿ ಹಣ ಪಾವತಿಸುವಂತೆ ಒತ್ತಾಯಿಸಿ ಬೀದರ ಸಕ್ಕರೆ ಕಾರ್ಖಾನೆ ಪ್ರಾಂಗಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

Advertisement

ಬಂದ್‌ ಆಗಿರುವ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿದ ಹಿನ್ನೆಲಯಲ್ಲಿ ಆಡಳಿತ ಮಂಡಳಿ ನಂಬಿ ಕಾರ್ಖಾನೆಗೆ ರೈತರು ಕಬ್ಬು ಪೂರೈಸಿದ್ದಾರೆ. ರೈತರ ಹಣ ಪಾವತಿಸದೇ ಕಾರ್ಖಾನೆ ಬಂದ್‌ ಮಾಡಲಾಗಿದೆ. ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರು ಆತಂಕದಲ್ಲಿದ್ದಾರೆ. ಕೂಡಲೇ ಕಾರ್ಖಾನೆ ನಂಬಿ ಕಬ್ಬು ಪೂರೈಸಿದ ರೈತರಿಗೆ ಹಣ ಪಾವತಿ ಮಾಡಬೇಕು ಎಂದು ರೈತರು ಒತ್ತಾಯಿಸಿದರು.

ಧರಣಿ ಸ್ಥಳಕ್ಕೆ ಆಗಮಿಸಿದ ಕಾರ್ಖಾನೆ ನಿರ್ದೇಶಕರು, ಸದ್ಯಕ್ಕೆ ಕಬ್ಬಿನ ಹಣ ಪಾವತಿಸುವುದು ಕಷ್ಟಕರವಾಗಿದ್ದು, ಇಲ್ಲಿನ ಸಮಸ್ಯೆ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ. ಸರ್ಕಾರ ಕೂಡ ಅನುದಾನ ನೀಡುವ ಭರವಸೆ ನೀಡಿದ್ದು, ಮೇ 15ರೊಳಗೆ ಹಣ ಪಾವತಿಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ಧರಣಿ ಹಿಂಪಡೆದು ಹಣ ಪಾವತಿಗೆ ಸಮಯ ನೀಡಿದರು. ನಿಗದಿತ ಅವಧಿಯಲ್ಲಿ ಬಾಕಿ ಹಣ ಪಾವತಿಯಾಗದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್‌ ಪ್ರತಿಭಟನೆ, ಧರಣಿ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next