Advertisement

ಕುಡಿವ ನೀರಿಗೆ ಆಗ್ರಹಿಸಿ ಪ್ರತಿಭಟನೆ

10:52 AM Jul 17, 2019 | Team Udayavani |

ಕಾರಟಗಿ: ಪಟ್ಟಣದ 5ನೇ ವಾರ್ಡ್‌ನಲ್ಲಿ ಕಳೆದ ಒಂದುವರೆ ತಿಂಗಳಿನಿಂದ ಕುಡಿವ ನೀರು ಪೂರೈಕೆ ಆಗುತ್ತಿಲ್ಲ ಎಂದು ಮಹಿಳೆಯರು ಮಂಗಳವಾರ ನೀರಿನ ತೊಟ್ಟಿ ಎದುರು ಪ್ರತಿಭಟಿಸಿದರು.

Advertisement

ವಾರ್ಡ್‌ನಲ್ಲಿನ ಕೊಳವೆಬಾವಿಯ ಮೋಟರ್‌ ದುರಸ್ತಿಗೊಳಪಟ್ಟು ಒಂದುವರೆ ತಿಂಗಳು ಕಳೆದಿದೆ. ಕಳೆದ 8 ದಿನಗಳ ಹಿಂದೆ ಪುರಸಭೆ ಸಿಬ್ಬಂದಿ ಕೊಳವೆಬಾವಿಯ ಮೋಟರ್‌ ಬಿಚ್ಚಿಕೊಂಡು ಹೋಗಿದ್ದು, ಇವರೆಗೂ ಮೋಟರ್‌ ಅಳವಡಿಸದೇ ನಿರ್ಲಕ್ಷ ತೋರುತ್ತಿದ್ದಾರೆ. ಈ ಬಗ್ಗೆ ತಿಳಿಸಿದರೂ ಯಾರು ಗಮನಹರಿಸುತ್ತಿಲ್ಲ. ನಿತ್ಯ ವಾರ್ಡ್‌ನ ಜನತೆ ನೀರಿಗಾಗಿ ಅಲೆಯಬೇಕಾದ ಸ್ಥಿತಿ ಬಂದಿದೆ ಎಂದು ವಾರ್ಡ್‌ನ ನಿವಾಸಿಗಳಾದ ತಿಪ್ಪಮ್ಮ ಎಲಿಗಾರ, ಹಂಪಮ್ಮ ಬಸಾಪುರ, ರೇಖಾ ಬಾಯಿ, ಪದ್ದುಬಾಯಿ ದೂರಿದರು.

ಸ್ಥಳಕ್ಕೆ ಆಗಮಿಸಿದ ಪುರಸಭೆ ವಾಟರ್‌ಮನ್‌ಗೆ ವಾರ್ಡ್‌ನ ನಿವಾಸಿಗಳು ತರಾಟೆಗೆ ತೆಗದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next