Advertisement

ಅಂಡರ್‌ಪಾಸ್‌ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ

04:07 PM Feb 14, 2021 | Team Udayavani |

ಕೊಂಡ್ಲಹಳ್ಳಿ: ಬಿ.ಜಿ. ಕೆರೆ ಗ್ರಾಮದ ಹಳೆ ಊರಿನಿಂದ ಬಸವೇಶ್ವರ ಬಡಾವಣೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್‌ಪಾಸ್‌ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.

Advertisement

ಸಿಪಿಐ ತಾಲೂಕು ಕಾರ್ಯದರ್ಶಿ ಜಾಫರ್‌ ಷರೀಪ್‌ ಮಾತನಾಡಿ, ಗ್ರಾಮದ ಬಸವೇಶ್ವರ ಬಡಾವಣೆಯಲ್ಲಿ ಸರ್ಕಾರಿ ಪಬ್ಲಿಕ್‌ ಶಾಲೆ, ಹಾಸ್ಟೆಲ್‌, ಜಗಜೀವನ್‌ರಾಮ್‌ ಭವನ, ವಾಲ್ಮೀಕಿ ಭವನ, ಶುದ್ಧ ನೀರಿನ ಘಟಕಗಳಿವೆ. ಇದೇ ಮಾರ್ಗದಲ್ಲಿ ಊರಿನ 500-600 ರೈತರ ಜಮೀನುಗಳಿವೆ. ಆದರೆ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಗ್ರಾಮದಂಚಿನಲ್ಲಿ ಮೀಸಲು ಮಲ್ಲೂರಳ್ಳಿ ಅರಣ್ಯ ಕಾವಲು ಪ್ರದೇಶ ಇದೆ. ಹೆದ್ದಾರಿ ಪ್ರಾಧಿಕಾರದ ಅ ಧಿಕಾರಿಗಳು ರಸ್ತೆ ನಿರ್ಮಿಸದೆ ಅನ್ಯಾಯ ಮಾಡಿದ್ದಾರೆ.

ಅಂಡರ್‌ ಪಾಸ್‌ ನಿರ್ಮಿಸಿಕೊಡುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ರಸ್ತೆ ಇಲ್ಲದಂತಾಗಿ ವಿದ್ಯಾರ್ಥಿಗಳು, ಗ್ರಾಮಸ್ಥರು 2 ರಿಂದ 3 ಕಿಮೀ ಸುತ್ತುಹಾಕಿ ಸಂಚಾರ ಮಾಡಬೇಕಿದೆ ಎಂದು ದೂರಿದರು. ಸ್ಥಳಕ್ಕೆ ಭೇಟಿ ನೀಡಿದ ಪ್ರಭಾರಿ ತಹಶೀಲ್ದಾರ್‌ ಆನಂದಮೂರ್ತಿ ಮಾತನಾಡಿ, ನಿಮ್ಮ ಬೇಡಿಕೆ ನ್ಯಾಯಯುತವಾಗಿದೆ. ಹೆದ್ದಾರಿ ಪ್ರಾ  ಧಿಕಾರ ಅ ಧಿಕಾರಿಗೆ ಸೋಮವಾರ ಸ್ಥಳಕ್ಕೆ ಬರಲು ಸೂಚಿಸಲಾಗಿದೆ. ಅವರೊಂದಿಗೆ ಈ ಬಗ್ಗೆ ಚರ್ಚಿಸೋಣ ಎಂದರು.

ಇದನ್ನೂ ಓದಿ:ತೋಟಕ್ಕೆ ಕಾಡುಕೋಣ ದಾಳಿ

ಆಗ ಧರಣಿಯನ್ನು ತಾತ್ಕಾಲಿಕವಾಗಿ ವಾಪಸ್‌ ಪಡೆಯಲಾಯಿತು. ಸಿಪಿಐ ಜೆ. ಉಮೇಶ್‌ ನಾಯಕ್‌, ಪಿಎಸ್‌ಐ ಎಂ. ಬಸವರಾಜ್‌ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಮಾಡಿದ್ದರು.ಮುಖಂಡರಾದ ಗೊಂಚಿಗಾರ್‌ ಮಲ್ಲಿಕಾರ್ಜುನ್‌, ಗಾದ್ರಯ್ಯ, ಓಬಣ್ಣ,  ಎಂ.ಪಿ. ನಾಗರಾಜ್‌, ಯರ್ರಿಸ್ವಾಮಿ, ಬೋರಯ್ಯ, ರಾಘವೇಂದ್ರ, ತಿಪ್ಪೇಶ್‌, ಕಾಮಯ್ಯ, ಮರಲ್‌ ಬಸಣ್ಣ, ಭೀಮಣ್ಣ, ಮಹೇಶ್‌, ನಾಗನಗೌಡ, ಜಯಮ್ಮ, ಗಂಗಮ್ಮ,ತಿಪ್ಪೇಸ್ವಾಮಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next