Advertisement

ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

12:41 PM Jul 21, 2019 | Team Udayavani |

ಗಂಗಾವತಿ: ತಾಲೂಕಿನ ನವವೃಂದಾವನ ಗಡ್ಡಿಯಲ್ಲಿರುವ ವ್ಯಾಸರಾಜರ ವೃಂದಾವನವನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳ ಕ್ರಮ ಖಂಡಿಸಿ ಬ್ರಾಹ್ಮಣ ಸಮಾಜದವರು ಹಾಗೂ ಇತರ ಸಮಾಜದವರು ಪ್ರತಿಭಟನಾ ಮೆರವಣಿಗೆ ನಡೆಸಿ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು.

Advertisement

ಈ ಸಂದರ್ಭದಲ್ಲಿ ಸಮಾಜದ ಮುಖಂಡ ಶ್ರೀರಾಮನಗರದ ಸತ್ಯನಾರಾಯಣರಾವ್‌ ದೇಶಪಾಂಡೆ ಮಾತನಾಡಿ, ವಿಜಯನಗರದ ಅರಸರ ಗುರುಗಳಾಗಿದ್ದ ವ್ಯಾಸರಾಜ ಗುರುಗಳು ಸರ್ವ ಸಮಾಜಕ್ಕೂ ಬೇಕಾದ ಯತಿಗಳಾಗಿದ್ದರು. ಆದ್ದರಿಂದಲೇ ವಿಜಯನಗರ ಸಾಮ್ರಾಜ್ಯದ ಅರಸ ಶ್ರೀಕೃಷ್ಣದೇವರಾಯ ಅವರ ಕುಹಾ ದೋಷ ನಿವಾರಿಸಿದವರು. ಇಂತಹ ಯತಿಗಳ ವೃಂದಾವನ ಸ್ಮಾರಕವಾಗಿದ್ದು, ಇದರ ರಕ್ಷಣೆ ಎಲ್ಲರ ಹೊಣೆಯಾಗಿದೆ. ಬ್ರಾಹ್ಮಣ ಸಮಾಜ ಇಂತಹ ಕತ್ಯಗಳ ಬಗ್ಗೆ ವ್ಯಾಪಕ ಪ್ರತಿಭಟನೆ ಮಾಡಬೇಕು. ಹಿರಿಯರು ಯುವಕರಿಗೆ ಮಾರ್ಗದರ್ಶನ ಮಾಡುತ್ತಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ಶೇ. 80ರಷ್ಟಿದ್ದರೂ ಬ್ರಾಹ್ಮಣ ಸಮಾಜ ಸಂಘಟಿತವಾಗುತ್ತಿಲ್ಲ. ದುಷ್ಕರ್ಮಿಗಳು ಇದನ್ನೇ ವೈಫಲ್ಯ ಎಂದು ಕೊಂಡು ಮೇಲಿಂದ ಮೇಲೆ ದಾಳಿ ಮಾಡುತ್ತಿದ್ದು ಈಗಲೇ ಜಾಗೃತಿಯಾಗಬೇಕಿದೆ. ಸರಕಾರ ತನಿಖೆ ನಡೆಸಿ ಕೃತ್ಯ ಎಸಗಿದವರನ್ನು ಕೂಡಲೇ ಬಂಧಿಸಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಮಾತನಾಡಿ, ಹಿಂದೂ ಧರ್ಮ ಸಂರಕ್ಷಣೆ ಮಾಡಿದವರಲ್ಲಿ ಪೂಜ್ಯ ವ್ಯಾಸರಾಜರು ಒಬ್ಬರಾಗಿದ್ದು ಇಂತಹ ಪುಣ್ಯಪುರುಷರ ವೃಂದಾವನ ನಾಶ ಮಾಡುವ ಮೂಲಕ ದುಷ್ಕರ್ಮಿಗಳು ಮಹಾ ಪಾಪ ಮಾಡಿದ್ದಾರೆ. ಇವರನ್ನು ಪೊಲೀಸ್‌ ಇಲಾಖೆ ಪತ್ತೆ ಮಾಡಿ ಬಂಧಿಸಬೇಕು ಎಂದರು.

ಪ್ರತಿಭಟನೆ ಮೆರವಣಿಗೆ ವೆಂಕಟೇಶ್ವರ ಗುಡಿಯಿಂದ ಶ್ರೀಕಷ್ಣದೇವರಾಯ ವತ್ತದವರೆಗೆ ಜರುಗಿತು. ಪ್ರತಿಭಟನೆಯಲ್ಲಿ ರೈತ ಹೋರಾಟಗಾರ ತಿಪ್ಪೇರುದ್ರಸ್ವಾಮಿ, ಜೋಗದ ಹನುಮಂತಪ್ಪ ನಾಯಕ, ಸಂಘ ಪರಿವಾರದ ನೀಲಕಂಠ ನಾಗಶೆಟ್ಟಿ, ನಗರಸಭೆ ಸದಸ್ಯ ವಾಸುದೇವ ನವಲಿ, ಎಸ್‌.ಬಿ.ಎಚ್. ನಾರಾಯಣರಾವ್‌, ವಿಜಯ ಹೇರೂರು, ರಾಘವೇಂದ್ರಶೆಟ್ಟಿ, ಮಂಜುನಾಥ ಪತ್ತಾರ, ನ್ಯಾಯವಾದಿ ಪ್ರಹ್ಲಾದರಾವ್‌ ನವಲಿ, ಶರದ್‌ ದಂಡಿನ್‌, ಯಲಬುರ್ಗಾ ರಾಮರಾಮರಾವ್‌, ಪತ್ರಕರ್ತರಾದ ನವಲಿ ರಾಮಮೂರ್ತಿ, ಪ್ರಸನ್ನ ದೇಸಾಯಿ, ಹರೀಶ ಕುಲಕರ್ಣಿ, ವೆಂಕಟೇಶ ಜಂತಗಲ್, ವೀರಾಪೂರ ಕೃಷ್ಣ, ಪ್ರತೀಮಾ ನವಲಿ, ಸತೀಶ ದಂಡೀನ್‌ ಸೇರಿ ಕನಕಗಿರಿ, ಕಾರಟಗಿ, ಶ್ರೀ ರಾಮನಗರದ ಬ್ರಾಹ್ಮಣ ಸಮಾಜದ ನೂರಾರು ಜನರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next