Advertisement

Protest; ಮಧುಗಿರಿ ಇಇ ಮತ್ತು ಕೊರಟಗೆರೆ ಎಇ ಅಮಾನತಿಗೆ ಆಗ್ರಹ

12:55 AM Nov 09, 2023 | Team Udayavani |

ಕೊರಟಗೆರೆ: ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಪಂಚಾಯತ್ ರಾಜ್ ಇಲಾಖೆಯ ಗುತ್ತಿಗೆ ಟೆಂಡರ್ ಪ್ರಕ್ರಿಯೆಯಲ್ಲಿ ಮೀಸಲಾತಿಯನ್ನೇ ಕೈಬೀಟ್ಟು ಮಧುಗಿರಿ ಇಇ ಮತ್ತು ಕೊರಟಗೆರೆ ಎಇ ಕರ್ತವ್ಯಲೋಪ ಮಾಡಿದ್ದಾರೆ ಎಂದು ಆರೋಪಿಸಿ ಎಸ್‌ಸಿ/ಎಸ್‌ಟಿ ಗುತ್ತಿಗೆದಾರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ನಡೆಯಿತು.

Advertisement

ಕೊರಟಗೆರೆ ಪಟ್ಟಣದ ಪಂಚಾಯತ್‌ರಾಜ್ ಇಲಾಖೆಯ 60 ಲಕ್ಷ ರೂ. ಮೌಲ್ಯದ 7 ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆಸುವ ವೇಳೆ ಕೊರಟಗೆರೆ ಎಇಇ ನೀಡಿರುವ ಮೀಸಲಾತಿ ಅಂಕಿಅಂಶದ ವರಧಿಯನ್ನೇ ಮಧುಗಿರಿ ಇಇ ಮತ್ತು ಕೊರಟಗೆರೆ ಎಇ ತಿರಸ್ಕರಿಸಿ ಸರಕಾರದ ಆದೇಶವನ್ನೇ ಉಲ್ಲಂಘಿಸಿ ಕರ್ತವ್ಯಲೋಪ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಕೊರಟಗೆರೆ ಎಸ್‌ಸಿ/ಎಸ್‌ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಲಕ್ಷ್ಮೀ ನರಸಯ್ಯ ಮಾತನಾಡಿ ಎಸ್‌ಸಿ/ಎಸ್‌ಟಿ ಗುತ್ತಿಗೆ ಮೀಸಲಾತಿಯನ್ನೇ ಕೈಬಿಟ್ಟು 60 ಲಕ್ಷ ಅನುದಾನದ 7 ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದೆ. ನಾವು ಎಇ ಮುಷೀರ್‌ಗೆ ಟೆಂಡರ್ ಪ್ರತಿ ಕೇಳಿದ್ರೇ ಉಡಾಫೆ ಉತ್ತರ ನೀಡ್ತಾರೇ. ಮಧುಗಿರಿ ಇಇ ದಯಾನಂದ್ ಮತ್ತು ಕೊರಟಗೆರೆೆ ಎಇ ಮುಷೀರ್ ಕರ್ತವ್ಯಲೋಪ ಪರಿಗಣಿಸಿ ಜಿಪಂ ಸಿಇಓ ಅಮಾನತು ಮಾಡಬೇಕಿದೆ ಎಂದು ಆಗ್ರಹಿಸಿದರು.

ಕೊರಟಗೆರೆ ಎಸ್‌ಸಿ/ಎಸ್‌ಟಿ ಗುತ್ತಿಗೆದಾರ ಲಕ್ಷ್ಮೀ ನಾರಾಯಣ್ ಮಾತನಾಡಿ ಕೊರಟಗೆರೆ ಪಿಆರ್‌ಇಡಿ ಇಲಾಖೆಯಲ್ಲಿ ಎಸ್‌ಸಿ/ಎಸ್‌ಟಿ ಗುತ್ತಿಗೆದಾರರಿಗೆ ಅನ್ಯಾಯ ಆಗಿದೆ. ಕೊರಟಗೆರೆ ಎಇಇ ರವಿಕುಮಾರ್ ನೀಡಿರುವ ಮೀಸಲಾತಿ ಅನುಧಾನದ ಅಂಕಿಅಂಶದ ಆದೇಶವನ್ನೇ ಬದಿಗಿಟ್ಟು ಕೊರಟಗೆರೆ ಎಇ ಮತ್ತು ಮಧುಗಿರಿ ಇಇ ಕರ್ತವ್ಯಲೋಪ ಮಾಡಿದ್ದಾರೆ. ತಪ್ಪಾದ ನಂತರ ತಿದ್ದಿ ಮರು ಟೆಂಡರ್ ಮಾಡ್ತೀವಿ ಎಂಬ ಜಾಣತಾಳ್ಮೆ ತೋರಿಸ್ತಾರೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಗುತ್ತಿಗೆದಾರ ಬಸವರಾಜು, ನಾಗೇಶ್, ಅಶ್ವತ್ಥಪ್ಪ, ಗೋವಿಂದರಾಜು, ದಾಡಿವೆಂಕಟೇಶ್, ಪ್ರಸನ್ನಕುಮಾರ್, ಪ್ರಶಾಂತ್, ಕದರಪ್ಪ, ಹನುಮಂತರಾಜು, ಕಾಮರಾಜು, ನಂದನಕುಮಾರ್, ಗೋಪಿನಾಥ್ ಸೇರಿದಂತೆ ಇತರರು ಇದ್ದರು.

Advertisement

ರಾಜ್ಯ ಸರಕಾರದ ಆದೇಶವೇ ಉಲ್ಲಂಘನೆ..
ಪಿಆರ್‌ಇಡಿ ಇಲಾಖೆಯ ಕಾಮಗಾರಿಯಲ್ಲಿ ಎಸ್‌ಸಿ/ಎಸ್‌ಟಿ ಗುತ್ತಿಗೆದಾರರಿಗೆ ಮೀಸಲಾತಿ ನೀಡುವಂತೆ 2007 ರಲ್ಲಿ ಆದೇಶ ಮಾಡಿದೆ. ಕೊರಟಗೆರೆಯ ಪಂಚಾಯತ್‌ರಾಜ್ ಇಲಾಖೆಯಲ್ಲಿ ಪ್ರಸ್ತುತವರ್ಷ 60 ಲಕ್ಷ ರೂ ಅನುದಾನದ7 ಕಾಮಗಾರಿಗಳಿವೆ.7 ಕಾಮಗಾರಿಯಲ್ಲಿ 2 ಎಸ್‌ಸಿ, 1 ಎಸ್‌ಟಿ ಮತ್ತು4 ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟು ಕೊರಟಗೆರೆ ಎಇಇ ರವಿಕುಮಾರ್ ಸರಕಾರದ ಆದೇಶದಂತೆ ಮಧುಗಿರಿ ಇಇ ಕಚೇರಿಗೆ ಅ.17 ರಂದೇ ಕಳುಹಿಸಿರುವ ಪ್ರತಿಗಳಿವೆ. ಕೊರಟಗೆರೆ ಎಇ ಮುಷೀರ್ ಅಹಮ್ಮದ್ ಮತ್ತು ಮಧುಗಿರಿ ಇಇ ದಯಾನಂದ್ ಸರಕಾರದ ಆದೇಶ ಉಲ್ಲಂಘಿಸಿ 7 ಕಾಮಗಾರಿಯನ್ನೇ ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟು ಟೆಂಡರ್ ಮುಗಿಸಿರುವುದೇ ಗುತ್ತಿಗೆದಾರರ ಆಕ್ರೋಶಕ್ಕೆ ಕಾರಣವಾಗಿದೆ.

60 ಲಕ್ಷ ಅನುದಾನದ 7 ಕಾಮಗಾರಿಯ ಟೆಂಡರ್ ಪ್ರಕ್ರಿಯೆಗೆ ಈಗಾಗಲೇ ತಡೆ ನೀಡಲಾಗಿದೆ. ಕಂಪ್ಯೂಟರ್ ಟೆಕ್ನಿಕಲ್ ಸಮಸ್ಯೆಯಿಂದ ಟೆಂಡರ್ ಪ್ರಕ್ರಿಯೆಯಲ್ಲಿ ಲೋಪವಾಗಿದೆ. ಮಧುಗಿರಿ ಮತ್ತು ಕೊರಟಗೆರೆ ಕಚೇರಿಯಲ್ಲಿ ಅಧಿಕಾರಿಗಳ ಕೊರತೆ ಸಾಕಾಷ್ಟಿದೆ. ಗುತ್ತಿಗೆ ಮೀಸಲಾತಿ ನೀಡೋದು ನಮ್ಮ ಪ್ರಮುಖ ಕರ್ತವ್ಯ. ಕೆಲಸದ ಒತ್ತಡದಿಂದ ಇಂತಹ ಲೋಪವಾಗಿದ್ದು ಮತ್ತೇ ಇಂತಹ ಘಟನೆ ನಡಿಯೋದಿಲ್ಲ.
ದಯಾನಂದ್. ಇಇ. ಪಿಆರ್‌ಇಡಿ ಇಲಾಖೆ. ಮಧುಗಿರಿ

Advertisement

Udayavani is now on Telegram. Click here to join our channel and stay updated with the latest news.

Next