Advertisement

ನ್ಯಾಯವಾದಿ ಸಂಜೀವ ಪುನಾಳೆಕರ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ

12:29 PM May 28, 2019 | Suhan S |

ಸಾಗರ: ರಾಷ್ಟ್ರಪ್ರೇಮಿ ಹಾಗೂ ಪ್ರಖರ ಹಿಂದೂವಾದಿ ಸಂಜೀವ ಪುನಾಳೆಕರ ಅವರ ಬಂಧನ ಖಂಡಿಸಿ ಕೂಡಲೇ ಪುನಾಳೆಕರ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ನಗರದ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಸೋಮವಾರ ಉಪವಿಭಾಗಾಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಮುಂಬೈನ ರಾಷ್ಟ್ರಪ್ರೇಮಿ, ಪ್ರಖರ ಹಿಂದುತ್ವನಿಷ್ಟ ಹಾಗೂ ಹಿಂದೂ ವಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ಪುನಾಳೆಕರ ಹಾಗೂ ಮಾಹಿತಿಹಕ್ಕು ಕಾರ್ಯಕರ್ತ ವಿಕ್ರಮ ಭಾವೆ ಅವರನ್ನು ಕೇಂದ್ರೀಯ ತನಿಖಾ ಸಂಸ್ಥೆ ಮೇ 25ರಂದು ದಾಬೋಲ್ಕರ್‌ ಹತ್ಯೆ ಪ್ರಕರಣದಲ್ಲಿ ಬಂಧಿಸಿದೆ. ಡಾ| ನರೇಂದ್ರ ದಾಬೋಲ್ಕರ್‌ ಇವರ ಹತ್ಯೆಯ ತನಿಖೆಯು ಕೇಂದ್ರೀಯ ತನಿಖಾ ತಂಡವು ನಡೆಸುತ್ತಿದೆ.

ಈ ಪ್ರಕರಣದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಿಬಿಐ ಅನೇಕ ಅಮಾಯಕ ಹಿಂದೂಗಳನ್ನು ಶಂಕಿತರೆಂದು ಬಂಧಿಸಿರುವ ಕ್ರಮ ಅವೈಜ್ಞಾನಿಕವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪ್ರಕರಣದಲ್ಲಿ ನ್ಯಾಯವಾದಿ ಪುನಾಳೆಕರ ಇವರನ್ನು 10 ತಿಂಗಳ ಹಿಂದಿನ ಓರ್ವ ಶಂಕಿತ ಆರೋಪಿ ನೀಡಿದ ಹೇಳಿಕೆಯ ಮೇಲೆ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಸಿಬಿಐನ ಈ ಕ್ರಮ ಅತ್ಯಂತ ತಪ್ಪು ನಿರ್ಧಾರ. ಈ ಎಲ್ಲ ಪ್ರಕರಣಗಳಲ್ಲಿ ಸಿಬಿಐ ನಡೆ ಸಂದೇಹಾಸ್ಪದ ಹಾಗೂ ಹಿಂದುತ್ವವಾದಿಗಳ ಮೇಲೆ ಒತ್ತಡ ತರುವ ಪ್ರಯತ್ನವಾಗಿದೆ. ಹಿಂದುತ್ವವಾದಿ ಎಂದು ಹೇಳಿಕೊಳ್ಳುವ ಸರ್ಕಾರ ಅಧಿಕಾರದಲ್ಲಿರುವಾಗಲೇ ಇಂತಹ ಘಟನೆಗಳು ನಡೆಯುತ್ತಿರುವುದು ಹಿಂದೂಗಳಿಗೆ ಆಘಾತವನ್ನು ತಂದೊಡ್ಡಿದೆ ಎಂದು ತಿಳಿಸಲಾಗಿದೆ.

ಡಾ| ದಾಬೋಲಕರ, ಡಾ| ಗೋವಿಂದ ಪಾನಸಾರೆ, ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣಗಳ ತನಿಖೆ ನಡೆಸುವ ಸಿಬಿಐ ಅಧಿಕಾರಿ ನಂದಕುಮಾರ ನಾಯರ್‌ ಅವರ ಕುಕೃತ್ಯಗಳ ಬಗ್ಗೆ ಕೇರಳ ಉಚ್ಛನ್ಯಾಯಾಲಯವು ಈ ಅಕಾರಿ ಸಿಬಿಐಗೆ ಕಳಂಕವಾಗಿದ್ದಾರೆ ಎಂದು ಮಾತುಗಳಲ್ಲಿ ಚಾಟಿ ಬೀಸಿತ್ತು ಎಂಬುದನ್ನು ನ್ಯಾಯವಾದಿ ಪುನಾಳೆಕರ ಬಯಲಿಗೆ ಎಳೆದು ಇಂತಹ ಕಳಂಕಿತ ಅಧಿಕಾರಿಗಳು ಹಿಂದುತ್ವವಾದಿಗಳನ್ನು ಯಾವ ರೀತಿ ಸಿಲುಕಿಸುತ್ತಿದ್ದಾರೆ ಎಂಬ ಸಂಚನ್ನು ಬಯಲಿಗೆ ಎಳೆದಿತ್ತು ಎಂದು ಮನವಿಯಲ್ಲಿ ಹೇಳಲಾಗಿದೆ.

Advertisement

ವಿಕ್ರಮ ಭಾವೆಯವರು ಮಾಲೇಗಾಂವ್‌ ಸೋಟದ ಹಿಂದಿರುವ ಅದೃಶ್ಯ ಕೈ ಎಂಬ ಪುಸ್ತಕ ಬರೆದು ಮಾಲೇಗಾಂವ್‌ ಸೋಟದ ನಿಜವಾದ ಸ್ವರೂಪವನ್ನು ಬಯಲಿಗೆ ಎಳೆದಿದ್ದರು. ಅನೇಕ ಸ್ಥಳೀಯ ಸಹಕಾರ ಸಂಸ್ಥೆಗಳಲ್ಲಿ ಭ್ರಷ್ಟಾಚಾರಗಳನ್ನು ಮಾಹಿತಿ ಹಕ್ಕು ಅಧಿಕಾರದ ಮೂಲಕ ಬಯಲಿಗೆ ಎಳೆದಿದ್ದರು. ಇದೆಲ್ಲವನ್ನೂ ಸಹಿಸಿಕೊಳ್ಳಲು ಆಗದೆ ಪುನಾಳೆಕರ ಮತ್ತು ವಿಕ್ರಮ ಭಾವೆ ಅವರ ಧ್ವನಿ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ತಕ್ಷಣ ಇಬ್ಬರನ್ನೂ ಬಿಡುಗಡೆ ಮಾಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸಮಿತಿಯ ಶಾಂತಾ, ಆಶಾ, ಶೈಲಾ, ಪ್ರಮುಖರಾದ ಸುದರ್ಶನ್‌ ಕೆ.ಎಚ್., ಕೆ.ವಿ. ಪ್ರವೀಣಕುಮಾರ್‌, ರಾಜು ಬಿ. ಮಡಿವಾಳ, ಶ್ರೀಧರ ಸಾಗರ, ಕುಮಾರ್‌, ರಾಜು ಇತರರು ಉಪಸ್ಥಿತರಿದ್ದರು.

ಹಿಂದುತ್ವ ನಿಷ್ಟ ನ್ಯಾಯವಾದಿ ಸಂಜೀವ ಪುನಾಳೆಕರ ಅವರ ಬಂಧನ ಖಂಡಿಸಿ, ಅವರ ಬಿಡುಗಡೆಗೆ ಒತ್ತಾಯಿಸಿ ಸೋಮವಾರ ಹಿಂದು ಜನ ಜಾಗೃತಿ ಸಮಿತಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಸಂಜೀವ ಪುನಾಳೇಕರ ಅವರು ಹಿಂದು ವಿಜ್ಞ ಪರಿಷತ್‌ನ ರಾಷ್ಟ್ರೀಯ ಕಾರ್ಯದರ್ಶಿ ಆಗಿದ್ದವರು, ರಾಷ್ಟ್ರಪ್ರೇಮಿಯೂ ಹೌದು. ಇವರ ಜೊತೆಗೆ ಮಾಹಿತಿ ಹಕ್ಕು ಕಾರ್ಯಕರ್ತ ವಿಕ್ರಮ ಬಾವೆ ಇವರನ್ನು ಕೇಂದ್ರೀಯ ತನಿಖಾ ತಂಡ (ಸಿಬಿಐ) ದಾಬೋಲರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 25 ರಂದು ಬಂಧಿಸಿದೆ. ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಮೂರು ವರ್ಷಗಳಲ್ಲಿ ಸಿಬಿಐ ಅನೇಕ ಅಮಾಯಕ ಹಿಂದುಗಳನ್ನು ಶಂಕಿತರೆಂದು ಬಂಧಿಸುತ್ತಿದೆ. ಹಿಂದುತ್ವವಾದಿ ಎಂದು ಹೇಳಿಕೊಳ್ಳುವ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಈ ರೀತಿ ನಡೆಯುತ್ತಿರುವುದು ಹಿಂದುಗಳಿಗೆ ಅಘಾತವಾಗಿದೆ. ಕೂಡಲೇ ಇವರನ್ನು ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ವಿಜಯರೇವಣಕರ್‌, ವೆಂಕಟೇಶ್‌, ಪವನ್‌, ಅಶ್ವಿ‌ನಿ, ಸೌಮ್ಯಾ, ಮುಕುಂದ್‌, ಬಾಲಸುಬ್ರಮಣ್ಯ, ಶಿವು ಇತರರಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next