Advertisement

ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಕೈಬಿಡುವಂತೆ ಆಗ್ರಹಿಸಿ ಪ್ರತಿಭಟನೆ

10:26 AM Mar 03, 2019 | |

ಶಹಾಪುರ: ರಾಜ್ಯ ಸರ್ಕಾರ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವುದನ್ನು ಇಲ್ಲಿನ ಕರ್ನಾಟಕ ಪ್ರಾಂತ ರೈತ ಸಂಘ ಖಂಡಿಸಿ ತಹಶೀಲ್ದಾರ್‌ ಕಚೇರಿ ಎದರು ಭೂ ಸ್ವಾಧೀನ ತಿದ್ದುಪಡಿ ಮಸೂದೆ ಪ್ರತಿಗೆ ಬೆಂಕಿ ಹಚ್ಚುವ ಮೂಲಕ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಚನ್ನಪ್ಪ ಆನೇಗುಂದಿ, ರಾಜ್ಯ ಸರ್ಕಾರ ಮೊನ್ನೆ ನಡೆದ ಅಧಿವೇಶನದಲ್ಲಿ ಭೂ ಸ್ವಾಧೀನ ತಿದ್ದುಪಡಿ ಕುರಿತು ಯಾವೊಂದು ವಿಷಯ ಚರ್ಚೆ ಮಾಡದೇ ಏಕಾಏಕಿ ಭೂ ಸ್ವಾಧೀನ ಪುನರ್ವಸತಿ ಹಾಗೂ ಪುನರವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕ ಹಕ್ಕು ಕರ್ನಾಟಕ ತಿದ್ದುಪಡಿ ಮಸೂದೆ 2019 ಅಂಗಿಕರಿಸಿರುವುದು ಸೂಕ್ತವಲ್ಲ. ಸರ್ಕಾರಕೂಡಲೇ ಈ ಮಸೂದೆ ತಿದ್ದುಪಡಿ ವಾಪಾಸ್‌ ಪಡೆಯಬೇಕು.

Advertisement

ಇದು ರೈತ ವಿರೋಧಿ ನೀತಿಯಾಗಿದೆ. ಯಾವುದೇ ಮಸೂದೆ ತಿದ್ದುಪಡಿ ಮಾಡುವ ಸಾಧಕ ಬಾಧಕ ಕುರಿತು ಸಂಬಂಧಿಸಿದ ನಾಗರಿಕರೊಂದಿಗೆ ವಿಧಾನಸಭೆಯಲ್ಲಿ ಅಧಿವೇಶನದಲ್ಲಿ ಚರ್ಚಿಸಿ ನಿರ್ಣಯಕೊಳ್ಳಬೇಕು. ಈ ಮಸೂದೆಯಿಂದ ರೈತರಿಗೆ ಅನಾನುಕೂಲವಾಗಲಿದೆ. ಕಾರಣ ತಿದ್ದುಪಡಿ ಮಾಡುವ ಮೊದಲು ರೈತರ ಸಂಘದವರೊಡನೆ ಮಾತುಕತೆ ನಡೆಸಬೇಕಿತ್ತು. ಕನಿಷ್ಠ ಪಕ್ಷ ಅಧಿವೇಶನದಲ್ಲಿ ಚರ್ಚಿಸಬೇಕಿತ್ತು. ಯಾವುದೇ ಮುಂಚಿತವಾಗಿ ಸಭೆ ಕರೆಯದೇ ಏಕಾಏಕಿ ಭೂ ಸ್ವಾಧೀನ ಮಸೂದೆ ತಿದ್ದುಪಡಿ ಮಾಡಿ ಅಂಗೀಕಾರಗೊಳಿಸುವುದು ಸರಿಯಲ್ಲ ಎಂದು
ಹೇಳಿದರು. 

ಎಸ್‌.ಎಂ. ಸಾಗರ ಮಾತನಾಡಿ, ಭೂ ಸ್ವಾಧೀನ ಮಸೂದೆ ತಿದ್ದುಪಡಿಯಿಂದ ರೈತರಿಗೆ ತೊಂದರೆಯಾಗಲಿದೆ. ಮೊದಲೇ ಬರದಿಂದ ತತ್ತರಿಸಿದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಸೂದೆ ಜಾರಿಯಾದರೆ ಇನ್ನಷ್ಟು ಸಂಕಷ್ಟಕ್ಕೀಡು ಆಗಲಿದ್ದಾರೆ. ಈ ತಿದ್ದುಪಡಿ ಮಸೂದೆಯನ್ನು ರೈತರಿಂದ ಮತ್ತು ವಿರೋಧ ಪಕ್ಷದವರಿಂದ ಯಾವುದೇ ವಿಮರ್ಶೆ ಪಡೆಯದೆ ನಿಯಮನುಸಾರ ಚರ್ಚಿಸದೇ ಅಂಗೀಕಾರಕ್ಕೆ ಕಳುಹಿಸಿದ್ದು, ಇದನ್ನು ರೈತ ಸಮುದಾಯ ತೀವ್ರವಾಗಿ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಭೂಸ್ವಾಧೀನ ತಿದ್ದುಪಡಿ ಮಸೂದೆ ಪ್ರತಿಯನ್ನು ಬೆಂಕು ಹಚ್ಚುವ ಮೂಲಕ ರೈತರಿಂದ ಆಕ್ರೋಶ ವ್ಯಕ್ತವಾಯಿತು. ವಿಜಯ ರಾಠೊಡ, ಬಸವರಾಜ ಭಜಂತ್ರಿ, ಮಲ್ಲಣ್ಣಗೌಡ ಮಾಲಿಪಾಟೀಲ, ಶಿವಪ್ಪ ಪೂಜಾರಿ, ಜೈಲಾಲ್‌ ತೋಟದಮನಿ, ಹಣಮಂತ್ರಾಯಗೌಡ ತಿಪ್ಪನಳ್ಳಿ ಸೇರಿದಂತೆ ರಾಜು ಚವ್ಹಾಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next