Advertisement

ಹಾಸ್ಟೆಲ್‌ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

04:25 PM Dec 03, 2019 | Suhan S |

ತಾಳಿಕೋಟೆ: ಪಟ್ಟಣದ ಸರಕಾರಿ ಮೆಟ್ರಿಕ್‌ ನಂತರದ ಬಾಲಕರ ಹಾಸ್ಟೆಲ್‌ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿಯ ಅವ್ಯವಸ್ಥೆ ಖಂಡಿಸಿ ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ಪಟ್ಟಣದ ದೇವರಹಿಪ್ಪರಗಿ ರಸ್ತೆಯಲ್ಲಿರುವ ಜಿಪಂ, ಸಮಾಜ ಕಲ್ಯಾಣಇಲಾಖೆ ಸರಕಾರಿ ಮೆಟ್ರಿಕ್‌ ನಂತರ ಹಾಸ್ಟೆಲ್‌ ನಲ್ಲಿರುವ ನೂರಾರು ವಿದ್ಯಾರ್ಥಿಗಳು ದಿಢೀರ್‌ ಪ್ರತಿಭಟನೆಗಿಳಿದರು. ಹಾಸ್ಟೆಲ್‌ ನಲ್ಲಿಯ ಅವ್ಯವಸ್ಥೆ ಕುರಿತು ವಿದ್ಯಾರ್ಥಿಗಳುನಿವೃತ್ತ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಬಿ. ಕಟ್ಟಿಮನಿ ಅವರಿಗೆ ದೂರವಾಣಿ ಮೂಲಕಹಾಸ್ಟೆಲ್‌ನಲ್ಲಿಯ ಅವ್ಯವಸ್ಥೆ ಬಿಚ್ಚಿಟ್ಟರು. ಸ್ಥಳಕ್ಕೆ ಆಗಮಿಸಿದ ಕಟ್ಟಿಮನಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು.

ನಂತರ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎನ್‌.ಆರ್‌. ಉಂಡಿಗೇರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ವಿವರಿಸಿ ತರಾಟೆಗೆ ತೆಗೆದುಕೊಂಡರು. ಪ್ರತಿಭಟನಾ ವಿಷಯ ಅರಿತ ಅಧಿಕಾರಿ ಉಂಡಿಗೇರಿ ಹಾಸ್ಟೆಲ್‌ಗೆ ಆಗಮಿಸಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅಲಿಸಿದರು. ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಬಿಡುಗಡೆಯಾಗುವ ಆಹಾರ ಧಾನ್ಯಗಳು ಹಾಸ್ಟೆಲ್‌ ವಾರ್ಡನ್‌ ನಮಗೆ ನೀಡುತ್ತಿಲ್ಲ. ದಿನನಿತ್ಯ ಒಂದು ಹೊತ್ತು ಊಟ ಸಿಗುವುದೇ ದುಸ್ಥರವೆಂಬಂತಾಗಿದೆ. ಪ್ರತಿದಿನ ಕೇವಲ ಅನ್ನ ಬೇಯಿಸಿ ಹಾಕಲಾಗುತ್ತಿದೆ ಎಂದರು.

ಶುದ್ಧ ಕುಡಿಯುವ ನೀರು ಇರದಿದ್ದಕ್ಕೆ ಸುಮಾರು ವಾರ ಶೇಖರಿಸಿಟ್ಟ ನೀರಿನಲ್ಲಿ ಹುಳಗಳು ಆಗಿರುತ್ತವೆ. ಅಂತಹ ನೀರನ್ನು ಸೇವಿಸಬೇಕಾಗಿದೆ. ಹಾಸ್ಟೆಲ್‌ನಲ್ಲಿಯ ಇಕ್ಕಟ್ಟಿನ ಜಾಗದಿಂದ ಶೌಚಾಲಯದಲ್ಲಿ, ಸ್ನಾನ ಕೊಣೆಯಲ್ಲಿ ಮಲಗುತ್ತ ಓದುತ್ತದ್ದೇವೆ. ವಾರ್ಡನ್‌ ಎಸ್‌.ಎಂ. ಬಾಸಗಿ ಅವರನ್ನು ಬದಲಿಸುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದರು.

ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿದ ಎನ್‌.ಆರ್‌. ಉಂಡಿಗೇರಿ, ವಾರ್ಡನ್‌ ಎಸ್‌.ಎಂ. ಬಾಸಗಿ ನಡೆದುಕೊಳ್ಳುತ್ತಿರುವ ರೀತಿ ಮತ್ತು ದಿನನಿತ್ಯ ಊಟಕ್ಕಾಗಿ ನೀಡುತ್ತಿರುವದೇನು ಎಂಬ ಕುರಿತು ಲಿಖೀತವಾಗಿ ನನಗೆ ಕೊಡಿ, ವಾರ್ಡನ್‌ ಮೇಲೆ ಕ್ರಮಕ್ಕೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next