ಉಡುಪಿ: ಮುಂಬಯಿನ ನ್ಯಾಯವಾದಿ ಸಂಜೀವ ಪುನಾಳೆಕರ ಬಂಧನ ಖಂಡಿಸಿ, ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಹಿಂದು ಜನಜಾಗೃತಿ ಸಮಿತಿ ಕಾರ್ಯಕರ್ತರು ಸೋಮವಾರ ಜಿÇÉಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಪಾಟಿಯವರಿಗೆ ಮನವಿ ನೀಡಿದರು.
ಹಿಂದು ವಿಧಿಜ್ಞ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ಸಂಜೀವ ಪುನಾಳೆಕರ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ವಿಕ್ರಮ ಭಾವೆ ಅವರನ್ನು ಕೇಂದ್ರೀಯ ತನಿಖಾ ತಂಡ (ಸಿಬಿಐ) ದಾಭೊಲಕರ ಹತ್ಯೆ ಪ್ರಕರಣದಲ್ಲಿ ಶಂಕಿತ ಆರೋಪಿಯೊಬ್ಬ ನೀಡಿರುವ ಹೇಳಿಕೆ ಮೇರೆಗೆ ಬಂಧಿಸಿರುವುದು ಖಂಡನೀಯ.
ಈ ಪ್ರಕರಣಗಳಲ್ಲಿ ಸಿಬಿಐ ನಡೆ ಸಂದೇಹಾಸ್ಪದ ಹಾಗೂ ಹಿಂದುತ್ವವಾದಿಗಳ ಮೇಲೆ ಒತ್ತಡದ ನಿರ್ಮಾಣ ಮಾಡುವಂತಿದೆ. ಹಿಂದುತ್ವವಾದಿ ಎಂದು ಹೇಳಿಕೊಳ್ಳುವ ಸರಕಾರ ಅಧಿಕಾರದಲ್ಲಿರುವಾಗಲೆ ಇದೆಲ್ಲ ಆಗುತ್ತಿದೆ. ಇದು ಹಿಂದುಗಳಿಗೆ ಆಘಾತಕಾರಿಯಾಗಿದೆ. ಪುನಾಳೆಕರ ಅವರನ್ನು ಷಡ್ಯಂತ್ರದಿಂದ ಬಂಧಿಸಿ, ಉದ್ದೇಶಪೂರ್ವಕವಾಗಿ ಹಿಂದುಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ಆದ್ದರಿಂದ ಸಿಬಿಐ ಮಾಡಿದ ಈ ಕೃತ್ಯ ಸಂವಿಧಾನದ ಹಕ್ಕು ಹಿಸುಕುವಂತಾಗಿದೆ ಎಂದು ಹಿಂದೂ ಜನಾಜಾಗೃತಿ ಸಮಿತಿಯ ವಿಶ್ವನಾಥ್ ನಾಯಕ್ ಪ್ರತಿಭಟನೆಕಾರರನ್ನುದ್ದೇಶಿಸಿ ಹೇಳಿದರು.
ಹಿಂದೂಗಳ ಪರವಾಗಿ ನಿರಂತರವಾಗಿ ಹೋರಾಡುವ ಸಂಜೀವ ಪುನಾಳೆಕರ ಅವರು ಹಿಂದೂ ಪರ ನ್ಯಾಯವಾದಿಗಳ ಸಂಘಟನೆ ಹಿಂದು ವಿಧಿಜ್ಞ ಪರಿಷತ್ ಪ್ರಧಾನ ಕಾರ್ಯದರ್ಶಿಗಳು.
ಇವರು 2008 ರ ಮಲೆಗಾವ್ ನ್ಪೋಟ ಪ್ರಕರಣದಲ್ಲಿ ಹಿಂದೂ ಭಯೋತ್ಪಾದನೆ ಕರಾಳ ಸತ್ಯವನ್ನು ಬಯಲಿಗೆ ಎಳೆದರು. 2009ರಲ್ಲಿ ಗೋವಾದಲ್ಲಿ ಬಾಂಬ್ ನ್ಪೋಟಗೊಂಡಾಗ ಅಮಾಯಕ ಸನಾತನ ಸಾಧಕರನ್ನು ಬಂಧನ ಮಾಡಿದ್ದನ್ನು ಯಶಸ್ವಿ ಕಾನೂನು ಹೊರಾಟ ನಡೆಸಿ ನ್ಯಾಯಾಲಯದಿಂದ ಬಿಡುಗಡೆಗೊಳಿಸಿದರು. ಮುಂಬಯಿ ಬೀವಂಡಿಯಲ್ಲಿ ಮತಾಂಧರು ಇಬ್ಬರು ಪೋಲಿಸರನ್ನು ಜೀವಂತವಾಗಿ ಸುಟ್ಟಾಗ ಮಾತಂಧ ಜಿಹಾದಿಗಳ ವಿರುದ್ದ ಹೋರಾಡಿದರು. ಗೋವಾದಲ್ಲಿ ಅನಧಿಕೃತ ಬಾಂಗ್ಲಾ ನುಸುಳುಕೋರರ ವಸತಿ ಗೃಹ ಖಾಲಿ ಮಾಡಿಸಲು ನ್ಯಾಯಾಲಯದ ಅದೇಶ ಕೊಡಿಸುವಲ್ಲಿ ಯಶಸ್ವಿಯಾದರು. ಗೌರಿ ಲಂಕೇಶ್, ದಾಬೊಲ್ಕರ್ ಮುಂತಾದ ಹಿಂದೂ ವಿರೋಧಿಗಳ ಹತ್ಯಾ ಪ್ರಕರಣದಲ್ಲಿ ಅಮಾಯಕ ಹಿಂದೂ ಕಾರ್ಯಕರ್ತರನ್ನು ಸಿಲುಕಿಸಿದಾಗ ಅವರ ಪರವಾಗಿ ನಿಃಶುಲ್ಕವಾಗಿ ಕಾನೂನು ಹೋರಾಟ ಮಾಡಿದರು.
ಸಂಜೀವ ಪುನಾಳೆಕರ ಮಾಡಿದ ಈ ಸಾಮಾಜಿಕ ಹೋರಾಟಗಳನ್ನು ಪರಿಗಣಿಸಿ ಪ್ರಸ್ತುತ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಈ ಪ್ರಕರಣದಲ್ಲಿ ಸಿಬಿಐ ನಿಲುವಿನ ಬಗ್ಗೆಯೂ ತನಿಖೆಯಾಗಬೇಕು. ಸಿಬಿಐ ಅಧಿಕಾರಿ ನಂದಕುಮಾರ ನಾಯಕ ಅವರಿಂದ ಡಾ| ದಾಭೊಲಕರ ಪ್ರಕರಣದ ತನಿಖೆ ಹಿಂಪಡೆದು, ಅದನ್ನು ಇತರ ಅಧಿಕಾರಿಗೆ ಒಪ್ಪಿಸಬೇಕು ಅಥವಾ ಆ ತನಿಖೆಯನ್ನು ನ್ಯಾಯಾಲಯದ ನಿರೀಕ್ಷಣೆಯಲ್ಲಿಡಬೇಕು. ಕೂಡಲೇ ಅಮಾಯಕ ನ್ಯಾಯವಾದಿ ಸಂಜೀವ ಪುನಾಳೆಕರ ಹಾಗೂ ವಿಕ್ರಮ ಭಾವೆ ಅವರನ್ನು ಬಿಡುಗಡೆ ಮಾಡಬೇಕು ಎಂದು ವಿಶ್ವನಾಥ ನಾಯಕ್ ಆಗ್ರಹಿಸಿದರು.
ಸಮಿತಿಯ ನವೀನ್ ಕುಮಾರ್, ಲಕ್ಷಿ¾àನಾರಾಯಣ ನಾಯಕ್, ಗೋಪಾಲಕೃಷ್ಣ ಮಲ್ಯ, ಸತೀಶ್ ಕಿಣಿ ಹಾಗೂ ಇತರರು ಉಪಸ್ಥಿತರಿದ್ದರು.