Advertisement

ಕರ ವಸೂಲಿಗಾರನ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

03:45 PM Oct 26, 2019 | Suhan S |

ಮದ್ದೂರು: ತಾಲೂಕಿನ ಕೌಡ್ಲೆ ಗ್ರಾಮ ಪಂಚಾಯಿತಿ ಕರ ವಸೂಲಿಗಾರ ನರಸಿಂಹೇಗೌಡ ಅವರನ್ನು ಕರ್ತವ್ಯದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಗ್ರಾಪಂ ಸದಸ್ಯರೆ ಪ್ರತಿಭಟನೆಗೆ ಮುಂದಾದ ಘಟನೆ ಶುಕ್ರವಾರ ಜರುಗಿತು.

Advertisement

ತಾಲೂಕಿನ ಕೌಡ್ಲೆ ಗ್ರಾಪಂ ಕಚೇರಿಯ ಬಳಿ ಜಮಾವಣೆಗೊಂಡ ಸದಸ್ಯರು ತಾಲೂಕು ಆಡಳಿತ ಕರ ವಸೂಲಿಗಾರನ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಡಿಸಿ, ಆತನನ್ನು ಕರ್ತವ್ಯದಿಂದ ಬಿಡುಡೆಗೊಳಿಸುವಂತೆ ಒತ್ತಾಯಿಸಿದರು. ಕೌಡ್ಲೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿರುವ ಸರ್ಕಾರಿ ನಿವೇಶಗಳನ್ನು ಹಣ ಪಡೆದು ಉಳ್ಳವರಿಗೆ ನೀಡುತ್ತಿರುವ ಜತೆಗೆ ಸಮರ್ಪವಾಗಿ ಗ್ರಾಮಗಳಲ್ಲಿ ಕರ ವಸೂಲಿ ಮಾಡದೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಈ ಬಗ್ಗೆ ಅಧ್ಯಕ್ಷರಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ದೂರಿದರು. ಕರ್ತವ್ಯಕ್ಕೆ ಹಾಜರಾಗದೆ ವಿಳಂಬ ಧೋರಣೆ ಅನುಸರಿಸುತ್ತಿದ್ದು ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಕರ ವಸೂಲಿಗೆ ಮುಂದಾಗದೆ ಪ್ರತಿ ತಿಂಗಳು ಶೇ.3ರಷ್ಟು ವಸೂಲಾತಿಗೆ ಮುಂದಾಗಿರುವುದರಿಂದ ಕುಡಿಯುವ ನೀರು, ರಸ್ತೆ ಅಭಿವೃದ್ಧಿ ವಿದ್ಯುತ್‌ ದೀಪ ಇನ್ನಿತರರ ಕಾಮಗಾರಿಗಳು ನನೆಗುದಿಗೆ ಬಿದ್ದಿರುವುದಾಗಿ ಆರೋಪಿಸಿದರು.

ಕಂದಾಯ ವಸೂಲಿ ಮಾಡುವ ನರಸಿಂಹೇಗೌಡ ಹಣ ದುರ್ಬಳಕೆ ಮಾಡಿಕೊಂಡಿದ್ದು ಪ್ರತಿದಿನ ಬ್ಯಾಂಕ್‌ಗೆ ಪಾವತಿಸಿಬೇಕಾದ ಹಣವನ್ನು 15 ದಿನಗಳಿಗೊಮ್ಮೆ ಪಾವತಿಸಿದರೂ ಪಿಡಿಒ ನರಸಿಂಹಮೂರ್ತಿ, ಗ್ರಾಪಂ ಅಧ್ಯಕ್ಷ ರಮೇಶ್‌, ಕಾರ್ಯದರ್ಶಿ ಶಿವರಾಮು ಕಂಡು ಕಾಣದಂತೆ ಮೌನಕ್ಕೆ ಶರಣಾಗಿದ್ದಾರೆಂದು ದೂರಿದರು. ಸ್ಥಳಕ್ಕೆ ಜಿಪಂ ಸಿಇಒ ಹಾಗೂ ತಾಪಂ ಇಒ ಮಣಿಕಂಠ ಅವರು ಸ್ಥಳಕ್ಕೆ ಆಗಮಿಸುವರೆಗೆ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಧರಣಿ ಮುಂದುವರಿಸಿದರು. ಪ್ರತಿಭಟನೆಯಲ್ಲಿ ಸದಸ್ಯರಾದ ಮಹೇಂದ್ರ, ಗಿರೀಶ್‌, ರಮೇಶ್‌, ಶಂಕುತಲಾ, ಶೋಭಾ ನೇತೃತ್ವವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next