ಬೇಲೂರು: ತಾಲೂಕಿನ ಯಲಹಂಕ ಬ್ಯಾಡರಹಳ್ಳಿ ಕೆರೆ ಏರಿ ಕಳಪೆ ಕಾಮಗಾರಿಯಿಂದ ಒಡೆದು ಹೋಗುವ ಸ್ಥಿತಿಯಲ್ಲಿದ್ದು, ಕೂಡಲೇ ತಾಪಂ ಹಾಗೂ ತಾಲೂಕು ಆಡಳಿತ ಸೂಕ್ತ ಕ್ರಮಕೈಗೊಳ್ಳಬೇಕಿದೆ. ತಾಲೂಕಿನ ಯಲಹಂಕ ಹಾಗೂ ಬ್ಯಾಡರ ಹಳ್ಳಿಯ ದ್ಯಾವನಕೆರೆ 10 ವರ್ಷಗಳ ನಂತರ ಭರ್ತಿ ಆಗಿದೆ.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ(ಪಿಎಂಜಿಎಸ್‌ವೈ)ಯಲ್ಲಿ ಏರಿ ಮೇಲಿನ ರಸ್ತೆ ಅಗಲೀಕರಣ ಮಾಡುವ ಉದ್ದೇಶದಿಂದ ಮಣ್ಣು ಸುರಿಯಲಾಗಿತ್ತು. ಸ್ಥಳೀಯರಿಗೆ ತಿಳಿಯದಂತೆ ರಾತ್ರೋ ರಾತ್ರಿ ಸಂಬಂಧಪಟ್ಟ ಅಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ಏರಿ ಮಣ್ಣನ್ನುಅಗೆದಿದ್ದಾರೆ.ಇದರಿಂದ ಏರಿ ಒಡೆಯುವ ಸಂಭವವಿದೆ. ತಕ್ಷಣವೇ ದುರಸ್ತಿ ಮಾಡಿಸಬೇಕಿದೆ.
ಈ ವೇಳೆ ಮಾತನಾಡಿದ ಚಿಲ್ಕೂರು ಗ್ರಾಮದ ಮಂಜೇಗೌಡ, ಈ ಏರಿಯ ಮೇಲಿನ ರಸ್ತೆಯು 15 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹಿಂದೆ ಕೆರೆ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸುತ್ತಿದ್ದೆವು ಹತ್ತು ವರ್ಷಗಳ ನಂತರ ಕೆರೆ ಭರ್ತಿ ಆಗಿದೆ. ಪಿಎಂಜಿಎಸ್‌ವೈನಡಿಯಲ್ಲಿ ಅಧಿಕಾರಿಗಳು ಈ ಕೆರೆ ಏರಿ ರಸ್ತೆಗೆ ಡಾಂಬರೀಕರಣ ಮಾಡಿದ್ದಾರೆ. ಆದರೆ, ಅಧಿಕಾರಿಗಳ ಲೋಪದಿಂದಾಗಿ ಕೆರೆ ಏರಿಯಲ್ಲಿ ನೀರು ಜಿನುಗುತ್ತಿದ್ದು, ಒಡೆದು ಹೋಗುವ ಆತಂಕ ಎದುರಾಗಿದೆ.
ರಸ್ತೆ ಅಗಲಗೊಳಿಸುವ ಸಂದರ್ಭದಲ್ಲಿ ನೂರು ಮೀಟರ್‌ನಷ್ಟು ಏರಿ ಮಣ್ಣು ತೆಗೆದಿರುವುದರಿಂದ ತಳಭಾಗದಲ್ಲಿ ಕೆರೆಯ ನೀರು ಜಿನುಗುತ್ತಿದೆ. ಸುತ್ತಲೂ ಮಣ್ಣು ಕಸಿದು ಬಿರುಕು ಕಾಣಿಸಿಕೊಂಡಿದೆ. ಸದ್ಯದಲ್ಲೇಕೆರೆಒಡೆಯುವಸಂಭವವಿದೆ.ತಕ್ಷಣವೇಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳದಿದ್ದರೆ ಮುಂದೆ ಸಂಭವಿಸುವ ಅನಾಹುತಕ್ಕೆ ಅವರೇ ಜವಾಬ್ದಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಲ್ಲದೆ, ಕೆರೆ ಸುತ್ತಮುತ್ತ 60 ಎಕರೆಗೂ ಹೆಚ್ಚು ಜೋಳ, ಅಡಕೆ, ಇನ್ನಿತರ ಬೆಳೆ ಇದ್ದು, ಏರಿ ಒಡೆದರೆ ಹಾಳಾಗುವ ಸಂಭವವಿದೆ. ತಕ್ಷಣವೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ತಾಪಂ ಮುಂಭಾಗದಲ್ಲಿ 10 ಗ್ರಾಮದ ಜನರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಗ್ರಾಮಸ್ಥರಾದ ಧರ್ಮೇಗೌಡ, ಚಂದ್ರಶೇಖರ್, ಶಾಂತೇಗೌಡ, ಜುಂಜೇಗೌಡ, ಮೋಹನ್,ಅರುಣ್, ಲೋಹಿತ್ ಮುಂತಾದವರು ಉಪಸ್ಥಿತರಿದ್ದರು.