Advertisement

Shahapura: ಮೇಲಧಿಕಾರಿಗಳ ದೌರ್ಜನ್ಯ ಖಂಡಿಸಿ ನಗರಸಭೆ ಎದುರು ಕಾರ್ಮಿಕರಿಂದ ಧರಣಿ

11:41 AM Dec 20, 2023 | Team Udayavani |

ಶಹಾಪುರ: ಇಲ್ಲಿನ ನಗರಸಭೆ ಪೌರ ಕಾರ್ಮಿಕರ ಮೇಲೆ ಮೇಲಧಿಕಾರಿಗಳ ದೌರ್ಜನ್ಯ ಖಂಡಿಸಿ ಕಾರ್ಮಿಕರು ಡಿ. 20ರ ಬುಧವಾರ ಬೆಳ್ಳಂಬೆಳಗ್ಗೆ ಧರಣಿ ಆರಂಭಿಸಿದ್ದಾರೆ.

Advertisement

ನಮ್ಮ ನ್ಯಾಯಯುತ ಬೇಡಿಕೆ ಸಲ್ಲಿಸಿರುವ ಹಿನ್ನೆಲೆ‌ ಅಲ್ಲದೆ ಸಚಿವ ದರ್ಶನಾಪುರ ಅವರ ಮುಂದೆ ಅಳಲು ತೋಡಿಕೊಂಡ ಹಿನ್ನೆಲೆ‌ ನಮ್ಮನ್ನು ಇನ್ನಷ್ಟು ತುಚ್ಛವಾಗಿ ಕಾಣುತ್ತಿದ್ದು, ಚರಂಡಿ ಸ್ವಚ್ಛ ಮಾಡುವ ಕಾರ್ಮಿಕರಾದ ತಮಗೆ ಇಷ್ಟು ಸೊಕ್ಕು ಇದ್ದರೆ ನಿಮ್ಮ ಎಲ್ಲಾ‌ ಜೀವನೇ ನಮ್ಮ ಕೈಯಲ್ಲಿದೆ. ಯಾರದೋ ಮಾತು ಕೇಳಿ ನಮನ್ನೆ ಎದುರು ಪ್ರಶ್ನೆ ಮಾಡುವಷ್ಟು ಶಕ್ತಿ ಬಂದಿದೆಯೇ ಎಂದು ಇನ್ಮೇಲೆ‌ ನೋಡುವಂತಿರಿ ಎಂದು ಬೆದರಿಕೆಯೊಡ್ಡಿದ್ದಾರೆ.

ಅಲ್ಲದೆ ನಿನ್ನೆ ಸಚಿವರೆದುರು ಅಳಲು ತೋಡಿಕೊಂಡ ಎರಡು ತಾಸಿನಲ್ಲಿ ನಮ್ಮ ಸಂಘದ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಇಬ್ಬರನ್ನು ಬೇರಡೆ ವರ್ಗಾವಣೆ ಮಾಡಿ ಆದೇಶ ಪ್ರತಿ ನೀಡಿ ಇವತ್ತೆ ಬಿಡುಗಡೆಗೊಳ್ಳಬೇಕು, ನಡಿರಿ ಯಾವುದೇ ಮಾತಾಡೋದಿಲ್ಲವೆಂದು ದರ್ಪ ತೋರುತ್ತಿದ್ದಾರೆ ಎಂದು ಧರಣಿ ನಿರತರು ತಿಳಿಸಿದ್ದಾರೆ.

ನಮ್ಮಗಳ ವೇತನದಲ್ಲಿ ಕಡಿತಗೊಳಿಸಿದ್ದ ಇಪಿಎಫ್, ಇಎಸ್ಐ ಹಣ ಜಮೆ ಮಾಡುವಂತೆ ಕಳೆದ 7-8 ತಿಂಗಳಿಂದ ಮೌಖಿಕವಾಗಿ ಹೇಳಿದರೂ, ಮನವಿ ಪತ್ರ‌ ಕೊಟ್ಟಿದ್ದರೂ, ಧರಣಿ ನಡೆಸಿದಾಗ ಎಲ್ಲರ ಎದುರೇ ಭರವಸೆ ನೀಡಿ‌ ನಂತರ ಮತ್ತದೆ ಮುಂದೂಡುತ್ತಾ ಬಂದಿದ್ದು ನಮಗಾದ ಅನ್ಯಾಯ ಯಾರೊಬ್ಬರು ಕೇಳದಂತಾಗಿದೆ ಎಂದು ಕಾರ್ಮಿಕರು ಕಣ್ಣೀರು ಹಾಕಿದ ಘಟನೆ ನಡೆದಿದೆ.

ಅಲ್ಲದೆ‌ ಪರಿಸರ ಅಭಿಯಂತರರು, ಪೌರಾಯುಕ್ತರು ಕೂಡಲೇ ಸರಿಪಡಿಸುವೆ ಎಂದು ಭರವಸೆ ನೀಡಿ ನಮ್ಮ ಮೇಲೆಯೇ ದೌರ್ಜನ್ಯ ಎಸಗುವ‌ ಬೆದರಿಕೆಯೊಡ್ಡುವ ಕಾರ್ಯ ಮುಂದುವರೆಸಿದ್ದಾರೆ.

Advertisement

ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಅಭಿವೃದ್ಧಿ ಕೋಶ ಯೋಜನಾ ನಿರ್ದೇಶಕರು ಆಗಮಿಸಿ ನಮ್ಮ ಸಮಸ್ಯೆ ಬಗೆಹರಿಸಬೇಕು. ಸುಖಾಸುಮ್ಮನೆ ನ್ಯಾಯಯುತ ಬೇಡಿಕೆ ಇಟ್ಟಿದ್ದರಿಂದ ಕಾರ್ಮಿಕ‌ ಸಂಘದ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಇಬ್ಬರನ್ನು ಬೇರಡೆ ವರ್ಗಾವಣೆ ಮಾಡುವ ಮೂಲಕ ನಮ್ಮನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದ್ದು ಈ ಕೂಡಲೇ ವರ್ಗಾವಣೆ ಆದೇಶ ಹಿಂಪಡೆದು ಇಲ್ಲಿಯೇ ಯಥಾರೀತಿ ಮುಂದುವರೆಸಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next