Advertisement

ಶಾಲಾ ವಿದ್ಯಾರ್ಥಿಗಳಿಂದ ಪ್ರತಿಭಟನೆ; ಊಟ-ಉಪಾಹಾರ ಬಿಟ್ಟು ಹೋರಾಟ

06:28 PM Sep 06, 2022 | Team Udayavani |

ಕೊಟ್ಟೂರು: ತಾಲೂಕಿನ ಸಮೀಪದ ಕಂದಗಲ್ಲು ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಯಲ್ಲಿ ವಿದ್ಯಾರ್ಥಿಗಳು ಸೋಮವಾರ ಬೆಳಗ್ಗೆಯಿಂದಲೇ ಊಟ ನೀರು ಬಿಟ್ಟು ತಮ್ಮ ಶಿಕ್ಷಕರಿಗಾಗಿ ಪ್ರತಿಭಟನೆಗೆ ಮುಂದಾಗಿದ್ದಾರೆ.

Advertisement

ಕಳೆದ 2 ದಿನಗಳ ಹಿಂದೆ ನಡೆದ ಘಟನೆಗೆ ಸಂಬಂಧಿಸಿದಂತೆ ಪ್ರಾಂಶುಪಾಲ ರನ್ನೊಳಗೊಂಡಂತೆ ನಿಲಯಪಾಲಕರು ದೈಹಿಕ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ಈ ವಿಚಾರ ತಿಳಿದ ತಕ್ಷಣವೇ ಶಾಲಾ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.

ಅಮಾನತುಗೊಳಿಸಿದ ಪ್ರಾಂಶುಪಾಲರಾದ ರಸೂಲ್‌ ಸರ್‌ ಹಾಗೂ ಇತರೆ ಶಿಕ್ಷಕರನ್ನು ಕೂಡಲೇ ಮರು ನೇಮಕಕ್ಕೆ ಆದೇಶ ನೀಡಬೇಕೆಂದು ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಅವರ ಪೋಷಕರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಕ್ಕಳ ಭವಿಷ್ಯಕ್ಕೆ ಕಾರಣರಾದ ಪ್ರಾಂಶುಪಾಲರನ್ನು ಅಮಾನತುಗೊಳಿಸಿರುವುದು ನಿಜಕ್ಕೂ ದುಃಖಕರ ವಿಷಯವಾಗಿದೆ. ಅವರನ್ನು ಕೂಡಲೇ ವಾಪಾಸ್ಸು ಕರೆಸುವಂತೆ ಒತ್ತಾಯಿಸಿದರು.

ಶಾಲೆಯಲ್ಲಿ ಒಟ್ಟು 345 ವಿದ್ಯಾರ್ಥಿಗಳಿದ್ದು, ಇವರೆಲ್ಲ ಬೆಳಗಿನ ಉಪಾಹಾರ ಬಿಟ್ಟು ತಮ್ಮ ಪ್ರಾಂಶುಪಾಲರು, ನಿಲಯಪಾಲಕರು ಹಾಗೂ ಶಿಕ್ಷಕರಿಗಾಗಿ ಪ್ರತಿಭಟನೆಗೆ ಇಳಿದಿದ್ದಾರೆ. ಸಮಾಜ ಕಲ್ಯಾಣಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಮಕ್ಕಳನ್ನು ಸಂತೈಸಿ ಇದಕ್ಕೆ ಸಂಬಂಧಿಸಿದಂತೆ ಮೇಲಧಿಕಾರಿಗಳೊಂದಿಗೆ ಮಾತನಾಡಿ ಸರಿಪಡಿಸುವುದಾಗಿ ಭರವಸೆ ನೀಡಿದರು.

ನಂತರ ಮಕ್ಕಳು ನಿಮ್ಮ ಮಾತಿಗೆ ಬೆಲೆ ನೀಡಿ ಇನ್ನೂ 2 ದಿನಗಳ ಕಾಲ ನೋಡುತ್ತೇವೆ. ಒಂದು ವೇಳೆ ನಮ್ಮ ಪ್ರಾಂಶುಪಾಲರು ಮರಳಿ ನೇಮಿಸದಿದ್ದರೆ ನಾವು ಮುಂದಿನ ದಿನಗಳಲ್ಲಿ ಊಟ ನೀರು ಬಿಟ್ಟು ಅವರಿಗಾಗಿ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

Advertisement

ನಮ್ಮ ಪಾಲನೆಯಲ್ಲಿ ತೊಡಗಿರುವ ಪ್ರಾಂಶುಪಾಲರಾದ ರಸೂಲ್‌ ಸರ್‌ ಹಾಗೂ ನಿಲಯಪಾಲಕರು ನಮ್ಮ ಬಗ್ಗೆ ಮುತುವರ್ಜಿವಹಿಸಿ ಹಗಲು ರಾತ್ರಿ ಎನ್ನದೆ ತಂದೆ
ತಾಯಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಾರೆ. ನಮ್ಮ ವಿದ್ಯಾಭ್ಯಾಸಕ್ಕಾಗಿ ಶ್ರಮಿಸುತ್ತಿದ್ದಾರೆ. ಇಂಥ ಪ್ರಾಮಾಣಿಕ ವ್ಯಕ್ತಿಗಳನ್ನು ಅಮಾನತುಗೊಳಿಸಿರುವುದು ದುಃಖದ ಸಂಗತಿ ಅವರನ್ನು ಕೂಡಲೇ ವಾಪಾಸು ಕರೆಸಬೇಕೆಂದು ಕೇಳಿಕೊಳ್ಳುತ್ತೇವೆ.

*ಶಾಲಾ ವಿದ್ಯಾರ್ಥಿನಿಯರು, ಮೊರಾರ್ಜಿ ದೇಸಾಯಿ ಶಾಲೆ ಕಂದಗಲ್ಲು

ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಅಮಾನತಾದ ಅಧಿಕಾರಿಗಳನ್ನು ಕೂಡಲೇ ಮರುನೇಮಕಕ್ಕೆ ಮೇಲಧಿಕಾರಿಗಳಿಗೆ ತಿಳಿಸಿ ವಾಪಾಸು ಕರೆತರುವ ಪ್ರಯತ್ನ ಮಾಡುತ್ತೇನೆ.
ಸತೀಶ್‌, ಉಪನಿರ್ದೇಶಕರು ಸಮಾಜಕಲ್ಯಾಣ
ಇಲಾಖೆ, ವಿಜಯನಗರ ಜಿಲ್ಲೆ

ತನಿಖೆ ನಡೆಯುತ್ತಿರುವುದರಿಂದ ನಂತರ ಮೇಲಧಿಕಾರಿಗಳಿಂದ ವಿವರವನ್ನು ತರಿಸಿಕೊಂಡು ನಂತರವೇ ಕ್ರಮ ತೆಗೆದುಕೊಳ್ಳುತ್ತೇವೆ.
ಕೋಟ ಶ್ರೀನಿವಾಸ, ಸಮಾಜ ಕಲ್ಯಾಣ ಇಲಾಖೆ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next