ಚಾಮರಾಜನಗರ: ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ ನ್ಯಾಯಾಧೀಶರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಿ ಎಸ್ಸಿ ಹಾಗೂ ಎಸ್ಟಿ ನೌಕರರ ಸಮನ್ವಯ ಸುರಾಜನಗರ ಶಾಖೆ ವತಿಯಿಂದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.
ನ್ಯಾಯಾಧೀಶರ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಬೇಕು. ಎಸ್ಸಿ ಹಾಗೂ ಎಸ್ಟಿ ನೌಕರರ ಸಮನ್ವಯ ಸಮಿತಿ ಚಾಮರಾಜನಗರ ಶಾಖೆಯ ಅಧ್ಯಕ್ಷ ಎ.ಶಿವಣ್ಣ ಒತ್ತಾಯಿಸಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಆರ್.ಹೇಮಂತ್ ರಾಜ್, ಪ್ರಧಾನ ಕಾರ್ಯದರ್ಶಿ ಸಿ.ಕೆ.ರಾಮಸ್ವಾಮಿ,ಖಜಾಂಚಿ ರಾಜು, ಸರ್ಕಾರಿ ನೌಕರ ಸಂಘದ ಖಜಾಂಚಿ ಮಹದೇವಯ್ಯ, ಉಪಾಧ್ಯಕ್ಷ ಶಿವಮೂತಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಹೆಚ್.ಎನ್. ನಂಜುಂಡಸ್ವಾಮಿ, ತಮ್ಮಯ್ಯ.ಜಿ, ಶಾಂತಮ್ಮ, ಮಹದೇವಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಕಾರ್ಯದರ್ಶಿ ಮಹದೇವಸ್ವಾಮಿ, ಖಜಾಂಚಿಕೃಷ್ಣಮೂರ್ತಿ ಮಹದೇವಯ್ಯ.ವಿ,ಮಲ್ಲಿಕಾರ್ಜುನ.ಸಿ,, ಎಂ.ಡಿ.ಮಹದೇವಯ್ಯ,ಶಿವರಾಜಪ್ಪ, ಉಪನ್ಯಾಸಕ ದೇವರಾಜು, ಸಿದ್ದರಾಜಪ್ಪ, ರವಿಕುಮಾರ್ ಇತರರಿದ್ದರು.
ಜಡ್ಜ್ ವಿರುದ್ಧ ಕ್ರಮ ಜರುಗಿಸಿ: ಆರ್.ಧ್ರುವನಾರಾಯಣ : ಅಂಬೇಡ್ಕರ್‌ಗೆ ಅಪಮಾನಿಸಿರುವ ರಾಯಚೂರು ಜಿಲ್ಲಾ ನ್ಯಾಯಾಧೀಶರ ವಿರುದ್ಧ ಕ್ರಮ ಜರುಗಿಸಬೇಕು. ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಈ ಸಂಬಂಧ ಪ್ರತಿಭಟನೆಗಳು ನಡೆಯುತ್ತಿದ್ದು, ಇಲ್ಲಿಯ ತನಕವೂ ಕೂಡ ರಾಜ್ಯದ ಮುಖ್ಯಮಂತ್ರಿಹಾಗೂ ಗೃಹ ಸಚಿವರು ಇದರ ಬಗ್ಗೆ ಪ್ರಸ್ತಾಪಿಸಿಲ್ಲ. ಅಂಬೇಡ್ಕರ್ ಭಾವಚಿತ್ರ ಇಟ್ಟರೆ ಗಣರಾಜ್ಯೋತ್ಸವ ಆಚರಣೆಗೆ ಬರುವುದಿಲ್ಲ ಎಂಬ ನ್ಯಾಯಾಧೀಶರ ಉದ್ದಟತನದ ಮಾತು ಖಂಡನೀಯ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಪಾಲಕರೇ ಕಾನೂನನ್ನು ಉಲ್ಲಂ ಸಿರುವುದು ವಿಪರ್ಯಾಸ.ಬಿಜೆಪಿಯಲ್ಲಿರುವ ದಲಿತ ನಾಯಕರಿಗೆ ಧ್ವನಿಯೇ ಇಲ್ಲ. ದಲಿತ ಮಂತ್ರಿಗಳು, ಸಂಸದರು, ಶಾಸಕರು ಇಲ್ಲಿಯ ತನಕ ಮುಖ್ಯಮಂತ್ರಿಬಳಿ ಯಾವುದೇ ಒತ್ತಾಯಿಸುುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಅಂಬೇಡ್ಕರ್ ಹೆಸರು ಜ್ಞಾಪಕಕ್ಕೆ ಬರುತ್ತದೆ ಎಂದರು.