Advertisement

ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮಾಜದಿಂದ ಹೆದ್ದಾರಿ ತಡೆ ಪ್ರತಿಭಟನೆ

06:12 PM Mar 04, 2023 | Team Udayavani |

ವಿಜಯಪುರ: 2-ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮಾಜದಿಂದ ಶನಿವಾರ ಜಿಲ್ಲೆಯ ವಿವಿಧ ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ, ಸರ್ಕರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಲಿಂಗಾಯತ ಪಂಚಮಸಾಲಿ ಕೂಡಲಸಂಗಮ ಜಗದ್ಗುರುಗಳಾದ ಬಸವಜಯ ಮೃತ್ಯುಂಜಯ ಶ್ರೀಗಳ ಕರೆಯ ಮೇರೆಗೆ ಲಿಂಗಾಯತ ಪಂಚಮಸಾಲಿ 2-ಎ ಮೀಸಲಾತಿಗೆ ಆಗ್ರಹಿಸಿ ಜಿಲ್ಲೆಯ ನಿಡಗುಂದಿ, ಝಳಕಿ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಹೆದ್ದಾರಿ ಸಂಚಾರ ತಡೆ ಪ್ರತಿಭಟನೆಯಿಂದಾಗಿ ಬೆಂಗಳೂರು ಹಾಗೂ ಸೋಲಾಪುರ ಕಡೆಗೆ ಸಂಚರಿಸಬೇಕಿದ್ದ ನೂರಾರು ವಾಹನಗಳು ಎರಡೂ ಬದಿಗೆ ಸಾಲುಗಟ್ಟಿದ್ದವು.

ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಯುವ ಘಟಕದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಬಿರಾದಾರ. ರಾಜ್ಯದ ಬಿಜೆಪಿ ಸರ್ಕಾರ ಪಂಚಮಸಾಲಿ ಸಮಾಜಕ್ಕೆ ಭಾರಿ ಅನ್ಯಯ ಮಾಡಿದೆ. ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾಯಿ ಮೆಲೆ ಆಣೆಮಾಡಿ ನಮ್ಮ ಸಮಾಜಕ್ಕೆ ಮೀಸಲು ಕಲ್ಪಿಸದೇ ಅನ್ಯಾಯ ಮಾಡಿದ್ದಾರೆ ಎಂದರು ದೂರಿದರು.

ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ, 2ಎ ಮೀಸಲಾತಿಯ ಸ್ವಾಗತ ಸಮಿತಿಯ ರಾಜ್ಯ ಕಾರ್ಯದರ್ಶಿ ಕಾಮರಾಜ ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗನಗೌಡ ಸೋಲಾಪೂರ, ನಿಡಗುಂದಿ ತಾಲ್ಲೂಕ ಅಧ್ಯಕ್ಷ ಶರಣು ಕಾಜಗಾರ, ಬಸವನಬಾಗೇವಾಡಿ ತಾಲ್ಲೂಕ ಅಧ್ಯಕ್ಷ ಶ್ರೀಕಾಂತ ಕೋಟರಶೇಟ್ಟಿ, ಮುದ್ದೇಬಿಹಾಳ ತಾಲ್ಲೂಕ ಅಧ್ಯಕ್ಷ ಅಮರೇಶ ಗೂಳಿ, ವಿಜಯಪುರ ತಾಲ್ಲೂಕ ಅಧ್ಯಕ್ಷ ಎಸ್.ಆರ್.ಬಕ್ಕಣಿ, ಬಸವನಬಾಗೇವಾಡಿ ಯುವ ಅಧ್ಯಕ್ಷ ಸಂಜು ಬಿರಾದಾರ, ವಿಜಯಪುರ ನಗರ ಯುವ ಅಧ್ಯಕ್ಷ ಸದಾಶಿವ ಅಳ್ಳಿಗಿಡದ, ಸಮಾಜದ ಮುಖಂಡರಾದ ಶಿವಾನಂದ ಅವಟಿ, ಸೋಮಲಿಂಗ ಪಟ್ಟಣಶೇಟ್ಟಿ, ಶಿವಶಂಕರಗೌಡ ಹೀರೇಗೌಡರ, ಪ್ರಶಾಂತ ಮುಂಜಾನೆ, ಮಂಜುನಾಥ ಬಿರಾದಾರ (ಹಿಟ್ನಳಿ), ಹರೀಶ ಬರಟಗಿಮ ಹಾಗೂ ನಿಡಗುಂದಿ ಸೇರಿದಂಥೆ ಇತರೆ ಕಡೆಗಳಿಂದ ಆಗಮಿಸಿದ್ದ ಪಂಚಮಸಲಿ ಸಮಜದ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

ಇದನ್ನೂ ಓದಿ: ಮಾಜಿ‌ ಶಾಸಕರ ವಿರುದ್ಧ ಕಾರವಾರದಲ್ಲಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ : ರಾಜ್ಯಪಾಲರಿಗೆ ಮನವಿ

Advertisement

Udayavani is now on Telegram. Click here to join our channel and stay updated with the latest news.

Next