Advertisement

ಕೋಳಕೂರ: ಕೂಲಿ ಕಾರ್ಮಿಕರಿಂದ ಪ್ರತಿಭಟನೆ

05:31 PM Jun 03, 2022 | Team Udayavani |

ಜೇವರ್ಗಿ: ತಾಲೂಕಿನ ಕೋಳಕೂರ ಗ್ರಾಮ ಪಂಚಾಯಿತಿ ಕಚೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕೃಷಿ ಕೂಲಿಕಾರ್ಮಿಕರ ಸಂಘ ಗ್ರಾಮ ಘಟಕದ ವತಿಯಿಂದ ಕೃಷಿ ಕೂಲಿಕಾರ್ಮಿಕರಿಗೆ ಕೆಲಸ ನೀಡಬೇಕೆಂದು ಆಗ್ರಹಿಸಿ ಗುರುವಾರ ಧರಣಿ ಸತ್ಯಾಗ್ರಹ ಆರಂಭಿಸಲಾಗಿದೆ.

Advertisement

ಕಳೆದ ಮೇ 12ರಂದು ಕೃಷಿ ಕೂಲಿಕಾರರಿಗೆ ಕೆಲಸ ನೀಡುವಂತೆ ಫಾರಂ ನಂ.6 ಭರ್ತಿ ಮಾಡಿಕೊಡಲಾಗಿದೆ. ಆದರೆ ಇಲ್ಲಿಯ ವರೆಗೆ ಸುಳ್ಳು ಆಶ್ವಾಸನೆ ನೀಡುತ್ತಾ ಕಾಲಹರಣ ಮಾಡಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ಕೂಲಿಯೇ ಆಧಾರ. ಮನೆಯಲ್ಲಿ ಕೆಲಸವಿಲ್ಲದೇ ಕೂಲಿಕಾರರು ಕಂಗಾಲಾಗಿದ್ದಾರೆ. ಹೀಗಾಗಿ ಕೂಡಲೇ ಕೃಷಿ ಕೂಲಿಕಾರ್ಮಿಕರಿಗೆ ಕೆಲಸ ಕೊಡಬೇಕು. ನರೇಗಾದಲ್ಲಿ ನಡೆಯುತ್ತಿರುವ ಭ್ರಷ್ಠಾಚಾರ ತಡೆಗಟ್ಟಬೇಕು. ಕೂಲಿ ದರ ಹೆಚ್ಚಳ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಧರಣಿ ಸ್ಥಳಕ್ಕೆ ಆಗಮಿಸಿದ ಗ್ರಾಪಂ ಕಾರ್ಯದರ್ಶಿ ಶರಣಯ್ಯ ಸ್ವಾಮಿ ಅರ್ಜಿ ಸಲ್ಲಿಸಿದ ಕೂಲಿಕಾರರಿಗೆ ಕೆಲಸ ಕೊಡಲಾಗುವುದು ಎಂದು ಭರವಸೆ ನೀಡಿದರು. ಸ್ಥಳಕ್ಕೆ ತಾಪಂ ಇಒ, ಪಿಡಿಒ ಆಗಮಿಸಿ ಭರವಸೆ ನೀಡಿದರೇ ಮಾತ್ರ ಧರಣಿ ಕೈಬಿಡಲಾಗುವುದು ಎಂದು ಧರಣಿ ನಿರತರು ಪಟ್ಟುಹಿಡಿದರು.

ಕೂಲಿಕಾರ ಸಂಘದ ಗ್ರಾಮ ಘಟಕ ಅಧ್ಯಕ್ಷ ಬಸವರಾಜ ನಡುವಿನಕೇರಿ, ರೈತ ಮುಖಂಡ ಸಿದ್ಧರಾಮ ಆದ್ವಾನಿ ಹರವಾಳ, ರುದ್ರಯ್ಯ ಕುರನಳ್ಳಿ, ಸಿದ್ಧಣ್ಣ ಹಾಗರಗಿ, ಭೀಮಾಶಂಕರ ಬಿದನೂರ, ಬಸವರಾಜ ಕಟ್ಟಿ, ಸಿದ್ರಾಮ ಕಟ್ಟಿ, ನಿಂಗಣ್ಣ ಆಡೀನ್‌, ಮಲ್ಲಿಕಾರ್ಜುನ ಗುತ್ತಾ, ಬಸವರಾಜ ಗರ, ಬಸವರಾಜ ಮೋರಟಗಿ ಹಾಗೂ ಕೂಲಿಕಾರ್ಮಿಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next