Advertisement

ಸುರಪುರದಲ್ಲಿ ದಲಿತ ಸಂಘಟನೆಯಿಂದ ಪ್ರತಿಭಟನೆ

03:15 PM Jun 12, 2022 | Team Udayavani |

ಸುರಪುರ: ಪಠ್ಯ ಪುಸ್ತಕದಲ್ಲಿ ಸುರಪುರ ಸಂಸ್ಥಾನದ ಅರಸರ ಚರಿತ್ರೆ, ಡಾ| ಬಾಬಾ ಸಾಹೇಬ ಅಂಬೇಡ್ಕರ್‌ ಮತ್ತು ಬಸವಣ್ಣನವರ ಚರಿತ್ರೆ ಕಡಿತಗೊಳಿಸಿರುವುದನ್ನು ಖಂಡಿಸಿ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ ಚಕ್ರತೀರ್ಥ ಅವರ ಮೇಲೆ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ದಲಿತ ಸಮಿತಿ ( ಕ್ರಾಂತಿಕರಿ) ಮುಖಂಡರು ಶನಿವಾರ ನಗರದ ಗಾಂಧೀಜಿ ವೃತ್ತದಲ್ಲಿ ಪ್ರತಿಭಟಿಸಿದರು.

Advertisement

ತಥಾಗತ್‌ ಗೌತಮಬುದ್ಧ ವೃತ್ತದಿಂದ ಗಾಂಧಿ ವೃತ್ತದವರೆಗೆ ಮೆರವಣಿಗೆ ನಡೆಸಿದರು. ಗಾಂಧಿ ವೃತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ರಸ್ತೆ ತಡೆಗೆ ಮುಂದಾದರು. ನಂತರ ಪೊಲೀಸರ ಮಧ್ಯಸ್ಥಿಕೆಯಿಂದ ರಸ್ತೆ ತಡೆ ಕೈಬಿಟ್ಟು ಪ್ರತಿಭಟನೆ ಮುಂದುವರೆಸಿದರು. ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಸಮಿತಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಹಿರಿಯ ಮುಖಂಡ ಮಾನಪ್ಪ ಕಟ್ಟಿಮನಿ ಮಾತನಾಡಿದರು.

ಮುಖ್ಯಮಂತ್ರಿಗೆ ಬರೆದ ಮನವಿಯನ್ನುಕಂದಾಯ ನಿರೀಕ್ಷಕ ಗುರುಬಸಪ್ಪ ಪಾಟೀಲ ಅವರಿಗೆ ಸಲ್ಲಿಸಿದರು ಸಮಿತಿ ತಾಲೂಕು ಅಧ್ಯಕ್ಷ ರಾಮಣ್ಣ ಶೆಳ್ಳಗಿ, ವಿವಿಧ ಸಂಘಟನೆಗಳ ಮುಖಂಡರಾದ ದೇವಿಂದ್ರ ಪ್ಪ ಪತ್ತಾರ, ರಮೇಶ ದೊರೆ, ಮೂರ್ತಿ ಬೊಮ್ಮನಳ್ಳಿ, ವೆಂಕಟೇಶ ಭೇಟೆಗಾರ, ಐಮದ್‌ಪಠಾಣ, ಮಲ್ಕಯ್ಯ ತೇಲ್ಕರ್‌, ಗಂಗಾಧರ ನಾಯಕ, ಮಲ್ಲಪ್ಪ ಕೆಸಿಪಿ ಹಣಮಂತ್ರಾಯ ಮಡಿವಾಳರ್‌ ದೇವಿಂದ್‌ ಬಾದ್ಯಾಪುರ, ಹಣಮಂತ ಕಟ್ಟಿಮನಿ, ರೇವಣಸಿದ್ದ ಮಾಲಗತ್ತಿ, ಬುದ್ದಿವಂತ, ಜಟ್ಟೆಪ್ಪ ನಾಗರಾಳ, ಖಾಜಾಹುಸೇನ ಗುಡುಗಂಟಿ, ಕಾಳಿಂಗಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next