Advertisement

ಅಕ್ಷರದಾಸೋಹ ನೌಕರರಿಂದ ಪ್ರತಿಭಟನೆ

01:00 AM Feb 06, 2019 | Team Udayavani |

ಕುಂದಾಪುರ: ಕೇಂದ್ರ ಸರಕಾರ‌ ಮಂಡಿಸಿರುವ ಬಜೆಟ್‌ನಲ್ಲಿ ಅಕ್ಷರ ದಾಸೋಹ ನೌಕರರಿಗೆ ಯಾವುದೇ ಸೌಲಭ್ಯ ನೀಡಲಿಲ್ಲ. ಮೋದಿ ಸರಕಾರ ಬಿಸಿಯೂಟವನ್ನು ಒಂದು ವರ್ಷದ ಹಿಂದೆಯೇ ಖಾಸಗಿಯವರಿಗೆ ವಹಿಸಿದ್ದು, ಸಾಕಷ್ಟು ವರ್ಷಗಳಿಂದ ಕೆಲಸ ಮಾಡುತ್ತಿರುವ ನೌಕರರು ಕೆಲಸವನ್ನು ಕಳೆದುಕೊಂಡಿದ್ದಾರೆ. ಬಡ ಮಹಿಳೆಯರ ಹೊಟ್ಟೆ ಮೇಲೆ ಹೊಡೆದ ಕೇಂದ್ರದ ನೀತಿ ಖಂಡನೀಯ ಎಂದು ಅಕ್ಷರದಾಸೋಹ ಸಂಘದ ಜಿಲ್ಲಾ ಗೌರವಾಧ್ಯಕ್ಷ ಯು.ದಾಸ ಭಂಡಾರಿ ಹೇಳಿದರು.

Advertisement

ಕೇಂದ್ರ ಸರಕಾರ ಬಜೆಟ್‌ನಲ್ಲಿ ಅಕ್ಷರ ದಾಸೋಹ ನೌಕರರನ್ನು ಸಂಪೂರ್ಣ ಅವಗಣಿಸಿದೆ ಎಂದು ಆರೋಪಿಸಿ ತಾ| ಅಕ್ಷರದಾಸೋಹ ನೌಕರರು ತಾಲೂಕು ಪಂಚಾಯತ್‌ ಮುಂಭಾಗ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಅಕ್ಷರದಾಸೋಹ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಜಯಶ್ರೀ ಮಾತನಾಡಿ, ಕಳೆದ ಸಾಕಷ್ಟು ವರ್ಷಗಳಿಂದ ಕನಿಷ್ಠ ವೇತನ ಬೇಡಿಕೆ ಮುಂದಿಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದೇವೆ. ನಮ್ಮ ಬೇಡಿಕೆ ಈಡೇರಿಸಬೇಕಿದ್ದ ಕೇಂದ್ರ ಬರುವ ಅನುದಾನವನ್ನೇ ಕಡಿತ ಮಾಡುತ್ತಿದೆ ಎಂದು ಸರಕಾರದ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಕ್ಷರದಾಸೋಹ ನೌಕರರ ಸಂಘದ ತಾ| ಕಾರ್ಯದರ್ಶಿ ಸಿಂಗಾರಿ, ಕೋಶಾಧಿಕಾರಿ ನಾಗರತ್ನಾ ಅವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next