Advertisement

ರಾಯಚೂರು: ಕಾಲುವೆ ನೀರಿಗಾಗಿ ರಸ್ತೆ ಸಂಚಾರ ತಡೆದು ಪ್ರತಿಭಟನೆ

03:31 PM Jan 22, 2021 | Team Udayavani |

ಸಿರವಾರ (ರಾಯಚೂರು): ತುಂಗಭದ್ರಾ ಎಡದಂಡೆ ಕಾಲುವೆಯ ಕೆಳಭಾಗದ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ರೈತರು ಸಿರವಾರದ ಮುಖ್ಯರಸ್ತೆ ಬಂದ್ ಮಾಡಿ ಹೋರಾಟ ನಡೆಸಿದ್ದಾರೆ.

Advertisement

ಕೆಳಭಾಗದ ರೈತರು ಬೆಳೆದಿರುವ ಬೆಳೆಗಳಿಗೆ ಸಮರ್ಪಕವಾಗಿ ನೀರು ದೊರೆಯದ ಹಿನ್ನೆಲೆ ಬೆಳೆಗಳೆಲ್ಲ ಒಣಗಿ ಹೋಗುವ ಹಂತಕ್ಕೆ ತಲುಪಿವೆ. ಕಳೆದ ವಾರ ನಡೆಸಿದ ಹೋರಾಟದಲ್ಲಿ ಅಧಿಕಾರಿಗಳು ನೀರು ಹರಿಸಲಾಗುವುದು ಎಂದು ಭರವಸೆ ನೀಡಿದ್ದು ಹುಸಿಯಾಗಿದೆ. ಈಗ ಸಮರ್ಪಕ ನೀರು ಹರಿಸುವಂತೆ ರಾಯಚೂರು ಲಿಂಗಸ್ಗೂರು ಮುಖ್ಯರಸ್ತೆ ಬಂದ್ ಮಾಡಿ ಹೋರಾಟ ಹಮ್ಮಿಕೊಂಡಿದ್ದು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಹಾಗೂ ನೀರಾವರಿ ಅಧಿಕಾರಿಗಳು ಆಗಮಿಸಿ ಭರವಸೆ ನೀಡುವವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ಹೋರಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ:ಜೆಡಿಎಸ್‌ ಬಲವರ್ಧನೆಗೆ ವರಿಷ್ಠರಿಂದ ಹೊಸ ಕಾರ್ಯಪಡೆ: ಹುಣಸಿಮರದ

ಹೋರಾಟದ ಸ್ಥಳಕ್ಕೆ ಸಹಾಯಕ ಆಯುಕ್ತ ಸಂತೋಷ ಕಾಮೇಗೌಡ ಹಾಗೂ ತಹಶೀಲ್ದಾರ ಮಧುರಾಜ್ ಯಾಳಗಿ ಭೇಟಿ ನೀಡಿ ರೈತರ ಮನವೊಲಿಸಿದರು. ಜಿಲ್ಲಾಧಿಕಾರಿಗಳು ಆಗಮಿಸುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಎಲ್ಲಾ ಬಗೆಯ ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

Advertisement

4 ಗಂಟೆಗೂ ಹೆಚ್ಚಿನ ಕಾಲ ಮುಖ್ಯರಸ್ತೆ ಬಂದ್ ಮಾಡಿದ್ದರಿಂದ ವಾಹನ ಸವಾರರು, ಪ್ರಯಾಣಿಕರು ಪರದಾಡುವಂತಾಯಿತು. ಮಾಜಿ ಶಾಸಕರಾದ ಗಂಗಾಧರ ನಾಯಕ, ಹಂಪಯ್ಯ ನಾಯಕ, ಮುಖಂಡರಾದ ಜೆ.ಶರಣಪ್ಪಗೌಡ, ಚುಕ್ಕಿ ಸೂಗಪ್ಪ ಸಾಹುಕಾರ ಸೇರಿದಂತೆ ಅನೇಕರು ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next