Advertisement

ಕುಮಟಾ: ಹರ್ಷ ಹತ್ಯೆ ಖಂಡಿಸಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ

07:40 PM Feb 28, 2022 | Team Udayavani |

ಕುಮಟಾ: ಹಿಂದೂ ಕಾರ್ಯಕರ್ತ ಹರ್ಷ ಅವರ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವರ್ಗಾಯಿಸಬೇಕು ಮತ್ತು ಇದೊಂದು ಭಯೋತ್ಪಾಧನಾ ಕೃತ್ಯ ಎಂದು ಪರಿಗಣಿಸಿ, ಗಂಭೀರವಾಗಿ ತನಿಖೆ ಮಾಡಿ, ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ, ಹಾಗೂ ವಿವಿಧ ಹಿಂದೂಪರ ಸಂಘಟನೆಗಳು ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಫೆ. 20ರಂದು ಶಿವಮೊಗ್ಗದ ಭಜರಂಗದಳ ಕಾರ್ಯಕರ್ತ ಹರ್ಷ ಅವರ ಹತ್ಯೆಯಾದ ಪ್ರಕರಣವು ಅತ್ಯಂತ ಗಂಭೀರ ಪ್ರಕರಣವಾಗಿದೆ.ಇದು ಕೇವಲ ಒಂದು ಕೊಲೆಯಲ್ಲದೇ ಇದೊಂದು ಭಯೋತ್ಪಾದನಾ ಕೃತ್ಯವಾಗಿದೆ. ಇದನ್ನು  ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.ಇದುವರೆಗೆ ಕರ್ನಾಟಕ ರಾಜ್ಯದಲ್ಲಿ 35 ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಬರ್ಬರ ಹತ್ಯೆ ನಡೆದಿದೆ. ಈ ಎಲ್ಲ ಹತ್ಯೆಗಳನ್ನು ಒಂದೇ ಸಮುದಾಯಕ್ಕೆ ಸೇರಿದವರು ಮಾಡಿದ್ದಾರೆ. ಹಿಂದೂ ಕಾರ್ಯಕರ್ತ ಹರ್ಷ ಸೇರಿ, ಎಲ್ಲ ಹಿಂದೂ ಕಾರ್ಯಕರ್ತರೂ ಹಿಂದೂತ್ವದ ಪರವಾದ ಕಾರ್ಯ ಮಾಡುತ್ತಿದ್ದರು ಎನ್ನುವ ಒಂದೇ ಕಾರಣಕ್ಕಾಗಿ ಅವರ ಹತ್ಯೆ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು.

ಈ ಹಿಂದೆ ನಡೆದ ಎಲ್ಲ ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣದಲ್ಲಿ ಒಂದೇ ಗುಂಪು, ಒಂದೇ ಸಂಘಟನೆಯ ಸದಸ್ಯರು ಮತ್ತು ಒಂದೇ ಮಾದರಿಯಲ್ಲಿ ಹತ್ಯೆ ಮಾಡಿರುವುದು ಗಮನಕ್ಕೆ ಬರುತ್ತಿದೆ. ಅಷ್ಟೇಅಲ್ಲದೇ ಹಿಂದಿನ ಹಿಂದೂ ಕಾರ್ಯಕರ್ತರ ಹತ್ಯೆಯ ಅಪರಾಧದ ತನಿಖಾ ವರದಿಯನ್ನು ಗಮನಿಸಿದಾಗ, ಭಾರತದಲ್ಲಿ ಇಸ್ಲಾಮಿಕ್ ಶಾಸನ ತರಲು ಮತಾಂಧ ಸಂಘಟನೆ ಪೊಪ್ಯುಲರ್ ಪ್ರಂಟ್ ಆಪ್ ಇಂಡಿಯಾ ದೇಶದಲ್ಲಿ ಹಿಂದೂ ನಾಯಕರ ಬರ್ಬರ ಹತ್ಯೆ ಮಾಡುತ್ತಿರುವುದು ಗಮನಕ್ಕೆ ಬರುತ್ತದೆ ಮತ್ತು ಬಹುತೇಕ ಪ್ರಕರಣದಲ್ಲಿ ಪೊಪ್ಯುಲರ್ ಪ್ರಂಟ್ ಆಪ್ ಇಂಡಿಯಾದ ಹೆಸರು ತನಿಖಾ ವರದಿಯಲ್ಲಿ ಉಲ್ಲೇಖವಾಗಿದೆ. ಅದಲ್ಲದೇ ಪೊಪ್ಯುಲರ್ ಪ್ರಂಟ್ ಆಪ್ ಇಂಡಿಯಾ ಬಲವಂತದ ಮತಾಂತರ, ಭಯೋತ್ಪಾದನೆ ತರಬೇತಿ, ಅಕ್ರಮ ಹಣ ವರ್ಗಾವಣೆ, ಕಪ್ಪುಹಣ, ಲವ್ ಜಿಹಾದ್, ಲ್ಯಾಂಡ್ ಜಿಹಾದ್, ದಂಗೆ ಮಾಡುವುದು, ಕೋಮು ಗಲಭೆ ಮಾಡುವುದು ಮುಂತಾದ ರೀತಿಯಲ್ಲಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿದೆ. ಅವರ ದ್ಯೇಯಕ್ಕೆ ಅಡ್ಡ ಬರುವ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಮಾಡುತ್ತಿದೆ. ಹಾಗಾಗಿ ಸಮಾಜದಲ್ಲಿ ಅಶಾಂತಿಯನ್ನು ಹರಡುವ ಪೊಪ್ಯುಲರ್ ಪ್ರಂಟ್ ಆಪ್ ಇಂಡಿಯಾದ ಮೇಲೆ ನಿಷೇಧವನ್ನು ಹಾಕಬೇಕು. ಹರ್ಷರವರ ಹತ್ಯೆ ಆರೋಪಿಗಳಿಗೆ ಕೂಡಲೇ ಕಠಿಣ ಶಿಕ್ಷೆ ನೀಡುವ ದೃಷ್ಟಿಯಿಂದ ತ್ವರಿತ ಪ್ರಯತ್ನ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಹರ್ಷ ಅವರ ಹತ್ಯೆ ಪ್ರಕರಣದ ಆರೋಪಿಗಳ ಮೇಲೆ ಯುಎಪಿಎ ಮತ್ತು ಕೊಕಾ ಕಾಯಿದೆಯಡಿ ಬಂಧಿಸಿ, ರಾಷ್ಟ್ರೀಯ ತನಿಖಾ ದಳಕ್ಕೆ ತನಿಖೆಯನ್ನು ಒಪ್ಪಿಸಬೇಕು. ಇದಲ್ಲದೇ ಈಗಲೂ ಸಹ ಅನೇಕ ಹಿಂದೂ ಕಾರ್ಯಕರ್ತರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಕೂಡಲೇ ಸರ್ಕಾರವು ಉಳಿದ ಹಿಂದೂ ಕಾರ್ಯಕರ್ತರರಿಗೆ ರಕ್ಷಣೆಯನ್ನು ಒದಗಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಕಾರ್ಯದರ್ಶಿ ಮಹೇಶ ನಾಯ್ಕ್ , ತಾಲೂಕ ಅಧ್ಯಕ್ಷ ರೋಹಿದಾಸ್ ಗಾವಡಿ , ಹಿಂದೂ ಜಾಗರಣ ವೇದಿಕೆಯ ಭಾಸ್ಕರ ನಾಯ್ಕ್, ವಿವೇಕ್ ನಾಯ್ಕ್,  ಬಿ ಜೆ ಪಿ ತಾಲೂಕಾಧ್ಯಕ್ಷ ಹೇಮಂತ್ ಗಾವಕರ್, ಕುಮಾರ ಮಾರ್ಕಾಡೆ, ಹಿಂದೂ ಜನಜಾಗೃತಿ ಸಮಿತಿಯ ಸತೀಶ್ ಶೇಟ್, ಸಂದೀಪ್ ಭಂಡಾರಿ, ಗೀತಾ ಶಾನಭಾಗ ಸೇರಿದಂತೆ ಹಲವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next